ಸಮರ್ಪಣೆಯಲ್ಲಿ ಸಾರ್ಥಕತೆ ಇದೆ.ಸಮರ್ಪಣೆಯಿಂದಾಗಿಯೇ ಗುಣ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.ನಶ್ವರವಾದ ಶರೀರವನ್ನು ಶಾಶ್ವತವಾದ ಸಮಾಜಕ್ಕೆ ಅರ್ಪಿಸಿದವರು ಅಮರರಾದರು.ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಸಮಾಜಕ್ಕೆ ಅದನ್ನು ಅರ್ಪಿಸುವುದು ವ್ಯಕ್ತಿತ್ವದ ವಿಕಾಸವೂ ಹೌದು, ಸಾರ್ಥಕ್ಯ ವೂ ಹೌದು
. - ಸ್ವಾಮಿ ವಿವೇಕಾನಂದ
: ಭಕ್ತಿ ಎಂದರೆ ವ್ಯಾಪಾರವಲ್ಲ ,ಅದು ಸಂಪೂರ್ಣ ಆತ್ಮಾರ್ಪಣೆ.ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೆ ನಮ್ಮ ಕೆಲಸ. ಇಂತಹ ಪರಿಪೂರ್ಣ ಆತ್ಮಾರ್ಪಣೆ ಇರುವ ಜನರು ಮಾತ್ರ ಭಗ್ನಾವಶೇಷಗಳಿಂದ ರಾಷ್ಟ್ರವನ್ನು ಭವ್ಯ ಶಿಖರಗಳಿಗೆ ಎತ್ತಬಲ್ಲರು.-
ಪ.ಪೂ.ಶ್ರೀ ಗುರೂಜಿ
ಜನರು ಎಷ್ಟು ಗಳಿಸಿದರು ಎಂಬ ವಿಚಾರ ದೊಡ್ಡದಲ್ಲ,ಎಷ್ಟು ಕೊಟ್ಟರು ಎಂಬುದೇ ಮಹತ್ವದ್ದು.-ಶ್ರೀ ರಾಮಕೃಷ್ಣ ಪರಮಹಂಸ
ನಾವೆಲ್ಲ ಪ್ರಪಂಚಕ್ಕೆ ಋಣಿಗಳು,ಪ್ರಪಂಚ ನಮಗೆ ಏನನ್ನೂ ಕೊಡಬೇಕಾಗಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.ಪ್ರಪಂಚಕ್ಕೆ ಏನನ್ನಾದರೂ ಮಾಡುವುದು ನಮಗೊಂದು ಭಾಗ್ಯ.ಪ್ರಪಂಚಕ್ಕೆ ಸಹಾಯ ಮಾಡಿದರೆ ನಿಜವಾಗಿ ನಾವೇ ಉದ್ಧಾರವಗುವುದು.---
ಸ್ವಾಮಿ ವಿವೇಕಾನಂದ
No comments:
Post a Comment