ಒಂದು ದಿನ ಒಬ್ಬ ಶ್ರೀಮಂತ ಮಾಧ್ಯಮದವರನ್ನ ಅವನ ಮನೆಗೆ ಬರಲು ಹೇಳಿದ.
ಮಾಧ್ಯಮದವರು ಬಂದು ಸೇರಿದರು ಆಗ ಆ ಶ್ರೀಮಂತ ತನ್ನ ಹತ್ತಿರ ಇದ್ದ ಬಿಲಿಯನ್ ಡಾಲರ್ ಕಾರನ್ನು ನಾಳೆ ಗುಂಡಿಯಲ್ಲಿ ಹೂಳುವುದಾಗಿ ತಿಳಿಸುತ್ತಾನೆ.
ಮಾಧ್ಯಮದವರು ಯಾಕೆ ಎಂದು ಕೇಳಿದಾಗ ನನ್ನ ನಂತರ ಇದನ್ನು ಉಪಯೋಗಿಸಲು ಯಾರು ಇಲ್ಲ ಅದಕ್ಕಾಗಿ ಎನ್ನುತ್ತಾರೆ. ಸರಿ ಈಗ ಹೊರಡಿ ನಾಳೆ ಬನ್ನಿ ಎಂದು ಹೇಳಿ ಎಲ್ಲರನ್ನೂ ಕಳುಹಿಸಿದ.
ನಾಳೆ ಆಯಿತು ಮಾಧ್ಯಮದವರೆಲ್ಲ ಬಂದರು ಶ್ರೀಮಂತನ ಮನೆ ಮುಂದೆ ಒಂದು ಗುಂಡಿಯನ್ನು ತೆಗೆಸಲಾಗಿತ್ತು ಅದರ ಮುಂದೆ ಆ ಶ್ರೀಮಂತನ ಬಿಲಿಯನ್ ಡಾಲರ್ ಬೆಲೆ ಬಾಳುವ ಕಾರು ಕೂಡಾ ನೀಲ್ಲಿಸಲಾಗಿತ್ತು.
ಆಗ ಮಾಧ್ಯಮಗಳ ಜೊತೆಗೆ ಬಂದಿದ್ದ ಜನರೆಲ್ಲಾ ಮಾತಾಡಲು ಶುರುಮಾಡಿದರು..
ಇವನಿಗೆ ಹುಚ್ಚು ಹಿಡಿದುಕೊಂಡಿದೆ ಅನಿಸುತ್ತೆ ಅಷ್ಟು ಬೆಲೆ ಬಾಳುವ ಕಾರು ತನಗೆ ಉಪಯೋಗ ಇಲ್ಲ ಅಂದರೆ ಮಾರಾಟ ಮಾಡಲಿ ಇಲ್ಲ ಅಂದರೆ ಯಾರಿಗಾದರೂ ದಾನ ಮಾಡಲಿ ಅಂತ ಮಾತನಾಡತೊಡಗಿದರು...
ಆಗ ಇದನ್ನೆಲ್ಲ ಕೇಳಿದ ಶ್ರೀಮಂತ ಹೇಳುತ್ತಾನೆ
ನಾನು ಈ ಕಾರನ್ನು ಮಣ್ಣಿನಲ್ಲಿ ಮುಚ್ಚಿಹಾಕಿದರೆ ಹುಚ್ಚುತನ ಅದೆ ದಾನ ಮಾಡಿದರೆ ಮಾನವೀಯತೆ ಅಲ್ಲವೇ ಎಂದ ಹಾಗ ಜನರೆಲ್ಲ ಹೌದು ಹೌದು ಎಂದರು...
ಆಗ ಆ ಶ್ರೀಮಂತ ಹೇಳ್ತಾನೆ" ಹಾಗಾದರೆ ನಾನು ಮಾತ್ರ ಅಲ್ಲ ಇಲ್ಲಿ ಎಲ್ಲರೂ ಹುಚ್ಚರೆ ಯಾಕೆ ಗೊತ್ತಾ ಒಬ್ಬ ವ್ಯಕ್ತಿ ಮರಣದ ನಂತರ ಆ ವ್ಯಕ್ತಿಯ ಶವ ಹುಳುವ ಬದಲು ದೇಹ ದಾನ ಮಾಡಿದರೆ ಆ ವ್ಯಕ್ತಿಯ ಎಷ್ಟೋ ಅಂಗಗಳು ಉಪಯೋಗಕ್ಕೆ ಬರುತ್ತವೆ ಅದರಿಂದ ಎಷ್ಟೋ ಜೀವಗಳು ಬದುಕುತ್ತವೆ" ನಾನು ಇವತ್ತು ಈ ಕಾರು ಹೂಳಲು ನಿಮ್ಮನ್ನು ಇಲ್ಲಿ ಕರೆದಿಲ್ಲ....
ನಾನು ನಿಮ್ಮನ್ನು ಕರೆದು ಹೇಳಬಯಸಿದ ವಿಷಯ ನಿಮಗೆ ಅರ್ಥ ಆಗಿದೆ ಅಂದುಕೋಳ್ಳತ್ತೇನೆ ಅಂದ....!!
Saturday, 26 August 2017
Tuesday, 15 August 2017
ಸಿಯಾಚಿನ್...
🇮🇳 20 ಡಿಗ್ರಿಯಲ್ಲಿ
ನಮಗೆ ಚಳಿ ಅನ್ನಿಸುತ್ತದೆ
🇮🇳 16 ಡಿಗ್ರಿಯ
ಚಳಿಯಲ್ಲಿ ನಮಗೆ ಬೆಚ್ಚಗಿನ ಉಡುಗೆ ಧರಿಸಬೇಕು ಅನ್ನಿಸುತ್ತದೆ
🇮🇳 12 ಡಿಗ್ರಿಯ
ಚಳಿಗೆ ತಲೆಗೆ ಟೋಪಿ ಇತ್ಯಾದಿಯನ್ನು ಹಾಕಿಕೊಳ್ಳಬೇಕು
🇮🇳 8 ಡಿಗ್ರಿ
ಚಳಿಯ ನಂತರ ನಾವುಗಳು ನಡುಗಿ ಹೋಗುತ್ತೇವೆ
🇮🇳 4 ಡಿಗ್ರಿ
ಚಳಿಗೆ ಅಡುಗೆ ಮನೆಯನ್ನು ಬಿಟ್ಟು ಹೊರಗೆ ಬರುವುದಿಲ್ಲ
🇮🇳 1 ಡಿಗ್ರಿ
ಚಳಿಗೆ ಮನೆಗಳಲ್ಲಿ ಬೆಂಕಿ ಕಾಯಿಸಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ
🇮🇳 0 ಡಿಗ್ರಿಯ ಮೇಲೆ ನೀರು ಸುರಿಯಲು ಶುರುವಾಗುತ್ತದೆ
🇮🇳ಮೈನಸ್ --1 ಡಿಗ್ರಿಯ
ಚಳಿಗೆ ನಮ್ಮ ಬಾಯಿಂದ ಬರುವ ಮಾತುಗಳು ತೊದಲಲೂ ಶುರುವಾಗುತ್ತದೆ
🇮🇳 --5 ಡಿಗ್ರಿ
ಚಳಿಯ ಮೇಲೆ .......
🇮🇳 --10 ಡಿಗ್ರಿ
ಚಳಿಯ ಮೇಲೆ ….....
🇮🇳 -- 15 ಡಿಗ್ರಿ
ಚಳಿಯ ಮೇಲೆ ಸ್ವಲ್ಪ ಯೋಚಿಸಿ …...........
🇮🇳ಮೈನಸ್ -- 20 ಡಿಗ್ರಿಯ ಚಳಿಯ ಮೇಲೆ ಸಿಯಾಚಿನ್ ನಲ್ಲಿ ನಮ್ಮ ದೇಶದ ವೀರ ಸೈನಿಕರು ನಮ್ಮ ದೇಶದ ಗಡಿಯನ್ನು ಕಾಯುತ್ತಾರೆ ರಕ್ಷಣೆ ಮಾಡುತ್ತಾರೆ ...........
🇮🇳 ಸಂಪೂರ್ಣ ತನ್ನ ಶಕ್ತಿಯ ಜೊತೆಗೆ
7-12 ಕೆಜಿಯ ಬಂದೂಕು ಮತ್ತು
ಹತ್ತಿರ ಹತ್ತಿರ 20 ಕೆಜಿಯ ಸರಕುಗಳನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡು ಮೊಳಕಾಲಿನವರೆಗೂ ಇರುವ ಹಿಮದ ಗಡ್ಡೆಯಲ್ಲಿ ನಡೆಯುತ್ತಾರೆ
🇮🇳 ಏಕೆಂದರೆ ನಾವೆಲ್ಲರೂ ನಮ್ಮ
ಸ್ವಾತಂತ್ರ್ಯದ ಆನಂದವನ್ನು
ಅನುಭವಿಸಲಿ ಅಂತ ………........
…………….........…!!!!!!!!
🇮🇳 ಏಕೆಂದರೆ ನಾವೆಲ್ಲರೂ ನಮ್ಮ ಕುಟುಂಬದ ಜೊತೆಗೆ ಕ್ರಿಕೆಟ್ ಪಂದ್ಯದ ಆನಂದವನ್ನು ನೋಡಲು
…….......
........................... .!!!!!!!!!
🇮🇳 ಏಕೆಂದರೆ ನಮ್ಮ ಮಕ್ಕಳು ಶಾಂತಿಯ ಜೊತೆಗೆ ಶಾಲೆಗೆ ಹೋಗಲಿ ಅಂತ …..
🇮🇳 ದಯವಿಟ್ಟು ಅವಶ್ಯಕವಾಗಿ ಇಂತಹ ಒಂದು ಸಂದೇಶವನ್ನು ನಮ್ಮ ಭಾರತೀಯ ವೀರ ಸೈನಿಕರಿಗಾಗಿ ಶೇರ್ ಮಾಡಿ
🇮🇳 ಈ ದಿನ ಚಲನಚಿತ್ರ ನಟರು ಕ್ರಿಕೆಟಿಗರಿಗೆ ಕೊಡುವಂತಹ ಒಂದು ಅಭಿಮಾನ ಪ್ರೀತಿ ನಮ್ಮ ದೇಶದ ಸೈನಿಕರಿಗೆ ಕೊಡಿ
_______________________
🇮🇳 ದಯವಿಟ್ಟು ಭಾರತೀಯರು ಆಗಿ … I _______________________
🇮🇳 ನಮ್ಮ ದೇಶವನ್ನು ಪ್ರೀತಿಸಿ
_______________________
🇮🇳 ಈ ಒಂದು ಸಂದೇಶವನ್ನು ಆ ಒಂದು ಸೈನಿಕರ ಹೆಸರು ಏನೂ ಅಂತ ಸಹ ನಮಗೆ ಗೊತ್ತಿಲ್ಲ ಆದರೆ ಹಗಲು ರಾತ್ರಿ ನಮಗಾಗಿ ತನ್ನ ಪ್ರಾಣವನ್ನು ಒತ್ತೆ �ಇಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ
ಜೈಹಿಂದ್
ವಂದೇ ಮಾತರಂ
ಜೈಜವಾನ್
ಜೈ ಕಿಸಾನ್
ಭಾರತ್ ಮಾತಾಕೀ ಜೈ
_______________🇮🇳🇮🇳🇮🇳🇮🇳🇮🇳🇮🇳🇮🇳

_______________🇮🇳🇮🇳🇮🇳🇮
ಒಂದು ಕಲ್ಲು ಎಸದಿದ್ದರೂ ಸಾಕಿತ್ತು...
ಭಾರತೀಯರು ಒಂದೊಂದು ಕಲ್ಲು ತೆಗೆದು ಬೀಸಿದ್ದರೂ ಭಾರತದ ಇತಿಹಾಸವೇ ಬದಲಾಗಬಹುದಿತ್ತಾ?!
ಅವನೊಬ್ಬ ಮೀರ್ ಜಾಫರ್!
23ನೇ ಜೂನ್ 1757.. ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯ. ಭಾರತೀಯ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಬದಲಾಯಿಸಿದ ದಿನ. 1857 ನೇ ಇಸವಿಯಂದು ಪ್ರಥಮ ಸ್ವಾತಂತ್ರ್ಯಸಂಗ್ರಾಮ ನಡೆಯಿತೆಂದು ಹೇಳುತ್ತೇವೆ.. ಆದರೆ ಪ್ರಥಮವಾಗಿ ಬ್ರಿಟಿಷರನ್ನು ದೇಶದಿಂದ ಮುಕ್ತಿಗೊಳಿಸಬೇಕು, ಅವರನ್ನು ಈ ದೇಶದಲ್ಲಿರಲು ಬಿಡಲೇಬಾರದೆಂದು ಹೋರಾಡಿದವ ಬಂಗಾಳದ ನವಾಬ ಸಿರಾಜುದ್ದೌಲ.
ನಿಮಗೆಲ್ಲಾ ಅರಿವಿರುವಂತೆ 1757 ರಲ್ಲಿ ಪ್ಲಾಸೀ ಕದನವು ನಡೆಯಿತು. ಬ್ರಿಟೀಷ್ ಅಧಿಕಾರಿ ರೋಬರ್ಟ್ ಕ್ಲೈವ್ ಹಾಗೂ ಸಿರಾಜುದ್ದೌಲ ನ ನಡುವೆ. ಬಂಗಾಳದ ನವಾಬನ ಕಡೆ ಹದಿನೆಂಟು ಸಾವಿರದಷ್ಟು ಸಂಖ್ಯೆ ಯಷ್ಟು ಸೈನಿಕರು. ಕ್ಲೈವ್ ಕಡೆ ಇದ್ದುದು ಕೇವಲ ಮುನ್ನೂರು..! ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆತ ತನ್ನ ಈಸ್ಟ್ ಇಂಡಿಯಾ ಕಂಪೆನಿಗೆ ಪತ್ರವೋಂದನ್ನು ರವಾನಿಸುತ್ತಾನೆ.
” ಸರ್, ಇಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಸದ್ಯಕ್ಕೆ ಸಿರಾಜುದ್ದೌಲನನ್ನು ಸೋಲಿಸುವ ಲಕ್ಷಣಗಳಾವುವೂ ನನಗೆ ಗೋಚರಿಸುತ್ತಿಲ್ಲ. ಹಾಗೇನಾದರೂ ನಾವು ಹುಂಬತನಗಿಂದ ನುಗ್ಗಿದ್ದೇ ಆದಲ್ಲಿ ಯುದ್ಧ ನಡೆದ ಒಂದೇ ಘಂಟೆಯ ಅವಧಿಯಲ್ಲಿ ನಾವೆಲ್ಲರೂ ನವಾಬನ ಮುಂದೆ ಶರಣಾಗಬೇಕಾಗುತ್ತದೆ. ಆದ್ದರಿಂದ ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಕಳುಹಿಸುವ ವ್ಯವಸ್ಥೆ ಮಾಡಿ”. ಆದರೆ ಬ್ರಿಟಿಷ್ ಪಾರ್ಲಿಮೆಂಟು ಈತನ ವಿನಂತಿಯನ್ನು ತಳ್ಳಿಹಾಕುತ್ತದೆ.
ಆತ ಬರೆದ ಪತ್ರಕ್ಕೆ ಉತ್ತರವಾಗಿ, ” ಮಿಸ್ಟರ್ ಕ್ಲೈವ್, ಈಗಾಗಲೇ ನಮ್ಮದೊಂದು ಬೃಹತ್ ಸೈನ್ಯ ಫಿರಂಗಿ ವಿರುದ್ಧ ಫ್ರಾನ್ಸ್ ನಲ್ಲಿ ಕಾದಾಡುತ್ತಿದೆ. ಈ ನೆಪೋಲಿಯನ್ ಎಂಬ ಮನುಷ್ಯ ಹುಳ ನೊರೆದಂತೆ ನಮ್ಮ ಸೈನ್ಯವನ್ನು ನೊರೆದು ಹಾಕುತ್ತಿದ್ದಾನೆ. ಇಂಥ ಸಮಯದಲ್ಲಿ ನೀನು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಕೇಳಿದರೆ ಎಲ್ಲಿಂದ ತರೋದು? ಇದ್ದುದರಲ್ಲೇ ಸಂಭಾಳಿಸು. ಆ ನವಾಬನ ಕಡೆ ಯಾವುದಾದರೂ ಕೊರತೆ ಇದೆಯಾ ನೋಡು ” ಎಂಬುದಾಗಿ ಪ್ರತ್ಯುತ್ತರ ಬರುತ್ತದೆ.
ಇನ್ನು ಕಂಪೆನಿಯಿಂದ ಯಾವುದೇ ರೀತಿಯ ಸಹಾಯ ದೊರಕದೆಂದು ನಿಶ್ಚಯಿಸಿದ ಕ್ಲೈವ್ ನವಾಬನಲ್ಲಿರುವ ಕೊರತೆಗಳ ಕುರಿತಾಗಿ ಚಿಂತಿಸುತ್ತಾನೆ. ಆಗ ಸಿಕ್ಕಿದವನೇ ಮೀರ್ ಜಾಫರ್…! ಆತ ಸಿರಾಜುದ್ದೌಲ್ಲನ ಸೇನಾಧಿಪತಿ. ಅಧಿಕಾರಕ್ಕಾಗಿ ಎಂತಹ ಚರಂಡಿಯ್ಲೂ ನಾಲಿಗೆ ಚಾಚುವಷ್ಟು ಅಧ:ಪತನಕ್ಕಿಳಿದ ಆಸಾಮಿ ಆತ. ಕ್ಲೈವ್ ಮೀರ್ ಜಾಫರ್ ನನ್ನು ಬಂಗಾಳದ ನವಾಬಬನ್ನಾಗಿ ಮಾಡುವ ಆಸೆ ಹುಟ್ಟಿಸುತ್ತಾನೆ. ಆಗ ತನ್ನನ್ನು ತಾನು ಈಸ್ಟ್ ಇಂಡಿಯಾ ಕಂಪೆನಿಗೆ ಮಾರಿಕೊಂಡ ಮೀರ್ ಜಾಫರ್, ನವಾಬನ ಸೈನ್ಯದ ಅಷ್ಟೂ ರಹಸ್ಯವನ್ನು ಕ್ಲೈವ್ ಗೆ ರವಾನಿಸುತ್ತಾನೆ.
23ನೇ ಜೂನ್ 1757 ರಂದು ನಡೆದ ಪ್ಲಾಸೀ ಕದನದಲ್ಲಿ ಮುನ್ನೂರು ಸಂಖ್ಯೆಯಲ್ಲಿದ್ದ ಫಿರಂಗಿಗಳ ಮುಂದೆ ಹದಿನೆಂಟು ಸಾವಿರದಷ್ಟಿದ್ದ ನವಾಬನ ಸೇನೆ ಶರಣಾಗುತ್ತದೆ. ಯುದ್ಧ ಪ್ರಾರಂಭವಾಗಿ ಕೇವಲ ನಲವತ್ತು ನಿಮಿಷವಾಗುವಷ್ಟರಲ್ಲೇ ಶರಣಾಗುವಂತೆ ಇದೇ ಮೀರ್ ಜಾಫರ್ ಆಜ್ಞಾಪಿಸುತ್ತಾನೆ. ಮುಂದೆ ಅದೇ ಕಲ್ಕತ್ತಾದ ಪೋರ್ಟ್ ವಿಲಿಯಮ್ ನಲ್ಲಿ ಹತ್ತದಿನಗಳ ಕಾಲ ಉಪವಾಸ ಕೆಡವಿದ ಕ್ಲೈವ್ ಹನ್ನೊಂದನೆಯ ದಿವಸ ಅಷ್ಟೂ ಜನರನ್ನು ಒಟ್ಟಿಗೆ ಸಿರಾಜುದ್ದೌಲನನ್ನೂ ನಿರ್ದಯತೆಯಿಂದ ಹತ್ಯೆ ಮಾಡಿಸುತ್ತಾನೆ. ಆದರೆ ಒಬ್ಬ ಮೀರ್ ಜಾಫರ್ ನನ್ನು ಬಿಟ್ಟು..
ನಮ್ಮ ದೇಶದ ದುರಂತವೇನು ಗೊತ್ತಾ?? ಹಾಗೆ ಕ್ಲೈವ್ ನಿಂದ ಹತ್ಯೆಯಾದ ಬಂಗಾಳದ ನವಾಬ ಬ್ರಿಟಿಷರ ಕಟ್ಟರ್ ವಿರೋಧಿಯಾಗಿದ್ದ. ಮೀರ್ ಜಾಫರ್ ನನ್ನು ನಂಬಿ ಸರ್ವನಾಶವಾಗಿ ಹೋದ. ಅದೇ ಸಂತತಿ ಈಗಲೂ ಮುಂದುವರೆದಿದೆ. ದೇಶಕ್ಕೆ ದ್ರೋಹ ಬಗೆಯುವುದೇ ಅವರ ಕಾಯಕವಾಗಿದೆ.
ಒಂದು ವಿಚಾರವಂತೂ ಸತ್ಯ. ಆ ಮೀರ್ ಜಾಫರ್ ಗೆ ಬರೀ ಕುರ್ಚಿ ಬೇಕಿತ್ತು. ಆದರೆ ಇವತ್ತಿನ ಮೀರ್ ಜಾಫರ್ ಗಳಿಗೆ ಕುರ್ಚಿಯೂ ಬೇಕು, ಹಣವೂ ಬೇಕು.
ಯುದ್ದ ಗೆದ್ದ ದಿನ ರಾತ್ರಿ ತನ್ನ ಡೈರಿಯಲ್ಲಿ ಕ್ಲೈವ್ ಬರೀತಾನೆ. ” ಇವತ್ತು ಯುದ್ಧ ಗೆದ್ದ ಖುಷಿಯಲ್ಲಿ ನಾನು ಕುದುರೆಯ ಮೇಲೆ ಹೊರಟಿದ್ದರೆ, ನನ್ನ ಹಿಂದೆ ಮುನ್ನೂರು ಜನ ಸೈನಿಕರ ದಂಡು ಬರುತ್ತಿತ್ತು. ಆ ಸಮಯದಲ್ಲಿ ಲಕ್ಷಾಂತರ ಜನ ಕಲ್ಕತ್ತಾದಿಂದ ಮುರ್ಷಿದಾಬಾದ್ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ನಮ್ಮನ್ನು ನೋಡಿ ಭಯ-ಭಕ್ತಿಯಿಂದ ಚಪ್ರಾಳೆ ತಟ್ಟುತ್ತಿದ್ದರು. ಈ ಮೂರ್ಖರು ಆಗ ಬೇರೇನೂ ಮಾಡಬೇಕಾಗಿರಲಿಲ್ಲ; ಬರೀ ಒಂದೊಂದು ಕಲ್ಲನ್ನು ಎತ್ತಿ ನಮ್ಮ ಕಡೆ ಬಿಸಾಕಿದ್ದರೆ ಸಾಕಿತ್ತು; ಭಾರತದ ಇತಿಹಾಸವೇ ಬದಲಾಗುತ್ತಿತ್ತು !” ಈ ವಿಚಾರವನ್ನು ರಾಜೀವ್ ದೀಕ್ಷಿತರು ಅನೇಕ ಬಾರಿ ಉಲ್ಲೇಖವನ್ನೂ ಮಾಡಿದ್ದರು.
ಈಗ ಹೇಳಿ.. ಪ್ರಸ್ತುತ ನಮ್ಮಲ್ಲಿ ಕಲ್ಲಿದೆ. ಹೊಡೆಯುವುದು ಯಾರಿಗೆ?? ಇಂಥವರ ಮಧ್ಯೆ ಬದುಕುತ್ತಿರುವ ನಾವು ಯಾರನ್ನು ನಂಬುವುದು?? ನನ್ನನ್ನು ಕಾಡುವ ಯಕ್ಷಪ್ರಶ್ನೆಯಿದು…!
– ವಸಿಷ್ಠ.
Sunday, 6 August 2017
ಸಿಯಾಚಿನ್...
🇮🇳 20 ಡಿಗ್ರಿಯಲ್ಲಿ
ನಮಗೆ ಚಳಿ ಅನ್ನಿಸುತ್ತದೆ
🇮🇳 16 ಡಿಗ್ರಿಯ
ಚಳಿಯಲ್ಲಿ ನಮಗೆ ಬೆಚ್ಚಗಿನ ಉಡುಗೆ ಧರಿಸಬೇಕು ಅನ್ನಿಸುತ್ತದೆ
🇮🇳 12 ಡಿಗ್ರಿಯ
ಚಳಿಗೆ ತಲೆಗೆ ಟೋಪಿ ಇತ್ಯಾದಿಯನ್ನು ಹಾಕಿಕೊಳ್ಳಬೇಕು
🇮🇳 8 ಡಿಗ್ರಿ
ಚಳಿಯ ನಂತರ ನಾವುಗಳು ನಡುಗಿ ಹೋಗುತ್ತೇವೆ
🇮🇳 4 ಡಿಗ್ರಿ
ಚಳಿಗೆ ಅಡುಗೆ ಮನೆಯನ್ನು ಬಿಟ್ಟು ಹೊರಗೆ ಬರುವುದಿಲ್ಲ
🇮🇳 1 ಡಿಗ್ರಿ
ಚಳಿಗೆ ಮನೆಗಳಲ್ಲಿ ಬೆಂಕಿ ಕಾಯಿಸಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ
🇮🇳 0 ಡಿಗ್ರಿಯ ಮೇಲೆ ನೀರು ಸುರಿಯಲು ಶುರುವಾಗುತ್ತದೆ
🇮🇳ಮೈನಸ್ --1 ಡಿಗ್ರಿಯ
ಚಳಿಗೆ ನಮ್ಮ ಬಾಯಿಂದ ಬರುವ ಮಾತುಗಳು ತೊದಲಲೂ ಶುರುವಾಗುತ್ತದೆ
🇮🇳 --5 ಡಿಗ್ರಿ
ಚಳಿಯ ಮೇಲೆ .......
🇮🇳 --10 ಡಿಗ್ರಿ
ಚಳಿಯ ಮೇಲೆ ….....
🇮🇳 -- 15 ಡಿಗ್ರಿ
ಚಳಿಯ ಮೇಲೆ ಸ್ವಲ್ಪ ಯೋಚಿಸಿ …...........
🇮🇳ಮೈನಸ್ -- 20 ಡಿಗ್ರಿಯ ಚಳಿಯ ಮೇಲೆ ಸಿಯಾಚಿನ್ ನಲ್ಲಿ ನಮ್ಮ ದೇಶದ ವೀರ ಸೈನಿಕರು ನಮ್ಮ ದೇಶದ ಗಡಿಯನ್ನು ಕಾಯುತ್ತಾರೆ ರಕ್ಷಣೆ ಮಾಡುತ್ತಾರೆ ...........
🇮🇳 ಸಂಪೂರ್ಣ ತನ್ನ ಶಕ್ತಿಯ ಜೊತೆಗೆ
7-12 ಕೆಜಿಯ ಬಂದೂಕು ಮತ್ತು
ಹತ್ತಿರ ಹತ್ತಿರ 20 ಕೆಜಿಯ ಸರಕುಗಳನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡು ಮೊಳಕಾಲಿನವರೆಗೂ ಇರುವ ಹಿಮದ ಗಡ್ಡೆಯಲ್ಲಿ ನಡೆಯುತ್ತಾರೆ
🇮🇳 ಏಕೆಂದರೆ ನಾವೆಲ್ಲರೂ ನಮ್ಮ
ಸ್ವಾತಂತ್ರ್ಯದ ಆನಂದವನ್ನು
ಅನುಭವಿಸಲಿ ಅಂತ ………........
…………….........…!!!!!!!!
🇮🇳 ಏಕೆಂದರೆ ನಾವೆಲ್ಲರೂ ನಮ್ಮ ಕುಟುಂಬದ ಜೊತೆಗೆ ಕ್ರಿಕೆಟ್ ಪಂದ್ಯದ ಆನಂದವನ್ನು ನೋಡಲು
…….......
........................... .!!!!!!!!!
🇮🇳 ಏಕೆಂದರೆ ನಮ್ಮ ಮಕ್ಕಳು ಶಾಂತಿಯ ಜೊತೆಗೆ ಶಾಲೆಗೆ ಹೋಗಲಿ ಅಂತ …..
🇮🇳 ದಯವಿಟ್ಟು ಅವಶ್ಯಕವಾಗಿ ಇಂತಹ ಒಂದು ಸಂದೇಶವನ್ನು ನಮ್ಮ ಭಾರತೀಯ ವೀರ ಸೈನಿಕರಿಗಾಗಿ ಶೇರ್ ಮಾಡಿ
🇮🇳 ಈ ದಿನ ಚಲನಚಿತ್ರ ನಟರು ಕ್ರಿಕೆಟಿಗರಿಗೆ ಕೊಡುವಂತಹ ಒಂದು ಅಭಿಮಾನ ಪ್ರೀತಿ ನಮ್ಮ ದೇಶದ ಸೈನಿಕರಿಗೆ ಕೊಡಿ
_______________________
🇮🇳 ದಯವಿಟ್ಟು ಭಾರತೀಯರು ಆಗಿ … I _______________________
🇮🇳 ನಮ್ಮ ದೇಶವನ್ನು ಪ್ರೀತಿಸಿ
_______________________
🇮🇳 ಈ ಒಂದು ಸಂದೇಶವನ್ನು ಆ ಒಂದು ಸೈನಿಕರ ಹೆಸರು ಏನೂ ಅಂತ ಸಹ ನಮಗೆ ಗೊತ್ತಿಲ್ಲ ಆದರೆ ಹಗಲು ರಾತ್ರಿ ನಮಗಾಗಿ ತನ್ನ ಪ್ರಾಣವನ್ನು ಒತ್ತೆ �ಇಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ
ಜೈಹಿಂದ್
ವಂದೇ ಮಾತರಂ
ಜೈಜವಾನ್
ಜೈ ಕಿಸಾನ್
ಭಾರತ್ ಮಾತಾಕೀ ಜೈ
_______________🇮🇳🇮🇳🇮🇳🇮🇳🇮🇳🇮🇳🇮🇳
🇮🇳 ದಯವಿಟ್ಟು ಭಾರತೀಯರು ಆಗಿ … I _______________________
🇮🇳 ನಮ್ಮ ದೇಶವನ್ನು ಪ್ರೀತಿಸಿ
_______________________
🇮🇳 ಈ ಒಂದು ಸಂದೇಶವನ್ನು ಆ ಒಂದು ಸೈನಿಕರ ಹೆಸರು ಏನೂ ಅಂತ ಸಹ ನಮಗೆ ಗೊತ್ತಿಲ್ಲ ಆದರೆ ಹಗಲು ರಾತ್ರಿ ನಮಗಾಗಿ ತನ್ನ ಪ್ರಾಣವನ್ನು ಒತ್ತೆ �ಇಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ
ಜೈಹಿಂದ್
ವಂದೇ ಮಾತರಂ
ಜೈಜವಾನ್
ಜೈ ಕಿಸಾನ್
ಭಾರತ್ ಮಾತಾಕೀ ಜೈ
_______________🇮🇳🇮🇳🇮🇳🇮
-
ಆದಿ ಶಂಕರಾಚಾರ್ಯ ವಿರಚಿತ ಭಜ ಗೋವಿಂದಂ ---- ಗದ್ಯಾರ್ಥ ಸಹಿತ *ಸ್ವಲ್ಪ ದೀರ್ಘವಾಗಿದೆ. ಆದರೆ ಜೀವನದಲ್ಲಿ ಒಮ್ಮೆ ಓದಲೇ ಬೇಕಾದಂಥ ಪವಿತ್ರ ಕೃತಿ. ಒಮ್ಮೆ ಓದಿ ಬಿಡಿ ಸ...
-
ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ. - ಪರಮ ಪೂಜನೀಯ ಡಾಕ್ಟರ್ಜಿ ಕಾರ್ಯವೊಂದರ ಗುರ...
-
ಸಮರ್ಪಣೆಯಲ್ಲಿ ಸಾರ್ಥಕತೆ ಇದೆ.ಸಮರ್ಪಣೆಯಿಂದಾಗಿಯೇ ಗುಣ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.ನಶ್ವರವಾದ ಶರೀರವನ್ನು ಶಾಶ್ವತವಾದ ಸಮಾಜಕ್ಕೆ ಅರ್ಪಿಸಿದವರು ಅಮರರಾದ...