Thursday, 5 October 2017

ಏಕಾತ್ಮತಾ ಸ್ಥೋತ್ರ

ಏಕಾತ್ಮತಾ ಸ್ತೋತ್ರ

ಓಂ ಸಚ್ಚಿದಾನಂದರೂಪಾಯ ನಮೋಸ್ತು ಪರಮಾತ್ಮನೇ |
ಜ್ಯೋತಿರ್ಮಯಸ್ವರೂಪಾಯ ವಿಶ್ವಮಾಂಗಲ್ಯಮೂರ್ತಯೇ ||೧||

ಪ್ರಕೃತಿಃ ಪಂಚಭೂತಾನಿ ಗ್ರಹಾ ಲೋಕಾಃ ಸ್ವರಾಸ್ತಥಾ |
ದಿಶಃ ಕಾಲಶ್ಚಸರ್ವೇಷಾಂ ಸದಾ ಕುರ್ವಂತು ಮಂಗಲಮ್ ||೨||

ರತ್ನಾಕರಧೌತಪದಾಂ ಹಿಮಾಲಯ ಕಿರೀಟಿನೀಮ್ |
ಬ್ರಹ್ಮರಾಜರ್ಷಿರತ್ನಾಢ್ಯಾಂ ವಂದೇ ಭಾರತಮಾತರಮ್ ||೩||

ಮಹೇಂದ್ರೋ ಮಲಯಃ ಸಹ್ಯೋ ದೇವತಾತ್ಮಾ ಹಿಮಾಲಯಃ |
ಧ್ಯೇಯೋ ರೈವತಕೋ ವಿಂಧ್ಯೋ ಗಿರಿಶ್ಚಾರಾವಲಿಸ್ತಥಾ ||೪||

ಗಂಗಾ ಸರಸ್ವತೀ ಸಿಂಧುರ್ ಬ್ರಹ್ಮಪುತ್ರಶ್ಚ ಗಂಡಕೀ |
ಕಾವೇರೀ ಯಮುನಾ ರೇವಾ ಕೃಷ್ಣಾ ಗೋದಾ ಮಹಾನದೀ ||೫||

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವಂತಿಕಾ |
ವೈಶಾಲೀ ದ್ವಾರಿಕಾ ಧ್ಯೇಯಾ ಪುರೀ ತಕ್ಷಶಿಲಾ ಗಯಾ ||೬||

ಪ್ರಯಾಗಃ ಪಾಟಲೀಪುತ್ರಂ ವಿಜಯಾನಗರಂ ಮಹತ್ |
ಇಂದ್ರಪ್ರಸ್ಥಂ ಸೋಮನಾಥಃ ತಥಾಽಮೃತಸರಃ ಪ್ರಿಯಮ್ ||೭||

ಚತುರ್ವೇದಾಃ ಪುರಾಣಾನಿ ಸರ್ವೋಪನಿಷದಸ್ತಥಾ |
ರಾಮಾಯಣಂ ಭಾರತಂ ಚ ಗೀತಾ ಸದ್ದರ್ಶನಾನಿ ಚ ||೮||

ಜೈನಾಗಮಾಸ್ತ್ರಿಪಿಟಕಾ ಗುರುಗ್ರಂಥಃ ಸತಾಂ ಗಿರಃ |
ಏಷ ಜ್ಞಾನನಿಧಿಃ ಶ್ರೇಷ್ಠಃ ಶ್ರದ್ಧೇಯೋ ಹೃದಿ ಸರ್ವದಾ ||೯||

ಅರುಂಧತ್ಯನಸೂಯಾ ಚ ಸಾವಿತ್ರೀ ಜಾನಕೀ ಸತೀ |
ದ್ರೌಪದೀ ಕಣ್ಣಗೀ ಗಾರ್ಗೀ ಮೀರಾ ದುರ್ಗಾವತೀ ತಥಾ ||೧೦||

ಲಕ್ಷ್ಮೀರಹಲ್ಯಾ ಚನ್ನಮ್ಮಾ ರುದ್ರಮಾಂಬಾ ಸುವಿಕ್ರಮಾ |
ನಿವೇದಿತಾ ಸಾರದಾ ಚ ಪ್ರಣಮ್ಯಾ ಮಾತೃದೇವತಾಃ ||೧೧||

ಶ್ರ‍ೀರಾಮೋ ಭರತಃ ಕೃಷ್ಣೋ ಭೀಷ್ಮೋ ಧರ್ಮಸ್ತಥಾರ್ಜುನಃ |
ಮಾರ್ಕಂಡೇಯೋ ಹರಿಶ್ಚಂದ್ರಃ ಪ್ರಹ್ಲಾದೋ ನಾರದೋ ಧ್ರುವಃ ||೧೨||

ಹನುಮಾಞ್ಜನಕೋ ವ್ಯಾಸೋ ವಸಿಷ್ಠಶ್ಚ ಶುಕೋ ಬಲಿಃ |
ಧಧೀಚಿವಿಶ್ವಕರ್ಮಾಣೌ ಪೃಥುವಾಲ್ಮೀಕಿಭಾರ್ಗವಾಃ ||೧೩||

ಭಗೀರಥಶ್ಚೈಕಲವ್ಯೋ ಮನುರ್ಧನ್ವಂತರಿಸ್ತಥಾ |
ಶಿಬಿಸ್ಚರಂತಿದೇವಶ್ಚ ಪುರಾಣೋದ್ಗೀತಕೀರ್ತಯಃ ||೧೪||

ಬುದ್ಧಾ ಜಿನೇಂದ್ರಾ ಗೋರಕ್ಷಃ ಪಾಣಿನಿಶ್ಚ ಪತಂಜಲಿಃ |
ಶಂಕರೋ ಮಧ್ವನಿಂಬಾರ್ಕೌ ಶ್ರೀರಾಮಾನುಜವಲ್ಲಭೌ ||೧೫||

ಝೂಲೇಲಾಲೋಽಥ ಚೈತನ್ಯಃ ತಿರುವಲ್ಲುವರಸ್ತಥಾ |
ನಾಯನ್ಮಾರಾಲವಾರಾಶ್ಚ ಕಂಬಶ್ಚ ಬಸವೇಶ್ವರಃ ||೧೬||

ದೇವಲೋ ರವಿದಾಸಶ್ಚ ಕಬೀರೋ ಗುರುನಾನಕಃ
ನರಸಿಸ್ತುಲಸೀದಾಸೋ ದಶಮೇಶೋ ದೃಢವ್ರತಃ ||೧೭||

ಶ್ರ‍ೀಮತ್ ಶಂಕರದೇವಶ್ಚ ಬಂಧೂ ಸಾಯಣಮಾಧವೌ |
ಜ್ಞಾನೇಶ್ಚರಸ್ತುಕಾರಾಮೋ ರಾಮದಾಸಃ ಪುರಂದರಃ ||೧೮||

ಬಿರಸಾ ಸಹಜಾನಂದೋ ರಾಮಾನಂದಾಸ್ತಥಾ ಮಹಾನ್ |
ವಿತರಂತು ಸದೈವೈತೇ ದೈವೀಂ ಸದ್ಗುಣಸಂಪದಮ್ ||೧೯||

ಭರತರ್ಷಿಃ ಕಾಲಿದಾಸಃ ಶ್ರೀಭೋಜೋ ಜಕಣಸ್ತಥಾ |
ಸೂರದಾಸಸ್ತ್ಯಾಗರಾಜೋ ರಸಖಾನಶ್ಚಸಕವಿಃ ||೨೦||

ರವಿವರ್ಮಾ ಭಾತಖಂಡೇ ಭಾಗ್ಯಚಂದ್ರಃ ಭೂಪತಿಃ |
ಕಲಾವಂತಶ್ಚವಿಖ್ಯಾತಾಃ ಸ್ಮರಣೀಯಾ ನಿರಂತರಮ್ ||೨೧||

ಅಗಸ್ತ್ಯಃ ಕಂಬುಕೌಂಡಿನ್ಯೌ ರಾಜೇಂದ್ರಶ್ಚೋಲವಂಶಜಃ |
ಅಶೋಕಃ ಪುಷ್ಯಮಿತ್ರಶ್ಚ ಖಾರವೇಲಃ ಸುನೀತಿಮಾನ್ ||೨೨||

ಚಾಣಕ್ಯ ಚಂದ್ರಗುಪ್ತೌಚ ವಿಕ್ರಮಃ ಶಾಲಿವಾಹನಃ |
ಸಮುದ್ರಗುಪ್ತಃ ಶ್ರೀಹರ್ಷಃ ಶೈಲೇಂದ್ರೋ ಬಪ್ಪರಾವಲಃ ||೨೩||

ಲಾಚಿದ್ ಭಾಸ್ಕರವರ್ಮಾ ಚ ಯಶೋಧರ್ಮಾ ಚ ಹೂಣಜಿತ್ |
ಶ್ರೀಕೃಷ್ಣದೇವರಾಯಶ್ಚ ಲಲಿತಾದಿತ್ಯ ಉದ್ಭಲಃ ||೨೪||

ಮುಸುನೂರಿನಾಯಕೌ ತೌ ಪ್ರತಾಪಃ ಶಿವಭೂಪತಿಃ |
ರಣಜಿತ್‍ಸಿಂಹ ಇತ್ಯೇತೇ ವೀರಾ ವಿಖ್ಯಾತವಿಕ್ರಮಾಃ ||೨೫||

ವೈಜ್ಞಾನಿಕಾಶ್ಚಕಪಿಲಃ ಕಣಾದಃ ಸುಶ್ರುತಸ್ತಥಾ |
ಚರಕೋ ಭಾಸ್ಕರಾಚಾರ್ಯೋ ವರಾಹಮಿಹಿರಃ ಸುಧೀ ||೨೬||

ನಾಗಾರ್ಜುನೋ ಭರದ್ವಾಜ ಆರ್ಯಭಟ್ಟೋ ಬಸುರ್ಬುಧಃ |
ಧ್ಯೇಯೋ ವೇಂಕಟರಾಮಶ್ಚ ವಿಜ್ಞಾರಾಮಾನುಜಾದಯಃ ||೨೭||

ರಾಮಕೃಷ್ಣೋ ದಯಾನಂದೋ ರವೀಂದ್ರೋ ರಾಮಮೋಹನಃ |
ರಾಮತೀರ್ಥೋಽರವಿಂದಶ್ಚ ವಿವೇಕಾನಂದ ಉದ್ಯಶಾಃ ||೨೮||

ದಾದಾಭಾಯಿ ಗೋಪಬಂಧುಃ ತಿಲಕೋ ಗಾಂಧಿರಾದೃತಾಃ |
ರಮಣೋ ಮಾಲವೀಯಶ್ಚಶ್ರ‍ೀ ಸುಬ್ರಹ್ಮಣ್ಯಭಾರತೀ ||೨೯||

ಸುಭಾಷಃ ಪ್ರಣವಾನಂದಃ ಕ್ರಾಂತಿವೀರೋ ವಿನಾಯಕಃ |
ಠಕ್ಕರೋ ಭೀಮರಾವಶ್ಚ ಪುಲೇ ನಾರ‍ಾಯಣೋ ಗುರುಃ ||೩೦||

ಅನುಕ್ತಾ ಯೇ ಭಕ್ತಾಃ ಪ್ರಭುಚರಣಸಂಸಕ್ತಹೃದಯಾಃ |
ಅನಿರ್ಧಿಷ್ಠಾ ವೀರಾ ಅಧಿಸಮರಮುದ್ಧ್ವಸ್ತರಿಪವಃ |
ಸಮಾಜೋದ್ಧರ್ತಾರಃ ಸುಹಿತಕರವಿಜ್ಞಾನನಿಪುಣಾಃ |
ನಮಸ್ತೇಭ್ಯೋ ಭೂಯಾತ್ ಸಕಲಸುಜನೇಭ್ಯಃ ಪ್ರತಿದಿನಮ್ ||೩೨||

ಇದಮೇಕಾತ್ಮತಾಸ್ತೋತ್ರಂ ಶ್ರದ್ಧಯಾ ಯಃ ಸದಾ ಪಠೇತ್ |
ಸರಾಷ್ಟ್ರ ಧರ್ಮನಿಷ್ಠಾವಾನ್ ಅಖಂಡಂ ಭಾರತಂ ಸ್ಮರೇತ್ ||೩೩||

ಭಾರತಮಾತಾ ಕೀ ಜಯ್

Monday, 2 October 2017

ಸಂಘ ಮತ್ತು ಸಾಮರಸ್ಯ

ಜಾತಿಯನ್ನು ಮೀರಿ ಹಿಂದುಗಳಾಗುವತ್ತ…

ಸಮಾಜದಲ್ಲಿ  ಏಕರೂಪತೆಯನ್ನು ತರುವುದು ಸಂಘದ ಉದ್ದೇಶವಲ್ಲ. ಸಂಘಟನೆಗೆ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಸಮಾಜದ ಎಲ್ಲರೂ ಒಂದೇ ಜಾತಿಯವರಾಗಿಬಿಡಬೇಕು, ಒಂದೇ ಭಾಷೆ ಮಾತನಾಡಬೇಕು, ಒಂದೇ ಆಚಾರವಿಚಾರ ಪಾಲಿಸಬೇಕು ಎಂದು ಸಂಘ ಹೇಳುವುದಿಲ್ಲ.

ಸಮಾಜವನ್ನೂ ಸಂಘಟಿಸಬೇಕು, ವೈವಿಧ್ಯತೆಯನ್ನೂ ಉಳಿಸಬೇಕು. ಈ ಎರಡೂ ಕೆಲಸ ಆಗಬೇಕೆಂದರೆ ಸಮಾಜದ ಒಳಗಡೆಯೇ ಸಾಮರಸ್ಯ ಉಂಟಾಗಬೇಕು.

ಸಾಮರಸ್ಯ ಇದ್ದಾಗ ಮಾತ್ರ ಸಮಾಜ ಸಂಘಟಿತವಾಗೂ ಇರಬಲ್ಲದು, ವೈವಿಧ್ಯತೆಯೂ ಉಳಿಯಬಲ್ಲದು. ಈ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡು ಸಂಘ ನಡೆಯುತ್ತಿದೆ.

ಸಂಘ ಪ್ರಾರಂಭವಾದ ಕಾಲ ಹೀಗಿತ್ತು…

ಎಲ್ಲರಿಗೂ ತಿಳಿದಂತೆ1925ರಲ್ಲಿ ಸಂಘ ಪ್ರಾರಂಭವಾಯಿತು. ಇದೇ ಸಮಯದಲ್ಲಿ ಸಮಾಜದಲ್ಲಿದ್ದ ಭೇದ-ಭಾವದ ಆಚರಣೆಗಳ ಬಗ್ಗೆ ನಾನಾ ತರಹದ ಚರ್ಚೆಗಳು ನಡೆಯುತ್ತಿದ್ದವು.

ಇದರ ಭಾಗವಾಗಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ನಡೆಸಬೇಕು ಎಂದು ತಿಲಕರು ಕರೆಕೊಟ್ಟರು.

ಸಾವರ್ಕರ್ ಎಲ್ಲರಿಗೂ ಪ್ರವೇಶವಿರುವ ಪತಿತ ಪಾವನ ಮಂದಿರ ಕಟ್ಟಿದರು. ಭಗತ್ ಸಿಂಗ್ ಎಂಬ ದೊಡ್ಡ ಕ್ರಾಂತಿಕಾರಿಯನ್ನು ನೇಣಿಗೇರಿಸುವ ಮುನ್ನ ಆತನ ಕೊನೆಯ ಆಸೆ ಏನೆಂದು ಕೇಳಲಾಯಿತು. ಅಮ್ಮ ತಯಾರಿಸಿದ ರೊಟ್ಟಿ ತಿನ್ನಬೇಕೆಂದ.

ಆದರೆ ಭಗತ್ ಸಿಂಗ್ ಅಮ್ಮ ಬಹಳ ದೂರವಿದ್ದ ಕಾರಣ ಆ ಆಸೆಯನ್ನು ಪೂರೈಸಲಾಗುವುದಿಲ್ಲ ಎಂದು ಜೈಲರ್ ತಿಳಿಸುತ್ತಾನೆ.

ಅದಕ್ಕೆ ಭಗತ್ ಸಿಂಗ್ ’ನನ್ನ ಅಮ್ಮ ಎಂದರೆ ನನಗೆ ಜನ್ಮ ನೀಡಿದ ಸ್ತ್ರೀ ಆಗಬೇಕಿಲ್ಲ. ಈ ಜೈಲಿನ ಪಾಯಖಾನೆ, ಶೌಚಾಲಯ, ಚರಂಡಿಯನ್ನು ಶುಚಿಗೊಳಿಸುವ ತೇಲೂರಾಮನ ಮನೆಯಲ್ಲಿ ತಯಾರಿಸಿದ ರೊಟ್ಟಿ ಕೊಡಿ.

ಸ್ವಚ್ಛತೆಯ ಕೆಲಸ ಮಾಡಲು ಮಾತೃಹೃದಯ ಬೇಕು’ ಎನ್ನುತ್ತಾನೆ. ಬಿಸಿರಕ್ತದ ಹುಂಬರು ಎಂಬ ಆರೋಪ ಹೊತ್ತಿದ್ದ ಕ್ರಾಂತಿಕಾರಿಗಳೂ ಕೂಡ ಜಾತಿ ಆಧಾರಿತ ಭೇದ-ಭಾವದ ಆಚರಣೆಯನ್ನು ಒಪ್ಪಿರಲಿಲ್ಲ.

ಡಾಕ್ಟರ್ ಹೆಡಗೇವಾರ್ ನಂತರ ಸಂಘದ ನೇತೃತ್ವ ವಹಿಸಿದ ಗುರೂಜೀ ಗೋಳ್ವಳ್ಕರ್ ಅವರು, ಸಾಮರಸ್ಯದ ಸ್ಥಾಪನೆಗಾಗಿ ಕೆಲಸ ಮಾಡಿದರು.

‘ಅಸ್ಪ ೃಶ್ಯತೆ ಆಚರಣೆಯು ಸವರ್ಣೀಯ ಸಮಾಜದ ಮಾನಸಿಕ ಕಾಯಿಲೆ‘ ಎಂಬುದು ಗುರೂಜೀ ಅವರ ನಿಖರ ಅಭಿಪ್ರಾಯವಾಗಿತ್ತು. ಈ ಸಮಸ್ಯೆಯನ್ನು ಪರಿಹಾರ ಮಾಡಲು ಧಾರ್ಮಿಕ ನಾಯಕರು ಒಳಗೊಳ್ಳಬೇಕಾಗುತ್ತದೆ ಎಂದು ಗುರೂಜಿ ಅಂದೇ ಹೇಳಿದ್ದರು.

ಗುರೂಜೀ ಮಾತನ್ನು ಈಗಲೂ ಅರ್ಥಮಾಡಿಕೊಳ್ಳಬೇಕಿದೆ. ಪ್ರಗತಿಪರರು, ಬುದ್ದಿಜೀವಿಗಳು ವಿವಿಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಅವರ ಮಾತನ್ನು ಯಾರೂ ಕೇಳುವುದಿಲ್ಲ. ಅಸ್ಪ ೃಶ್ಯತೆ ನಿವಾರಣೆಗೆ ಧಾರ್ಮಿಕ ನಾಯಕರು ಒಂದಾಗಿ ಕ್ರಿಯಾಶೀಲರಾಗಬೇಕು ಎಂದು ಗುರೂಜಿ ಕೇವಲ ಹೇಳಿಕೆಯನ್ನು ನೀಡಿ ಸುಮ್ಮನಾಗಲಿಲ್ಲ.

ಬದಲಿಗೆ, ದೇಶದ 600ಕ್ಕೂ ಹೆಚ್ಚು ಧಾರ್ಮಿಕ ಮುಖಂಡರನ್ನು ಉಡುಪಿಯಲ್ಲಿ 1969ರಲ್ಲಿ ಎರಡು ದಿನಗಳ ಕಾಲ ಸೇರಿಸಿ, ಧರ್ಮ ಸಂಸತ್ತನ್ನು ನಡೆಸಿ ಚರ್ಚೆಯಲ್ಲಿ ತೊಡಗಿಸಿದರು. ಕನ್ನಡದ ಮೊದಲ ದಲಿತ ಐಎಎಸ್ ಅಧಿಕಾರಿ ಭರಣಯ್ಯ ಅವರು ಧರ್ಮ ಸಂಸತ್ತಿನ ಅಧ್ಯಕ್ಷರು.
ಆಗ ಅಸ್ಪೃಶ್ಯತೆಗೆ ಶಾಸ್ತ್ರಗಳ ಸಮ್ಮತಿ ಇದೆೆ ಎಂಬ ಮಾತು ಸಮಾಜದಲ್ಲಿ ಪ್ರಚಲಿತದಲ್ಲಿತ್ತು. ಆದರೆ ಎರಡು ದಿನಗಳ ಕಾಲ ಚರ್ಚೆ ನಡೆಸಿದ ಧರ್ಮ ಸಂಸತ್ತು, ‘ಯಾವ ಹಿಂದುವೂ ಪತಿತನಲ್ಲ/ಕೀಳಲ್ಲ (ನ ಹಿಂದುಃ ಪತಿತೋ ಭವೇತ್), ಹಿಂದುಗಳೆಲ್ಲ ಸೋದರರು
(ಹಿಂದವಾಃ ಸೋದರಾಃ ಸರ್ವೇ) ಎಂಬ ಘೋಷಣೆಯನ್ನು ಸಂಸತ್ತು ನೀಡಿತು.

ಈ ಧರ್ಮಸಂಸತ್ತಿನ ನಂತರ ಇಂದು ದೇಶದ ನೂರಾರು ಮಠಾಧೀಶರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗುರೂಜಿ ಚಿಂತನೆಯಿಂದ ಇವೆಲ್ಲ ಸಾಧ್ಯವಾಯಿತು.

ಹೀಗೆ ಸಮಾಜದಲ್ಲಿ ಸಾಮರಸ್ಯವನ್ನು ತರುವ ನಿಟ್ಟಿನಲ್ಲಿ ಸಂಘ ಹಲವಾರು ಕೆಲಸಗಳನ್ನು ಮಾಡುತ್ತಿದೆ. ಆದರೂ ಬಹಳಷ್ಟು ಊರು/ಹಳ್ಳಿಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಕಾಣುತ್ತಿದ್ದೇವೆ. ಹಳ್ಳಿಗಳಲ್ಲಿನ ಸಾಮರಸ್ಯದ ಸ್ಥಿತಿಗತಿಗಳನ್ನು ಅರಿಯಲು ಸುಮಾರು 600 ಗ್ರಾಮಗಳಲ್ಲಿ ಸರ್ವೇಕ್ಷಣೆ ನಡೆಸಲಾಯಿತು.

ಈಗಲೂ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರು, ದೇವಸ್ಥಾನ ಪ್ರವೇಶ, ಕಟಿಂಗ್ ಶಾಪ್, ಹಿಟ್ಟಿನ ಗಿರಣಿಗಳಲ್ಲಿ ಅಸ್ಪ ೃಶ್ಯತೆ ಜೀವಂತವಾಗಿದೆ.

ದಾವಣಗೆರೆ ಹತ್ತಿರದ ಬಿಳಿಚೋಡಿನ ಶಂಕ್ರಪ್ಪ ಎಂಬ ದಲಿತ ಶಿಕ್ಷಕರಿಗೆ ಹಿಂದುಗಳ್ಯಾರೂ ಮನೆ ಬಾಡಿಗೆಗೆ ನೀಡದೆ ಮುಸಲ್ಮಾನರ ಮನೆಯಲ್ಲಿ ಉಳಿಯುವಂತಾಯಿತು. ಪದವಿ ಪಡೆದಿದ್ದ ಅವರ ಹೆಂಡತಿಗೆ ಕುಡಿಯುವ ನೀರಿನ ಹ್ಯಾಂಡ್ ಪಂಪ್ ಉಪಯೋಗಿಸಲೂ ಬಿಡುತ್ತಿರಲಿಲ್ಲ.

ಇಂತಹ ಘಟನೆಗಳು ಈಗಲೂ ನಡೆಯುತ್ತವೆ.
ಅಸ್ಪೃಶ್ಯತೆ ತಪ್ಪಲ್ಲವಾದರೆ ಜಗತ್ತಿನಲ್ಲಿ ಇನ್ಯಾವುದೂ ತಪ್ಪಲ್ಲ ಎಂದು ಬಾಳಾಸಾಹೇಬ್ ದೇವರಸ್ ಹೇಳಿದ್ದರು.

ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ ಬಾಳಾಸಾಹೇಬ್ ದೇವರಸ್ ಅವರು ಸ್ವಯಂಸೇವಕರಿಗೆ ಸಮಾಜದ ಕೆಳವರ್ಗಗಳ ಬಗ್ಗೆ ಸಂವೇದನೆ ನಿರ್ಮಾಣವಾಗಬೇಕೆಂದು ಸೇವಾಕಾರ್ಯ ಆರಂಭಿಸಿರು.

ದೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸೇವಾ ಪ್ರಕಲ್ಪಗಳು ನಡೆಯುತ್ತಿವೆ. ಸಾಮರಸ್ಯದ ಸ್ಥಾಪನೆಯೇ ಇವೆಲ್ಲವುದರ ಮುಖ್ಯ ಉದ್ದೇಶ.

ಮೋಹನ್ ಭಾಗ್ವತ್ ಅವರು  ಒಂದು ಮಾತನ್ನು ಹೇಳಿದರು. ‘ಸಾಮಾಜಿಕ ಸಾಮರಸ್ಯ ಎಂಬುದು ನಮ್ಮ ರಣತಂತ್ರ (strategy) ಅಲ್ಲ; ಬದ್ಧತೆ (commitment)’.

ಯಾರೋ ಪ್ರಶ್ನೆ ಮಾಡುತ್ತಾರೆಂದೋ, ಚುನಾವಣೆ ಇದೆಯೆಂದು ಮಾಡುವ ಕೆಲಸವಲ್ಲ. ಪ್ರಾರಂಭದಲ್ಲಿ ಹೇಳಿದ ಹಿಂದು ಸಂಘಟನೆಯ ಭಾಗವೇ ಈ ಸಾಮರಸ್ಯ. ಹಿಂದು ತತ್ವಶಾಸ್ತ್ರ ಹೇಳುವುದೂ ಇದನ್ನೇ.

ವಾರಾಣಸಿಯಿಂದ ಗಂಗೆಯ ಜಲವನ್ನು ತೆಗೆದುಕೊಂಡು ಕಾಲ್ನಡಿಗೆಯಲ್ಲಿ ರಾಮೇಶ್ವರಕ್ಕೆ ಹೋಗಿ, ಆ ಜಲದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು ಎಂಬ ಉದ್ದೇಶದಿಂದ ಸಂತ ಏಕನಾಥರು ನಡಿಗೆೆ ಪ್ರಾರಂಭಿಸಿದರು. ಮಾರ್ಗಮಧ್ಯದಲ್ಲಿ ಬಾಯಾರಿ ಒದ್ದಾಡುತ್ತ ಬಿದ್ದಿದ್ದ ಕತ್ತೆಗೆ ಗಂಗೆಯ ನೀರನ್ನು ಕುಡಿಸಿದರು. ಅವರ ಹಿಂಬಾಲಕರೆಲ್ಲ ಹೌಹಾರಿದರು. ಅದಕ್ಕೆ ಏಕನಾಥರು ‘ಮೇರಾ ಈಶ್ವರ್ ಯಹೀ ಮಿಲ್ ಗಯಾ’ ಎಂದು ಉತ್ತರಿಸಿದ್ದರು.

ನಮ್ಮ ಮೂಲಕ ಅಧ್ಯಾತ್ಮ ಹೇಳುವುದು ಇದನ್ನೇ. ಎಲ್ಲರಲ್ಲೂ ಇರುವುದು ಒಂದೇ ಆತ್ಮ. ಎಲ್ಲರಲ್ಲಿರುವ ಆತ್ಮವೂ ಒಂದೇ. ಪ್ರಾಣಿ, ಪಕ್ಷಿ, ಸಸ್ಯ, ನೀರು, ಮರ, ಕಲ್ಲು ಎಲ್ಲದರಲ್ಲೂ ಇರುವುದು ಒಂದೇ ಆತ್ಮ. ನೀವೆಲ್ಲ ಪಾಪಿಗಳು ಎಂದು ಕ್ರಿಶ್ಚಿಯನ್ನರು ಹೇಳುತ್ತಾರೆ. ಆದರೆ ನಾವೆಲ್ಲರೂ ಅಮೃತಪುತ್ರರೆಂದು ಎಂದು ವಿವೇಕಾನಂದರು ಹೇಳಿದರು. ಈ ಆಧ್ಯಾತ್ಮಿಕ ದೃಷ್ಟಿಕೋನವೇ ನಮ್ಮ ಸಂಸ್ಕೃತಿ. ಅದುವೇ ಹಿಂದುತ್ವ. ಈ ನೆಲೆಯಲ್ಲಿ ಸಂಘ ನಡೆಸುತ್ತಿರುವ ಕೆಲಸಕ್ಕೆ ಮತ್ತಷ್ಟು ವೇಗ ತುಂಬುವ ಜವಾಬ್ಧಾರಿ ಸ್ವಯಂಸೇವಕರ ಮೇಲಿದೆ.

ಲೇಖಕ ದೇವನೂರು ಮಹದೇವ ಅವರ ‘ಒಡಲಾಳ’ ಎಂಬ ಕೃತಿಯಲ್ಲಿ ಒಂದು ಸಂದರ್ಭ ಬರುತ್ತದೆ. ಹಳ್ಳಿಯ ಅಜ್ಜಿಯೊಬ್ಬಳು ಸಂಜೆ ಶಾಲೆಯಿಂದ ಬಂದ ಮೊಮ್ಮಗನನ್ನು ಕೇಳುತ್ತಾಳೆ, ‘ಇಸ್ಕೂಲ್ನಾಗೆ ಏನ್ ಕಲಿಸಿದರು ಪುಟ್ಟ?’.

ಪಾಟಿ ಚೀಲ ಬಿಸಾಕುತ್ತಾ ಪುಟ್ಟ ಹೇಳುತ್ತಾನೆ, ‘ಅಯ್ಯೋ, ಕಳೆಯೋ ಲೆಕ್ಕ ಕಣವ್ವ’.

ಅಜ್ಜಿ, ‘ಏನು? ಕಳೆಯೋ ಲೆಕ್ಕನಾ?
ಯಾವನ್ಲೇ ಅವನು ಕಳೆಯೋ ಲೆಕ್ಕ ನಮಗೆ ಕಲಿಸುವವನು?
ಕಳ್ಕೊಳ್ಳೋದು ನಮ್ಮ ಜಾಯ್ಮಾನ್ದಾಗೇ ಐತೆ.
ಇಸ್ಕೂಲ್‌ಗೆ ಹೋಗಿ ಕೂಡೋ ಲೆಕ್ಕ ಕಲಿ’.  ಹೌದು, ಶಿಕ್ಷಣ ಯಾವುದೇ ಇರಲಿ ಅದು ನಮಗೆ ಕೂಡುವ ಲೆಕ್ಕ ಕಲಿಸಬೇಕು. ಕೂಡಿ ಬಾಳುವ ಲೆಕ್ಕ ಕಲಿಸಬೇಕು.

ನಮ್ಮ ರಕ್ಷಣೆಗೆ ನೀವು ಬಂದಿರಿ : ಭರಣಯ್ಯ
ಅಸ್ಪೃಶ್ಯತೆ ನಿವಾರಣೆಗೆ ಧಾರ್ಮಿಕ ನಾಯಕರು ಒಂದಾಗಿ ಕ್ರಿಯಾಶೀಲರಾಗಬೇಕು ಎಂದು ಗುರೂಜಿ ಕೇವಲ ಹೇಳಿಕೆಯನ್ನು ನೀಡಿ ಸುಮ್ಮನಾಗಲಿಲ್ಲ.

ಬದಲಿಗೆ, ದೇಶದ 600ಕ್ಕೂ ಹೆಚ್ಚು ಧಾರ್ಮಿಕ ಮುಖಂಡರನ್ನು ಉಡುಪಿಯಲ್ಲಿ 1969ರಲ್ಲಿ ಎರಡು ದಿನಗಳ ಕಾಲ ಸೇರಿಸಿ, ಧರ್ಮ ಸಂಸತ್ತನ್ನು ನಡೆಸಿ ಚರ್ಚೆಯಲ್ಲಿ ತೊಡಗಿಸಿದರು.

ಕನ್ನಡದ ಮೊದಲ ದಲಿತ ಐಎಎಸ್ ಅಧಿಕಾರಿ ಭರಣಯ್ಯ ಅವರು ಧರ್ಮ ಸಂಸತ್ತಿನ ಅಧ್ಯಕ್ಷರು.
ಆಗ ಅಸ್ಪೃಶ್ಯತೆಗೆ ಶಾಸ್ತ್ರಗಳ ಸಮ್ಮತಿ ಇದೆೆ ಎಂಬ ಮಾತು ಸಮಾಜದಲ್ಲಿ ಪ್ರಚಲಿತದಲ್ಲಿತ್ತು.

ಆದರೆ ಎರಡು ದಿನಗಳ ಕಾಲ ಚರ್ಚೆ ನಡೆಸಿದ ಧರ್ಮ ಸಂಸತ್ತು, ‘ಯಾವ ಹಿಂದುವೂ ಪತಿತನಲ್ಲ/ಕೀಳಲ್ಲ (ನ ಹಿಂದುಃ ಪತಿತೋ ಭವೇತ್), ಹಿಂದುಗಳೆಲ್ಲ ಸೋದರರು (ಹಿಂದುಃ ಸೋದರಾಃ ಸರ್ವೇ) ಎಂಬ ಘೋಷಣೆಯನ್ನು ಸಂಸತ್ತು ನೀಡಿತು.

ಈ ಧರ್ಮಸಂಸತ್ತಿನ ನಂತರ ಇಂದು ದೇಶದ ನೂರಾರು ಮಠಾಧೀಶರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗುರೂಜಿ ಚಿಂತನೆಯಿಂದ ಇವೆಲ್ಲ ಸಾಧ್ಯವಾಯಿತು.

ಕಾರ್ಯಕ್ರಮದ ನಂತರ ಗುರೂಜಿ ಗೋಳ್ವಲ್ಕರ್ ಅವರನ್ನು ಆಲಿಂಗಿಸಿದ ಭರಯ್ಯನವರು ‘ನಮ್ಮ ರಕ್ಷಣೆಗೆ ನೀವು ಬಂದಿರಿ’ ಎಂದರು. ಅಲ್ಲಿ ಕುಳಿತಿದ್ದ ಸ್ವಾಮೀಜಿಗಳನ್ನು ತೋರಿಸುತ್ತಾ ಪ್ರತಿಕ್ರಿಯಿಸಿದ ಗುರೂಜಿ ಗೋಳ್ವಲ್ಕರ್ ಅವರು, ‘ನಿಮ್ಮ ರಕ್ಷಣೆಗೆ ಹಿಂದು ಸಮಾಜವೇ ಬಂದಿದೆ’ ಎಂದರು.

ಸಂಘ ಹೊಕ್ಕ ಗ್ರಾಮಗಳ ಅನುಭವಗಳು
ಸಂಘ ಪ್ರವೇಶಿಸಿದ ಹಳ್ಳಿಗಳಲ್ಲಿ ಭಿನ್ನ ಅನುಭವಗಳಾಗುತ್ತವೆ. ಚಿಂಚೋಳಿ ತಾಲೂಕಿನ ಒಂದು ಹಳ್ಳಿಯಲ್ಲಿ ಈಶ್ವರ ದೇವಸ್ಥಾನವಿತ್ತು. ಆ ದೇವಸ್ಥಾನಕ್ಕೆ ಎಲ್ಲಾ ಜಾತಿಯವರಿಗೆ ಪ್ರವೇಶವಿರಲಿಲ್ಲ.

ಒಂದು ದಿನ ಆ ಗ್ರಾಮದ ಯುವಕರು ಶ್ರೀಶೈಲಕ್ಕೆ ಹೋದರು. ಅಲ್ಲಿ ಹೋಗಿ ನೋಡಿದರೆ ಪ್ರತಿಯೊಬ್ಬ ಭಕ್ತನೂ ತನ್ನ ಕೈಯಿಂದ ಶಿವಲಿಂಗವನ್ನು ಮುಟ್ಟಿ ಪೂಜೆ ಮಾಡುತ್ತಿದ್ದನು. ಇದರಿಂದ ಪ್ರಭಾವಿತರಾದ ಯುವಕರು ತಮ್ಮ ಗ್ರಾಮದ ಜನರ ಮನವೊಲಿಸಿದರು. ತಮ್ಮ ದೇವಸ್ಥಾನಕ್ಕೂ ಎಲ್ಲರಿಗೂ ಪ್ರವೇಶ ದೊರಕುವಂತೆ ಮಾಡಿದರು. ಈ ಬದಲಾವಣೆಯ ನೇತೃತ್ವ ವಹಿಸಿದ್ದವರು ಸಂಘದ ಸ್ವಯಂಸೇವಕರು ಎಂಬುದನ್ನು ಗಮನಿಸಬೇಕು.

ಅದೇ ರೀತಿ ತುಮಕೂರಿನ ಬಳಿಯ ಒಂದು ಊರು. ಊರಿನಲ್ಲೊಂದು ದೇವಸ್ಥಾನ. ಅದರ ಬಳಿಯಲ್ಲೇ ಸಂಘದ ಶಾಖೆ. ಆ  ದೇವಸ್ಥಾನದ ಒಳಗೆ ಕೆಲ ಸಮುದಾಯಗಳಿಗೆ ಪ್ರವೇಶವಿರಲಿಲ್ಲ. ಇದನ್ನು ಗಮನಿಸಿದ ಸ್ವಯಂಸೇವಕರು ಎಲ್ಲಾ ಜಾತಿಯ ಯುವಕರನ್ನು ಸೇರಿಸಿ, ಅಯ್ಯಪ್ಪನ ಮಾಲೆ ಧರಿಸಿ, ಆ ದೇವಸ್ಥಾನದ ಆವರಣದಲ್ಲೇ ವಸತಿ ಹೂಡಿದರು. ಕೊನೆಗೆ ಇರುಮುಡಿ ಕಟ್ಟಿ ಶಬರಿಮಲೆಗೆ ಹೊರಡುವಾಗ ಎಲ್ಲಾ ಯುವಕರ ಮನೆಯವರು ಅಲ್ಲಿಗೆ ಬರುವಂತಾಯಿತು.

ಸ್ವಯಂಸೇವಕರು ಮಾಡುವ ಕೆಲಸ ಒಳ್ಳೆಯದೇ ಆಗಿರುತ್ತದೆ ಎಂಬ ವಿಶ್ವಾಸದಿಂದ ಗ್ರಾಮಸ್ಥರೂ ಸುಮ್ಮನಾದರು. ಯಾವುದೇ ಚರ್ಚೆಯಿಲ್ಲದೆ ದಲಿತರು ದೇವಸ್ಥಾನ ಪ್ರವೇಶಿಸುವಂತಾಯಿತು.

ಬಿಜ್ಜಳನಾಗಿದ್ದೆ – ಬಸವಣ್ಣನಾದೆ
  ಉತ್ತರ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಸವೇಶ್ವರ ಜಯಂತಿ ಕಾರ್ಯಕ್ರಮ. ಸಂಘದ ಕಾರ್ಯಕರ್ತರೊಬ್ಬರು ‘ಈ ಕಾರ್ಯಕ್ರಮವನ್ನು ಛತ್ರದಲ್ಲಿ ಮಾಡುವುದು ಬೇಡ; ಅಂಬೇಡ್ಕರ್ ಕಾಲೊನಿಯಲ್ಲಿ ಮಾಡೋಣ’ ಎಂದರು.

ಈ ಅಭಿಪ್ರಾಯಕ್ಕೆ ಉಂಟಾದ ವಿರೋಧಕ್ಕೆ ಬಗ್ಗಲಿಲ್ಲ. ಕೊನೆಗೆ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಾಲ್ವರು ಸ್ವಾಮಿಗಳು ಆಗಮಿಸಿದರು. ಕಾಲೊನಿಯಲ್ಲೆಲ್ಲ ಸಡಗರ-ಸಂಭ್ರಮ, ತಳಿರು-ತೋರಣ-ರಂಗೋಲಿ. ಸ್ವಾಮಿಗಳ ಪಾದಯಾತ್ರೆಯ ನಂತರ ಒಬ್ಬ ಸ್ವಾಮೀಜಿ ಮಾತನಾಡುತ್ತಾ ಹೀಗೆ ಹೇಳಿದರು,
‘ನಾನು ಬಸವಣ್ಣ ಆಗ್ಬೇಕು ಅಂತ ಮನೆ ಬಿಟ್ಟು ಹೊರಟಿದ್ದೆ. ಕೇವಲ ಶ್ರೀಮಂತರ ಮನೆಯ ಪಾದಪೂಜೆ, ಐಷಾರಾಮಿ ಜೀವನಗಳಿಂದಾಗಿ ಬಿಜ್ಜಳ ಆಗಿ ಬಿಟ್ಟಿದ್ದೆ. ಇಂದು ಮತ್ತೆ ನಾನು ಬಸವಣ್ಣ ಆಗಿದ್ದೀನಿ’.

ಲೇಖನ -#ವಾದಿರಾಜ್