ಭಾರತದಲ್ಲಿ ಹಿಂದಿನ ರಾಜರು ಹೇಗೆ ಧರ್ಮಕ್ಕಾಗಿ, ಜನರ ಕ್ಷೇಮವನ್ನೇ ಮುಖ್ಯ ಕಾರಣವನ್ನಾಗಿ ಇಟ್ಟು ಕೊಂಡು ಯುದ್ಧಗಳನ್ನು ಮಾಡುತ್ತಿದ್ದರು ಎಂಬುದನ್ನು ನೋಡಿದರೆ ಆಧುನಿಕರಿಗಿಂತ ಹೆಚ್ಚು ಪ್ರಾಚೀನ ಭಾರತೀಯರೇ ಮಾನವಿಕ ಮೌಲ್ಯಗಳನ್ನು ಹೊಂದಿದ್ದರೆಂದು ಹೇಳಬಹುದು. ಒಂದು ಸಾವಿರ ವರ್ಷದ ಹಿಂದೆ ಭಾರತ ಇತರ ದಾಳಿಗಳ ಮುಂದೆ ಸೋತ್ತಿದ್ದೂ ಸಹ ಧರ್ಮದ ಯುದ್ಧ ಮಾಡಿದ್ದರಿಂದಲೇ. ಧರ್ಮ ಯುದ್ಧದಲ್ಲಿ ಎಂದೂ ಇತರ ಜನಾಂಗಗಳ ನಾಶ ಇರಲಿಲ್ಲ. ಮತ್ತೊಮ್ಮೆ ಧರ್ಮಯುದ್ಧದ ನಿಯಮಗಳನ್ನು ವಿವರವಾಗಿ ಬರೆಯುತ್ತೇನೆ ಅಥವಾ ಮಹಾಭಾರತ ಓದಿದರೆ ತಿಳಿಯುತ್ತದೆ.
ಚೈನಾದಂತಹ ರಾಷ್ಟ್ರಗಳು ಇಂದು ಭಾರತದ ಮೇಲೆ ಕಾಲು ಕೆರೆದು ಯುದ್ಧಕ್ಕೆ ನಿಂತಿರುವ ಈ ಸಮಯದಲ್ಲಿ ಸಾವಿರ ವರ್ಷದ ಹಿಂದೆ ಭಾರತದ ರಾಜರು ಬರೆದ ಧರ್ಮಯುದ್ಧದ ಸಾಲು ನನ್ನ ಮನಸ್ಸನ್ನು ಉತ್ಸಾಹದಾಯಕವನ್ನಾಗಿ ಮಾಡಿತು. ಕಲ್ಯಾಣ ಚಾಲುಕ್ಯರ ದೊರೆಯಾದ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರ ( ಸಾ. ೧೧೨೭ - ೧೧೩೯ ) ತನ್ನ ಗ್ರಂಥವಾದ ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ಥ ಚಿಂತಾಮಣಿ ಯಲ್ಲಿ ಯುದ್ಧ ಸಿದ್ಧತೆಗಳ ಬಗ್ಗೆ ಮಾತನಾಡುವಾಗ ದ್ವಿತೀಯ ವಿಂಶತಿಯ, ೧೪ನೇ ಅಧ್ಯಾಯದಲ್ಲಿ ೯೨೮ ಶ್ಲೋಕದಲ್ಲಿ ಹೀಗೆ ಅಭಿಪ್ರಾಯ ಪಡುತ್ತಾನೆ.
''ಮಳೆ ಬಾರದೆ ನೀರಿಲ್ಲದಂಥ, ದುರ್ಭಿಕ್ಷದಲ್ಲಿರುವಂಥ, ಸಾಂಕ್ರಾಮಿಕ ರೋಗಗಳು ಹಬ್ಬಿದಂಥ, ದುಸ್ಥಿತಿಯಲ್ಲಿರುವಂಥ ವೈರಿದೇಶದ ಮೇಲೆ ದಾಳಿ ಮಾಡಬಾರದು''.
ಇಂತಹ ಸಮಯದಲ್ಲಿ ಭಾರತದ ಚರಿತ್ರೆ, ಔದಾರ್ಯ ಹಿಂದಿನ ಪರಕೀಯರ ದಾಳಿಗಳು, ಪರಕೀಯರ ಅನಾರ್ಯತೆ ಮತ್ತು ಚೈನಾದ ಅಯೋಗ್ಯತೆಗಳು ಮನಸ್ಸಿನಲ್ಲಿ ಓಡಿತು.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ
#ಶಲ್ವಾಧೀಕ್ಷಣ
ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್