ದೇಶದಲ್ಲಿ ಎಮೆರ್ಜೆನ್ಸಿ ಹಾಕಲಾಗಿದ್ದ ಸಮಯ. ದೇಶದಾದ್ಯಂತ ಸರಕಾರದ ಎಲ್ಲಾ ವಿರೋಧಿಗಳನ್ನು ಜೈಲಿಗೆ ಅಟ್ಟುಲಾಗುತ್ತಿತ್ತು. ಸರಕಾರದ ವಿರುದ್ಧ ಯಾರೇ ಏನು ಮಾತನಾಡಿದರೂ, ಕೆಲಸ ಮಾಡಿದರೂ, ಅಂಥಹವರಿಗೆ ಜೈಲುವಾಸ ನಿಶ್ಚಿತ ಎನ್ನುವ ಪರಿಸ್ಥಿತಿ ಇತ್ತು.
ಆ ಸಂದರ್ಭದಲ್ಲಿ ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದ ಎಲ್ಲ ಸಂಘಟನೆಗಳು ಸೇರಿ ಒಂದು ಸಭೆ ನಡೆಸಿದವು. ಅದರಲ್ಲಿ ಸಂಘದ ಸದಸ್ಯರು, ಕಮ್ಯೂನಿಸ್ಟ್ ಪಕ್ಷದ ಸದಸ್ಯರು ಹಾಗೂ ಇನ್ನಿತರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಹಳಷ್ಟು ವಿಚಾರಗಳನ್ನು ಚರ್ಚಿಸಿದ ನಂತರ ಯಾವುದೋ ಒಂದು ನಿರ್ಧಾರಿತ ದಿನ ಆಖಿಲ ಭಾರತ ಸ್ತರದಲ್ಲಿ ಎಲ್ಲ ಸಂಘಟನೆಯ ಸದಸ್ಯರು ’ಜೈಲ್ ಭರೋ’ ಆಂದೋಲನವನ್ನು ಹಮ್ಮಿಕೊಳ್ಳಬೇಕೆಂದು ನಿರ್ಧರಿಸಲಾಯಿತು.
ಎಲ್ಲರೂ ತಮ್ಮ ತಮ್ಮ ಸಂಘಟನೆಯ ಎಷ್ಟು ಸಂಖ್ಯೆಯ ಸದಸ್ಯರು ಇದರಲ್ಲಿ ಭಾಗವಹಿಸಬಹುದು ಎಂದು ಕೇಳಲಾಯಿತು. ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿಯಾಗಿ ಬಂದಿದ್ದ ಎ.ಕೆ. ಗೋಪಾಲನ್‍ರವರು ತಮ್ಮ ಪಕ್ಷದ ೨೦ ಸಾವಿರ ಸದಸ್ಯರು ಅಂದು ಜೈಲ್ ಭರೋ ಅಭಿಯಾನದಲ್ಲಿ ಭಾಗವಹಿಸುವರು ಎಂದು ಹೇಳಿದರು.
ಸಂಘದ ಪ್ರತಿನಿಧಿಯಾಗಿದ್ದ ಮಾಧವರಾವ್ ಮೂಳೆಯವರ ಸರದಿ ಬಂದಾಗ ಅವರು ಸಂಘದ ೧ ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವರು ಎಂದು ಹೇಳಿದರು.
ಆಗ ಕಮ್ಯೂನಿಸ್ಟ್ ಸಹಿತ ಅನೇಕ ಇತರ ಪ್ರತಿನಿಧಿಗಳ ಮುಖದಲ್ಲಿ ಹಾಸ್ಯ ಭಾವನೆ ತೇಲಾಡಿತು. ಸಂಘವು ಆ ಸಮಯದಲ್ಲಿ ನಿರ್ಬಂಧನಕ್ಕೊಳಪಟ್ಟಿತ್ತು. ಸಂಘದ ಯಾವುದೇ ಕಾರ್ಯ ನಡೆಸುವಹಾಗಿರಲಿಲ್ಲ. ಅಷ್ಟೇ ಏಕೆ, ತಾವು ಸಂಘದ ಸ್ವಯಂಸೇವಕರು ಎಂದು ಹೇಳಿಕೊಂಡವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುತ್ತಿತ್ತು. ಸಂಘದ ಸ್ವಯಂಸೇವಕರು ಒಬ್ಬರೊನ್ನೊಬ್ಬರು ಭೇಟಿ ಮಾಡಲೂ ಸಾಧ್ಯವಿರಲಿಲ್ಲ. ಇಂಥ ಸಂದರ್ಭದಲ್ಲಿ ಒಂದು ಲಕ್ಷ ಸ್ವಯಂಸೇವಕರು ಬಂಧನಕ್ಕೊಳಗಾಗುವ ಯೋಚನೆಯೇ ಅನೇಕರಿಗೆ ಹಾಸ್ಯಾಸ್ಪದವೆನಿಸಿತ್ತು.
ನಂತರದ ದಿನಗಳಲ್ಲಿ ಅಂದುಕೊಂಡ ಹಾಗೆಯೇ ಜೈಲ್ ಭರೋ ಚಳುವಳಿ ನಡೆಯಿತು. ಲೆಕ್ಕ ತೆಗೆದುಕೊಂಡಾಗ, ಸಂಘದ ೧.೨೫ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಜೈಲಿಗೆ ಹೋಗಿದ್ದರು. ಆದರೆ ಕಮ್ಯೂನಿಸ್ಟರ ೨೦೦೦ ದಷ್ಟು ಮಂದಿ ಮಾತ್ರ ಜೈಲು ಪಾಡಾಗಿದ್ದರು. ಎ.ಕೆ. ಗೋಪಾಲನ್‍ರವರು "ನಾನು ನನ್ನ ಪಡೆಗೆ ಕೇವಲ ಸ್ವಾರ್ಥ ಹೇಳಿಕೊಟ್ಟಿದ್ದೆ. ತ್ಯಾಗ ಹೇಳಿಕೊಡಲಿಲ್ಲ" ಉದ್ಗರಿಸಿದರು !
No comments:
Post a Comment