Thursday, 27 July 2017

ಸಮಯವು ಅಮೂ‌ಲ್ಯವಾಗಿದೆ !

ಬದುಕಿನಲ್ಲಿ ಒಂದು ವರ್ಷಕ್ಕೆ ಏನು ಮಹತ್ವವಿದೆ ಎಂದು ತಿಳಿಯಲು.. ಪ್ರತಿ ವರುಷ ಜವಾಬ್ದಾರಿ ಘೋಷಣೆಯಾಗುವ ಕಾರ್ತಕರ್ತನನ್ನು ಕೇಳಿರಿ.

ಒಂದು ತಿಂಗಳ ಮಹತ್ವವನ್ನು ಅರಿಯಬೇಕಿದ್ದಲ್ಲಿ ಸಂಘ ಶಿಕ್ಷಾ ವರ್ಗಗಳಿಗೆ ರಜಾ ಹಾಕಿ ಬರುವ ಶಿಕ್ಷಕರು ಹಾಗೂ ಶಿಕ್ಷಾರ್ಥಿಗಳನ್ನು ಕೇಳಿರಿ.

ಒಂದು ವಾರದ ಮಹತ್ವವನ್ನು ಅರಿಯಬೇಕಿದ್ದಲ್ಲಿ ಸಾಪ್ತಾಹಿಕ ವರ್ಗವನ್ನೋ ಅಥವ ಸಾಂಘಿಕ್ ನಡೆಸುವ ಕಾರ್ಯಕರ್ತರನ್ನು ಕೇಳಿರಿ...

ಒಂದು ದಿನದ ಮಹತ್ವವನ್ನು ಅರಿಯಬೇಕಿದ್ದಲ್ಲಿ ಯುಗಾದಿಯ ದಿನ ಸರಸಂಘಚಾಲಕ್ ಪ್ರಣಾಮ್ ಅನ್ನು ಮಾಡದ ಕಾರ್ಯಕರ್ತರನ್ನು ಕೇಳಿರಿ...

ಒಂದು ಗಂಟೆಯ ಮಹತ್ವವನ್ನು ಅರಿಯಬೇಕಿದ್ದಲ್ಲಿ ಒಬ್ಬ ಶಾಖಾ ಮುಖ್ಯ ಶಿಕ್ಷಕನನ್ನು ಕೇಳಿರಿ.

ಒಂದು ನಿಮಿಷದ ಮಹತ್ವವನ್ನು ಅರಿಯಬೇಕಿದ್ದಲ್ಲಿ   ಗುರೂಜಿಯವರ ಸಂಸ್ಮರಣೆ ಕಾರ್ಯಕ್ರಮಕ್ಕೆ ಕೊನೆಯದಾಗಿ ಬಂದ ಸ್ವಯಂಸೇವಕನನ್ನು ಕೇಳಿರಿ..

ಒಂದು ಕ್ಷಣದ ಮಹತ್ವವನ್ನು ಅರಿಯಬೇಕಾದರೆ, ಗುಣಾತ್ಮಕ ಸಂಚಲನದಲ್ಲಿ ಹೆಜ್ಜೆ ತಪ್ಪಿದ ವ್ಯಕ್ತಿಯನ್ನು ಕೇಳಿರಿ.

ಇಡೀ ಜೀವಿತಾವಧಿಯ ಮಹತ್ವವನ್ನು ಅರಿಯಬೇಕಾದರೆ ಒಬ್ಬ ಪ್ರಚಾರಕರನ್ನು ಕೇಳಿರಿ.

ಭಜಗೋವಿಂದಂ ಮೂಢಮತೆ..

ಆದಿ ಶಂಕರಾಚಾರ್ಯ ವಿರಚಿತ

ಭಜ ಗೋವಿಂದಂ ---- ಗದ್ಯಾರ್ಥ ಸಹಿತ

*ಸ್ವಲ್ಪ ದೀರ್ಘವಾಗಿದೆ.  ಆದರೆ ಜೀವನದಲ್ಲಿ ಒಮ್ಮೆ ಓದಲೇ ಬೇಕಾದಂಥ ಪವಿತ್ರ ಕೃತಿ.  ಒಮ್ಮೆ ಓದಿ ಬಿಡಿ ಸಾಕು,  ಇಡೀ ಜನ್ಮದ ಪುಣ್ಯ ನಿಮ್ಮದಾಗುವುದು  !!*

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..!
ಅಂತ್ಯ ಕಾಲವು ಸಮೀಪಿಸಿರುವಾಗ ಈ ಹಣ ದ್ರವ್ಯ  ನಿನ್ನನ್ನು ಎಂದಿಗೂ ರಕ್ಷಿಸುವುದಿಲ್ಲ.

ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್||2||

ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು.
ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿಯನ್ನು ತಂದುಕೊ.
ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.

ನಾರೀ ಸ್ತನಭರನಾಭೀದೇಶಂ
ದೃಷ್ಟ್ವಾಮಾ ಗಾ ಮೋಹಾವೇಶಮ್|
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||3||

ಸ್ತೀಯರ ಸ್ತನಗಳನ್ನು ನಾಭಿ ಪ್ರದೇಶವನ್ನು ನೋಡಿ ಮೋಹಾವಿಷ್ಟನಾಗಬೇಡ.
ಅದೆಲ್ಲವೂ ಮಾಂಸ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ಗುಣಿಸಿ ನೋಡು.

ನಲಿನೀದಲಗತಜಲಮತಿತರಲಂ
ತದ್ವಜ್ಜೀವಿತಮತಿಶಯಚಪಲಮ್|
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||4||

ತಾವರೆಗಿಡದ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹುಬೇಗನೆ ಜಾರುತ್ತದೆ.
ಹಾಗೆಯೇ ಮನುಷ್ಯನ ಜೀವಿತವು ಅತ್ಯಂತ ಚಂಚಲ.ಯಾವ ಕ್ಷಣದಲ್ಲಾದರೂ ಜಾರಿ ಹೋಗಬಹುದು.
ಈ ಲೋಕವು ರೋಗ ದುರಂಹಕಾರಗಳಿಂದ ತುಂಬಿದೆಯೆಂದೂ ಸಮಸ್ತರೂ ಒಂದಲ್ಲ ಒಂದು ಶೋಕದಿಂದ ನರಳುತ್ತಿದ್ದಾರೆಂದೂ ತಿಳಿದುಕೋ.

ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ|
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||

ನೀನು ಧನ ಸಂಪಾದನೆಯಲ್ಲಿ ತೊಡಗಿರುವವರೆಗೆ ನಿನ್ನ ಕುಟುಂಬದವರು ನಿನ್ನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆಮೇಲೆ ಹಣವನ್ನು ಸಂಪಾದಿಸಲಾರದೆ ಮುದಿತನದಿಂದ ದೇಹವು ಜರ್ಝರಿತವಾಗುತ್ತದೆ.
ಆಗ ಮನೆಯಲ್ಲಿರುವ ಯಾರೂ ನಿನ್ನ ಸುದ್ದಿಯನ್ನು ವಿಚಾರಿಸದೆ ದೂರವಾಗಿ ಬಿಡುತ್ತಾರೆ.

ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ|
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||6||

ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸಬಹುದು.
ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿಯರು ಸಹ ಹೆದರುತ್ತಾರೆ.

ಬಾಲಸ್ತಾವತ್ಕ್ರೀಡಾಸಕ್ತ-
ಸ್ತರುಣಸ್ತಾವತ್ತರುಣೀಸಕ್ತಃ|
ವೃದ್ಧಸ್ತಾವತ್ಚಿಂತಾಮಗ್ನಃ
ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||7||

ಹುಡುಗನಿಗಾದರೋ ಆಟದಲ್ಲಿ ಆಸಕ್ತಿ.
ಯುವಕನಿಗೆ ತರುಣಿಯರಲ್ಲಿ ಆಸಕ್ತಿ.ಮುದುಕನು ಯಾವುದೋ ಒಂದು ಚಿಂತೆಯಲ್ಲಿ ಮುಳುಗಿರುತ್ತಾನೆ.
ಏವಂಚ ಪರಬ್ರಹ್ಮದ ವಿಷಯದಲ್ಲಿ ಯಾರಿಗೂ ಆಸಕ್ತಿ ಇಲ್ಲ!

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ|
ಕಸ್ಯ ತ್ವಂ ಕಃ ಕುತ ಆಯಾತ-
ಸ್ತತ್ತ್ವಂ ಚಿಂತಯ ತದಿಹ ಭ್ರಾತಃ ||8||

ಈ ಸಂಸಾರವು ಅತೀವ ವಿಚಿತ್ರವಾದದ್ದು.ನಿನ್ನ ಕಾಂತೆ ಎಂದುಕೊಳ್ಳುವೆಯಲ್ಲ, ಅವಳು ಯಾರು?
ನನ್ನ ಪುತ್ರ ಎಂದುಕೊಳ್ಳುವೆಯಲ್ಲ ಅವನು ಮೂಲದಲ್ಲಿ ಯಾವನಾಗಿದ್ದ? ನೀನಾದರೂ ಯಾರು? ಯಾರ ಮಗ? ಎಲ್ಲಿಂದ ಇಲ್ಲಿಗೆ ಏಕೆ ಬಂದಿರುವೆ?
ಎಲೈ ಸೋದರನೇ. ಈ ವಿಷಯದಲ್ಲಿ ಸತ್ಯಸ್ಥಿತಿ ಏನೆಂಬುದನ್ನು ಆಲೋಚಿಸಿ ನೋಡು.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||9||

ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ.
ಈ ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ.
ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ.
ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತವಾಯಿತೆಂದು ತಿಳಿಯಬೇಕು.

ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ|
ಕ್ಷೀಣೇ ವಿತ್ತೇ ಕಃ ಪರಿವಾರೋ
ಜ್ಞಾತೇ ತತ್ತ್ವೇ ಕಃ ಸಂಸಾರಃ ||10||

ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರವೆಲ್ಲಿರುತ್ತದೆ?
ನೀರು ಒಣಗಿದ ಮೇಲೆ ಕೆರೆಯೆಂದರೆ ಯಾವುದು?
ಹಣವು ಕ್ಷೀಣಿಸಿ ಇಲ್ಲವಾದಾಗ ಸಂಸಾರದ ಪರಿವಾರವೆಲ್ಲಿರುತ್ತದೆ?
ತತ್ತ್ವಜ್ಞಾನವಾದಾಗ ಈ ಸಂಸಾರ ಎಲ್ಲಿದ್ದೀತು?

ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಮ್|
ಮಾಯಾಮಯಮಿದಮಖಿಲಂ ಮತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||11||

ಎಲೈ ಮಾನವ, “ನನಗೆ ಧನಬಲವಿದೆ, ಜನಬಲವಿದೆ, ಯೌವನವಿದೆ” ಎಂದು ಗರ್ವಪಡಬೇಡ.
ಒಂದು ನಿಮಿಷದಲ್ಲಿ ಕಾಲವು ಇದೆಲ್ಲವನ್ನು ನಾಶ ಮಾಡಬಲ್ಲದು.
ಇದೆಲ್ಲವೂ ಮಾಯಾ ಕಲ್ಪಿತವಾದದ್ದು (ವಸ್ತುತಃ ಇಲ್ಲ) ಎಂದು ನಿಶ್ಚಯಿಸಿ, (ಶಾಶ್ವತವಾದ) ಬ್ರಹ್ಮವೆಂದರೇನೆಂಬುದನ್ನರಿತು ಅದರಲ್ಲಿ ಸೇರಿಕೋ.

ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ|
ಕಾಲಃಕ್ರೀಡತಿ ಗಚ್ಛತ್ಯಾಯು-
ಸ್ತದಪಿ ನ ಮುಂಚತ್ಯಾಶಾವಯುಃ ||12||

ಹಗಲು ರಾತ್ರಿ, ಸಂಜೆ, ಪ್ರಾತಃಕಾಲ ಶಿಶಿರಋತು, ವಸಂತಋತು ಮುಂತಾದವೆಲ್ಲವೂ ಬರುತ್ತದೆ, ಹೋಗುತ್ತವೆ, ಇದು ಕಾಲಪುರುಷನ ಒಂದು ಆಟ.
ಈ ಆಟದ ಹೆಸರಿನಲ್ಲಿ ಮನುಷ್ಯನ ಆಯಸ್ಸು ಕಳೆದುಹೋಗುತ್ತದೆ.
ಇದೆಲ್ಲ ತಿಳಿದಿದ್ದರೂ ಆಸೆಯೆಂಬ ವಾತರೋಗವು ಬಿಟ್ಟು ಹೋಗುವುದೇ ಇಲ್ಲ.

ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ|
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ ||13||

ಎಲೈ ವಾತರೋಗಿ! ನಿನಗೆ ಪ್ರಿಯಳಾದ ಮಡದಿ ಯಾರು? ಏನು ಮಾಡಿಯಾಳು? ಇನ್ನೂ ಹಣದ ಆಸೆ ಏಕೆ?
ನಿನಗೆ ಬುದ್ದಿ ಹೇಳು ದಾರಿ ತೋರಿಸತಕ್ಕವರಿಲ್ಲವೇನು?
ಮೂರು ಲೋಕಗಳಲ್ಲಿ ಹುಡುಕಿದರೂ ಸತ್ಸಂಗವೆಂಬುದೊಂದೇ ಸಂಸಾರಸಾಗರವನ್ನುದಾಟಿಸಬಲ್ಲ ದೋಣಿಯಾಗಿರುತ್ತದೆ.

ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ|
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||14||

ಒಬ್ಬನು ಜಟೆಬಿಟ್ಟವನು, ಇನ್ನೊಬ್ಬನು ತಲೆಬೋಳಿಸಿಕೊಂಡವನು, ಮತ್ತೊಬ್ಬನು ಕೇಶವನ್ನು ಎಳೆದೆಳೆದು ಕಿತ್ತುಹಾಕಿಕೊಂಡವನು, ಮಗದೊಬ್ಬನು ಕಾವಿ ಬಟ್ಟೆಯನ್ನುಟ್ಟು ಬಹುವಿಧವಾಗಿ ಅಲಂಕರಿಸಿಕೊಂಡವನು.
ಕಣ್ಣಿಂದ ಕಾಣುತ್ತಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಮೂಢರಿದ್ದಾರೆ.
ಇವರು ಹೊಟ್ಟೆಪಾಡಿಗಾಗಿ ಇಂತಹ ನಾನಾ ವೇಷವನ್ನು ಧರಿಸಿರುತ್ತಾರೆ.

ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಮ್|
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾಪಿಂಡಮ್||15||

ವಯಸ್ಸಾದ ಮೇಲೆ ಅವಯವವು ಬಲಹೀನವಾಗಿರುತ್ತದೆ. ಕೂದಲು ನೆರೆತು ತಲೆಯು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿಹೋಗಿರುತ್ತವೆ.ಇಷ್ಟಾದರೂ ಮುದುಕನು ದೊಣ್ಣೆಯನ್ನು ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾನೆ.
ವಯಸ್ಸಾದರೂ ಆಶೆಯು ಶರೀರವನ್ನು ಬಿಟ್ಟು ಹೋಗುವುದಿಲ್ಲ.

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ|
ಕರತಲಭಿಕ್ಷಸ್ತರುತಲವಾಸ-
ಸ್ತದಪಿ ನ ಮುಂಚತ್ಯಾಶಾಪಾಶಃ ||16||

ಛಳಿಯನ್ನು ತಡೆಯಲಾರದೆ ಎದುರಿಗೆ ಬೆಂಕಿಯನ್ನು ಹಾಕಿಕೊಂಡು ಮೈಯನ್ನು ಕಾಯಿಸುತ್ತಾನೆ.
ಸೂರ್ಯನ ಕಡೆಗೆ ಬೆನ್ನು ಮಾಡಿ ಬಿಸಿಲು ಕಾಯಿಸುತ್ತಾನೆ. ರಾತ್ರಿಯಲ್ಲಿ ಮೊಳಕಾಲು ಗದ್ದವನ್ನು ಮುಟ್ಟುವಂತೆ ಬಾಗಿ ಮಲಗುತ್ತಾನೆ. ಭಿಕ್ಷಾಪಾತ್ರೆಯೂ ಇಲ್ಲದ್ದರಿಂದ ಕೈಯಲ್ಲಿಯೇ ಭಿಕ್ಷೆ ಬೇಡಿ ತಿನ್ನುತ್ತಾನೆ.
ಮರದ ಬುಡದಲ್ಲಿ ಮಲಗುತ್ತಾನೆ.ಇಷ್ಟಾದರೂ ಆಸೆಯೆಂಬ ವಾತರೋಗವು ಇವನನ್ನು ಬಿಡುವುದೇ ಇಲ್ಲವಲ್ಲ!

ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಮ್|
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ಭಜತಿ ನ ಜನ್ಮಶತೇನ||17||

ಮೋಕ್ಷವನ್ನು ಪಡೆಯುವುದಕ್ಕಾಗಿ ಕೆಲವರು ಗಂಗಾನದಿಗೆ ಹೋಗಿ ಸ್ನಾನ ಮಾಡುತ್ತಾರೆ. ಸಮುದ್ರ ಸ್ನಾನ ಮಾಡುತ್ತಾರೆ!
ನಾನಾ ಬಗೆಯ ವ್ರತಗಳನ್ನು ಮಾಡುತ್ತಾರೆ, ದಾನ ಕೊಡುತ್ತಾರೆ.
ಆದರೆ ಆತ್ಮಜ್ಞಾನವಿಲ್ಲದ ನೂರು ಜನ್ಮಗಳನ್ನು ಕಳೆದರೂ ಅವರಿಗೆ ಮೋಕ್ಷವು ಸಿಗುವುದಿಲ್ಲ.
ಜ್ಞಾನ ಒಂದೇ ಮೋಕ್ಷಕ್ಕೆ ಸಾಧನ.ಇದು ಎಲ್ಲ ಉಪನಿಷತ್ತುಗಳ ಸಿದ್ಧಾಂತ.

ಸುರಮಂದಿರತರುಮೂಲನಿವಾಸಃ
ಶಯ್ಯಾ ಭೂತಲಮಜಿನಂ ವಾಸಃ|
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ ||18||

ವಿರಾಗಿಯಾದವನು ದೇವಾಲಯಗಳಲ್ಲಿ ಅಥವಾ ಮರಗಳ ಬುಡದಲ್ಲಿ ವಾಸ ಮಾಡುತ್ತಾ, ನೆಲವನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಕೃಷ್ಣಾಜಿನವನ್ನು ಹೊದ್ದುಕೊಂಡು ಸಕಲ ಸುಖಸಾಧನಗಳನ್ನು ತ್ಯಜಿಸುತ್ತಾನೆ.
ಇಂಥ ವೈರಾಗ್ಯವು ಯಾರಿಗೆ ತಾನೆ ಸುಖ ನೀಡದು?

ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ|
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||19||

ಒಬ್ಬನು ಯೋಗಿಯಾಗಿರಲಿ, ಭೋಗಿಯಾಗಿರಲಿ, ಸತ್ಸಂಗದಲ್ಲಿ ಇರಲಿ ಅಥವಾ ಸಂಗರಹಿತನಾಗಿರಲಿ.
ಯಾವಾತನ ಚಿತ್ತವು ಬ್ರಹ್ಮಚಿಂತನೆಯಲ್ಲಿ ನಿರತವಾಗಿರುವುದೋ ಆತನು ಆನಂದದಲ್ಲಿ ಮುಳುಗುತ್ತಾನೆ.
ಆನಂದದಲ್ಲಿರುತ್ತಾನೆ, ಆನಂದಿಸುತ್ತಲೇ ಇರುತ್ತಾನೆ, ಇದು ನಿಶ್ಚಿತ.

ಭಗವದ್ಗೀತಾ ಕಿಂಚಿದಧೀತಾ
ಗಂಗಾಜಲ ಲವ ಕಣಿಕಾ ಪೀತಾ|
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ ||20||

ಭಗವದ್ಗೀತೆಯನ್ನು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು. ಗಂಗಾಜಲದ ಒಂದು ಹನಿಯನ್ನು ಕುಡಿದರೂ ಸಾಕು.
ಶ್ರೀಮನ್ನಾರಾಯಣನನ್ನು ಒಂದು ಸಲ ಪೂಜಿಸಿದರೂ ಸಾಕು, ಆತನ ವಿಷಯದಲ್ಲಿ ಯಮನು ಯಾವ ಚರ್ಚೆಯನ್ನೂ ಮಾಡುವುದಿಲ್ಲ. (ಯಮನಿಂದ ಅವನಿಗೆ ಯಾವ ಬಾಧೆಯೂ ಇರುವುದಿಲ್ಲ).

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್|
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ ||21||

ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ.
ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು.

ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||22||

ನೀನು ಯಾರು? ನಾನು ಯಾರು? ಎಲ್ಲಿಂದ ಏಕೆ ಬಂದಿದ್ದೀಯೇ? ಯಾರು ನನ್ನ ತಾಯಿ? ಯಾರು ನನ್ನ ತಂದೆ? ಎಂಬುದನ್ನು ಸರಿಯಾಗಿ ವಿಚಾರ ಮಾಡಿ ನೋಡು.
ಈ ವಿಶ್ವವೆಲ್ಲವೂ ನಿಸ್ಸಾರವಾದ ಸ್ವಪ್ನದ ವಿಚಾರವೇ ಎಂದು ತಿಳಿದು ದೂರವಿಟ್ಟು ಪರ್ಯಾಲೋಚಿಸು.

ರಥ್ಯಾಕರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ|
ಯೋಗೀ ಯೋಗನಿಯೋಜಿತ ಚಿತ್ತೋ
ರಮತೇ ಬಾಲೋನ್ಮತ್ತವದೇವ ||23||

ಯೋಗದಲ್ಲಿಯೇ ಮನಸ್ಸನ್ನು ಇಟ್ಟ ಯೋಗಿಯು ಬೀದಿಯಲ್ಲಿ ಬಿದ್ದಿರುವ ಚಿಂದಿಯನ್ನೇ ತೇಪೆ ಹಾಕಿಕೊಂಡು ಮೈಮುಚ್ಚಿಕೊಳ್ಳುತ್ತಾನೆ.
ಪಾಪ-ಪುಣ್ಯಗಳನ್ನು ನೋಡದೆ ಮನಬಂದ ದಾರಿಯಲ್ಲಿ ನಡೆಯುತ್ತಾನೆ.
ಕೆಲವೊಮ್ಮೆ ಮಗುವಿನಂತೆಯೂ, ಕೆಲವೊಮ್ಮೆ ಹುಚ್ಚನಂತೆಯೂ ನಡೆದುಕೊಳ್ಳುತ್ತಾನೆ.

ತ್ವಯಿ ಮಯಿ ಚಾನ್ಯತ್ರ್ಯಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ|
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್||24||

ನಿನ್ನಲ್ಲಿ ನನ್ನಲ್ಲಿ ಅನ್ಯತ್ರ ಎಲ್ಲೆಲ್ಲಿಯೂ ಒಬ್ಬನೇ ವಿಷ್ಣುವಿದ್ದಾನೆ.
ಸಹನೆಯನ್ನು ಕಳೆದಕೊಂಡು ವ್ಯರ್ಥವಾಗಿ ನನ್ನ ಮೇಲೇಕೆ ಕೋಪಿಸಿಕೊಳ್ಳುತ್ತೀಯೆ.
ಎಲೈ ಮಾನವ, ಶೀಘ್ರವಾಗಿ ನೀನೇ ವಿಷ್ಣುವಾಗಬೇಕೆಂಬ ಬಯಕೆ ಇದ್ದರೆ, ಸರ್ವತ್ರ ವಿಷ್ಣು ಒಬ್ಬನೇ ಇದ್ದಾನೆಂದು ತಿಳಿದು ಸಮಚಿತ್ತನಾಗು.

ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ|
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಜ್ಞಾನಮ್ ||25||

ಶತ್ರು, ಮಿತ್ರ, ಪುತ್ರ, ಬಂಧು ಮೊದಲಾದವರಲ್ಲಿ ಭೇದ ಭಾವನೆಯಿಂದ ಕಲಹ, ಸಂಧಾನಗಳಲ್ಲಿ ಯತ್ನಿಸಬೇಡ.
ಎಲ್ಲದರಲ್ಲಿಯೂ ನಾನೇ ಆತ್ಮನಾಗಿ ಇದ್ದೇನೆ ಎಂಬುದನ್ನು ತಿಳಿದುಕೋ.
ಸರ್ವ ವಸ್ತುಗಳಲ್ಲಿಯೂ ಭೇದ ಬುದ್ಧಿಯನ್ನು ತೊಡೆದು ಹಾಕು.

ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾತ್ಮಾನಂ ಭಾವಯ ಕೋsಹಮ್|
ಆತ್ಮಜ್ಞಾನವಿಹೀನಾ ಮೂಢಾ-
ಸ್ತೇ ಪಚ್ಯಂತೇ ನರಕನಿಗೂಢಾಃ ||26||

ವಿವೇಕಿಯಾದವನು ಕಾಮ, ಕ್ರೋಧ, ಲೋಭ, ಮೋಹಗಳನ್ನು ತೊಡೆದು ಹಾಕಿ ಸರ್ವತ್ರ ಆತ್ಮನೊಬ್ಬನೇ ಇದ್ದಾನೆಂದೂ ಅವನೇ ನಾನು ಎಂದೂ ತಿಳಿದು ಸೋsಹಂ ಎಂದೇ ನಿಶ್ಚಯಿಸುತ್ತಾನೆ.
ಆತ್ಮಜ್ಞಾನವನ್ನು ಪಡೆಯದೇ ಇರುವ ಮೂಢ ಜನರು ನರಕದಲ್ಲಿ ಬಿದ್ದು ಯಾತನೆಗಳನ್ನು ಅನುಭವಿಸುತ್ತಾರೆ.

ಗೇಯಂ ಗೀತಾನಾಮಸಹಸ್ರಂ
ಧ್ಯೇಯಂ ಶ್ರೀಪತಿರೂಪಮಜಸ್ರಮ್|
ನೇಯಂ ಸಜ್ಜನಸಂಗೇ ಚಿತ್ತಂ
ದೇಯಂ ದೀನಜನಾಯ ಚ ವಿತ್ತಮ್ ||27||

ಭಗವದ್ಗೀತೆಯನ್ನು, ಭಗವಂತನ ಸಹಸ್ರನಾಮಗಳನ್ನು ಹಾಡಿ ಪಾರಾಯಣ ಮಾಡುತ್ತಿರಬೇಕು.
ಶ್ರೀಹರಿಯ ದಿವ್ಯರೂಪವನ್ನು ಸತತವೂ ಧ್ಯಾನಿಸುತ್ತಿರಬೇಕು.
ಸಜ್ಜನರ ಸಹವಾಸದಲ್ಲಿರುವಂತೆ ಮನಸ್ಸನ್ನು ಪ್ರೇರಿಸಬೇಕು.ದೀನ ಜನರಿಗೆ ಹಣದ ಸಹಾಯವನ್ನು ಮಾಡಬೇಕು.

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖಲೇಶಃ ಸತ್ಯಮ್|
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||28||

ಧನವು ಅನರ್ಥಕಾರಿಯೆಂದು ಸದಾ ಭಾವಿಸುತ್ತಿರು. ಧನದಿಂದ ಸುಖಲೇಶವೂ ಸತ್ಯವಾಗಿ ಇಲ್ಲ.
ಹಣವಿದ್ದವರಿಗೆ ತಮ್ಮ ಮಗನಿಂದಲೂ ಸಹ ವಿಪತ್ತು ಬಂದೀತೆಂಬ ಭಯವಿರುತ್ತದೆ.
ಈ ಪರಿಸ್ಥಿತಿಯು ಸರ್ವತ್ರ ಇರತಕ್ಕದ್ದೇ ಸರಿ.

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕವಿಚಾರಮ್|
ಜಾಪ್ಯಸಮೇತ ಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಮ್ ||29||

ಪ್ರಾಣಾಯಾಮ, ಪ್ರತ್ಯಾಹಾರ, ಜಪ, ಸಮಾಧಿ ಇವುಗಳನ್ನು ಮಾಡು.
ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸು.
ಮಹಾತ್ಮರು ಆದರಿಸಿದ ಪೂರ್ವಚರಿತೆ ಇದು.

ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ|
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಮ್ ||30||

ಜನರು ಸುಖಕ್ಕಾಗಿ ವೇಶ್ಯಾ ಸಹವಾಸವನ್ನೂ ಮಾಡುತ್ತಾರೆ.
ಅಯ್ಯೋ! ಆಮೇಲೆ ಶರೀರ ರೋಗದ ಗೂಡಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಮರಣವೇ ಗತಿ.
ಆದರೂ ಪಾಪಾಚರಣೆಯನ್ನು ಬಿಡುವುದಿಲ್ಲ.

ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ|
ಸೇಂದ್ರಿಯಮಾನಸನಿಯಮಾದೇವಂ
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್ ||31||

ಶ್ರೀಗುರುಚರಣಕಮಲದಲ್ಲಿ ದೃಢವಾದ ಭಕ್ತಿಯನ್ನಿಡು. ಆದಷ್ಟು ಬೇಗನೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದು.
ಇಂದ್ರಿಯಗಳನ್ನು ಮನಸ್ಸನ್ನು ಈ ಪ್ರಕಾರವಾಗಿ ನಿಗ್ರಹಿಸಿರು.
ಶೀಘ್ರದಲ್ಲಿಯೇ ನಿನ್ನ ಹೃದಯದಲ್ಲಿಯೇ ಇರುವ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತೀಯೆ.

ಭಜಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ ||

||ಇತಿ ಶ್ರೀಮಜ್ಜಗದ್ಗುರುಶಂಕರಾಚಾರ್ಯವಿರcಚಿತಂ ಭಜಗೋವಿಂದಸ್ತೋತ್ರಂ ಸಂಪೂರ್ಣಮ್||

Wednesday, 19 July 2017

ಮಾಡಿ ತೋರಿಸಬೇಕು... ಬೊಧಿಸುವುದಲ್ಲ...

1) *ಮಾತೃದೇವೋಭವ, ಪಿತೃದೇವೋಭವ* ಎಂದು ಹೇಳಿದ ದೇಶ ಭಾರತ ದೇಶ. ಆದರೆ ಅದನ್ನು ಆಚರಿಸುತ್ತಿರುವ ದೇಶ *ಆಸ್ಟ್ರೇಲಿಯಾ*.
(ಮಕ್ಕಳು ತಂದೆತಾಯಿಯನ್ನು ಗೌರವಿಸುವುದರಲ್ಲಿ ಮೊದಲ ಸ್ಥಾನ ಆಸ್ಟ್ರೇಲಿಯಾದು)

2) *ಗುರು ದೇವೋಭವ* ಎಂದು ಹೇಳಿದ ದೇಶ ಭಾರತ…ಆದರೆ ಅದನ್ನು ಆಚರಿಸುವುದು ಚೀನಾ.
(ಗುರುವನ್ನು ಗೌರವಿಸುವುದರಲ್ಲಿ *ಚೀನಾ* ಮೊದಲ ಸ್ಥಾನದಲ್ಲಿದೆ)

3) *ಯತ್ರ ನಾರ್ಯಂತು ಪೂಜ್ಯತೆ*… ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ನಾರ್ವೆ.
(ಮಹಿಳೆಯರಿಗೆ ಭದ್ರತೆ ಮತ್ತು ಗೌರವ ಕೊಡುವುದರಲ್ಲಿ *ನಾರ್ವೆ*ದೇಶ ಮೊದಲ ಸ್ಥಾನ)

4) *ಹಿರಿಯರನ್ನು, ವೃದ್ಧರನ್ನು ಗೌರವಿಸಿ*ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ಐಸ್‌ಲ್ಯಾಂಡ್.
(ಮೊದಲ ಸ್ಥಾನ *ಐಸ್‌ಲ್ಯಾಂಡ್*‍ದು)

5) *ಸತ್ಯಮೇವ ಜಯತೆ* ಎಂದು ಹೇಳಿದ ದೇಶ ಭಾರತ. ಆದರೆ ಅದನ್ನು ಆಚರಿಸುವುದು ಯುಕೆ.
(ಪ್ರಾಮಾಣಿಕವಾಗಿ ಮೊದಲ ಸ್ಥಾನ *ಯುನೈಟೆಡ್ ಕಿಂಗ್‍ಡಂ*ದೇ)

6) *ಕಷ್ಟೇಫಲಿ, ಕೃಷಿತೋ ನಾಸ್ತಿ ದುರ್ಭಿಕ್ಷಂ* ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ದಕ್ಷಣ ಕೊರಿಯಾ.
(ಹಾರ್ಡ್‌ವರ್ಕ್‌ನಲ್ಲಿ ಮೊದಲ ಸ್ಥಾನ *ದಕ್ಷಿಣ ಕೊರಿಯಾದು*)

7) ಜಗತ್ತಿಗೆ *ಶಾಂತಿ ಸಂದೇಶ* ನೀಡಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ನಾರ್ವೆ.
(ಪ್ರಶಾಂತತೆಯಲ್ಲಿ *ನಾರ್ವೆ*ಯದು ಮೊದಲ ಸ್ಥಾನ)

8) *ಭಗವದ್ಗೀತೆ*ಯನ್ನು ಬೋಧಿಸಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ಜಪಾನ್.
(ಕರ್ತವ್ಯ ನಿರ್ವಹಣೆಯಲ್ಲಿ ಅಂಕಿತಭಾವದಲ್ಲಿ *ಜಪಾನ್*‌ದು ಮೊದಲ ಸ್ಥಾನ)

9) ಎಷ್ಟೋ *ನೀತಿ ನಿಯಮ*ಗಳನ್ನು ಜಾರಿಗೊಳಿಸಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ಸಿಂಗಪುರ.
(ಶಿಸ್ತಿನಲ್ಲಿ ಮೊದಲ ಸ್ಥಾನದಲ್ಲಿ *ಸಿಂಗಪುರ* ಇದೆ)

10) *ಶಿಕ್ಷಣ, ಜ್ಞಾನ*ವನ್ನು ಪ್ರವಹಿಸಿದ ದೇಶ ಭಾರತ. ಆದರೆ ಅದನ್ನು ಎತ್ತಿಹಿಡಿದ ದೇಶ ಫಿನ್‍ಲ್ಯಾಂಡ್.
(ಶಿಕ್ಷಣ, ಮೌಲ್ಯಗಳ ವಿಚಾರದಲ್ಲಿ *ಫಿನ್‍ಲ್ಯಾಂಡ್* ಮೊದಲ ಸ್ಥಾನದಲ್ಲಿದೆ)

ಇಲ್ಲಿ ಮೊದಲ ಸ್ಥಾನವನ್ನು ಮಾತ್ರ ತಿಳಿಸಿದ್ದೇವೆ. ಮೇಲಿನ ವಿಷಯಗಳಲ್ಲಿ ಸ್ವಲ್ಪ ವ್ಯತ್ಯಾಸದೊಂದಿಗೆ ಟಾಪ್ ಟ್ವೆಂಟಿಯಲ್ಲಿರುವ ದೇಶಗಳಿವು..(ರ‍‍್ಯಾಂಡಂ ಆಗಿ)

ನಾರ್ವೆ, ಐಸ್‍ಲ್ಯಾಂಡ್, ಡೆನ್ಮಾರ್ಕ್, ಸ್ವೀಡನ್, ಫಿನ್‌ಲ್ಯಾಂಡ್, ಜಪಾನ್, ಯುಕೆ, ಚೀನಾ, ಸ್ವಿಟ್ಜಲ್ಯಾಂಡ್ದ್, ನ್ಯೂಜಿಲ್ಯಾಂಡ್ದ್, ಸಿಂಗಪುರ, ದಕ್ಷಿಣ ಕೊರಿಯಾ, ನೆದರ್ಲ್ಯಾಂಡ್, ಯುಎಇ, ಆಸ್ಟ್ರೇಲಿಯಾ…

ಹೇಳುವುದಲ್ಲ. ಮಾಡಿ ತೋರಿಸಿದರೆ ಅದಕ್ಕೆ ಬೆಲೆ ಇರುತ್ತದೆ. ಮೇಲಿನ ವಿಚಾರಗಳಲ್ಲಿ *ಭಾರತ* ಮಾತ್ರ ಕೊನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರುವ ದಿನಗಳು ಬರಲಿ ಎಂದು ಆಶಿಸೋಣ. ಬರೀ ಮಾತಿನಲ್ಲಷ್ಟೆ ಅಲ್ಲ ಒಬ್ಬರ ಭುಜಕ್ಕೆ ಇನ್ನೊಬ್ಬರು ಭುಜ ಕೊಟ್ಟು….ಜಗತ್ತಿಗೆ ನಾವು ಪರಿಚಯಿಸಿದ ಎಲ್ಲಾ ವಿಚಾರಗಳಲ್ಲೂ ಪ್ರಥಮ ಸ್ಥಾನದಲ್ಲಿ ನಿಂತು
*ಮೇರಾ ಭಾರತ್ ಮಹಾನ್* ಎಂಬ ವಾಕ್ಯವನ್ನು ಪ್ರತಿಪಾದಿಸಿ.🇮🇳🇮🇳🇮🇳 JAI HIND🇳🇪🇳🇪🇳🇪

ವರ್ಣಮಾಲೆ...

ಕನ್ನಡಿಗರಿಗೊಂದು ಕಿವಿಮಾತು
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ  ಅಃ ಈಗೇ ಆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತ ವ್ಯಾಯಮವಾಗುತ್ತದೆ.
ಶುದ್ಧ ಪರಿಶುದ್ಧ ಜೇನಿನ ಹಾಗೆ, ನಮ್ಮ ಕನ್ನಡ ಭಾಷೆ ಇದೆ.
ಪೂರ್ವದಲ್ಲಿ ಗುರುಗಳು ಮಕ್ಕಳ ಹತ್ತಿರ ವರ್ಣಮಾಲೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಈಗೇ ಕಂಠಪಾಠ ಮಾಡುವುದರಿಂದ ಕಂಠದಿಂದ ಮುಖದವರೆಗೆ ನಮಗೆ ತಿಳಿಯದೆನೆ ವ್ಯಾಯಾಮವಾಗುತ್ತಿತ್ತು.
ಹೇಗೆಂದರೆ.,
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಈಗೇ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತಾ ವ್ಯಾಯಾಮವಾಗುತ್ತದೆ.
ಕ ಖ ಗ ಘ ಙ  - ಕಂಠ ಭಾಗ
ಚ ಛ ಜ ಝ ಞ - ಕಂಠದ ಮೇಲಿನ ನಾಲಿಗೆಯ ಮೊದಲ ಭಾಗ
ಟ ಠ ಡ ಢ ಣ - ನಾಲಿಗೆಯ ಮಧ್ಯಭಾಗ
ತ ಥ ದ ಧ ನ - ನಾಲಿಗೆಯ ಕೊನೆಯ ಭಾಗ
ಪ ಫ ಬ ಭ ಮ - ತುಟಿಗಳು
ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ - ಬಾಯೆಲ್ಲ ಈಗೇ ಮುಖವೆಲ್ಲಾ ಹಲ್ಲುಗಳ ಸಮೇತ ವ್ಯಾಯಾಮವಾಗುತ್ತದೆ.
ಸುಂದರ ಸುಮಧುರ ಸೌಮ್ಯವಾದ ಮೃದುತ್ವದಿಂದ ಕೂಡಿದ ಪರಿಶುದ್ಧ ಜೇನು ನಮ್ಮ ಕನ್ನಡ ಭಾಷೆ.ಆನಂದವಾಗಿ ಮನಸ್ಸಿಗೆ ಹಾಯ್! ಆಗಿ ಕೇಳಿಸುವ ಮಾತುಗಳು ನಮ್ಮೆಲ್ಲರ ಬಾಯಿಂದ ಉಚ್ಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ. ಕನ್ನಡ ಭಾಷೆಯನ್ನು ಅಂದವಾಗಿ ಬರೆಯುವವರಿಗೆ ಚಿತ್ರಕಲೆ ಸ್ವಂತವಾಗುವುದಂತೆ ಏಕೆಂದರೆ ನಮ್ಮ ವರ್ಣಮಾಲೆಗೆ ಅಷ್ಟು ಮೆಲುಕು ಇದೆಯಂತೆ.
ನಮ್ಮೊಳಗಿನ ಭಾವವನ್ನು ವಿವರವಾಗಿ ಮಾತೃಭಾಷೆಯಲ್ಲಿ ವರ್ಣಿಸುವಷ್ಟು ಮತ್ತೆ  ಬೇರೆ ಯಾವ ಭಾಷೆಯಲ್ಲೂ ವರ್ಣಿಸಲು ಸಾಧ್ಯವಿಲ್ಲ. ಕನ್ನಡಿಗರೆಂದರೆ ಮುಂಜಾವ ಅರಳಿದ ಪುಷ್ಪದಂತೆ  ಅವನ್ನೋಡಿದರೆ ಎಷ್ಟು ಆಹ್ಲಾದಬರಿತವಾಗುವುದೋ, ಹಾಗೆ ಕನ್ನಡಿಗರ ಮನಸ್ಸು.
ಕನ್ನಡದಲ್ಲಿ ಮಾತಾಡಿ...
ಕನ್ನಡದಲ್ಲಿ ಬರೆಯಿರಿ....
ಕನ್ನಡ ಪುಸ್ತಕಗಳನ್ನು ಓದಿರಿ, ಓದಿಸಿ..,
ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ..,

ಕರ್ನಾಟಕದ ಕೇಲವು ಊರುಗಳು - ಅಲ್ಲಿನ ವಿಶೇಷತೆಗಳು:-


🔶ಅಣ್ಣಿಗೇರಿ -ಪಂಪನ ಜನ್ಮ ಸ್ಥಳ

🔷ರಾಯಚೂರು - ಶಕ್ತಿನಗರ (power)

🔶ಮೈಸೂರು - ಶ್ರೀಗಂಧದ ಕೆತ್ತನೆಗಳು

🔷ಬೀದರ್ - ಬಿದರಿ ಕಲೆ

🔶ಹಾವೇರಿ - ಏಲಕ್ಕಿ ಹಾರ

🔷ಹೊನ್ನಾವರ - ಅಪ್ಸರಕೊಂಡ

🔶ನಂಜನಗೂಡು - ಬಾಳೆಹಣ್ಣು

🔷ಕಲಘಟಗಿ - ಮರದ ತೊಟ್ಟಿಲು

🔶ಹೊನ್ನಾವರ - ಕಾಸರಗೋಡು ಬೀಚ್

🔷ಬನ್ನೂರು - ಕುರಿಗಳು

🔶ತಿಪಟೂರು - ಕುದುರೆಗಳು

🔷ಮುಧೋಳ - ನಾಯಿಗಳು

🔶ಚೆನ್ನಪಟ್ಟಣ - ಮರದ ಗೊಂಬೆಗಳು

🔷ಕುಮಟಾ - ಮಿರ್ಜಾನ್ ಕೋಟೆ

🔶ಕಿನ್ನಾಳ - ಕಲಾತ್ಮಕ ಗೊಂಬೆಗಳು

🔷ಮಂಗಳೂರು - ಹಂಚುಗಳು

🔶ಹಡಗಲಿ/ಮೈಸೂರು - ಮಲ್ಲಿಗೆ ಹೂ

🔷ಸಿದ್ದಾಪುರ - ಹೂಸುರು ಡ್ಯಾಮ್

🔶ಇಳಕಲ್ - ಸೀರೆ

🔷ಗೋಕಾಕ್ - ಖರದಂಟು

🔶ಧಾರವಾಡ - ಪೇಡಾ

🔷ಕುಂದಾಪುರ - ಮಲ್ಪೆ ಬೀಚ್

🔶ಗೋಕರ್ಣ - ಓಂ ಬೀಚ್

🔷ಗುಳೇದಗುಡ್ಡ - ಖಣ

🔶ಶಹಾಬಾದ - ಕಲ್ಲುಗಳು

🔷ಯಲ್ಲಾಪುರ - ಜೇನುಕಲ್ಲು ಗೂಡು

🔶ಮಾವಿನಕುರ್ವೆ - ಬೀಗಗಳು

🔷ಬೆಳಗಾವಿ - ಕುಂದಾ

🔶ಮಂಡ್ಯ - ಕಬ್ಬು

🔷ಕುಮಟಾ - ಅಪ್ಸರಕೊಂಡ

🔶ಬ್ಯಾಡಗೀ - ಮೆಣಸಿನಕಾಯಿ

🔷ಉಡುಪಿ - ಕಾಪು ಬೀಚ್

🔶ಮುರ್ಡೇಶ್ವರ - ಅತಿ ಎತ್ತರದ ರಾಜಗೋಪುರ

🔷ದಾವಣಗೇರೆ - ಬೆಣ್ಣೆ ದೋಸೆ

🔶ಚಿಕ್ಕಮಂಗಳೂರು - ಕಾಫಿ

🔷ಚಿತ್ರದುರ್ಗ - ಕಲ್ಲಿನ ಕೋಟೆ

🔶ಶಿವಮೊಗ್ಗ - ಮಲೆನಾಡು

🔷ಯಲ್ಲಾಪುರ - ಮಾಗೋಡು ಪಲ್ಸ್

🔶ಹಾಸನ - ಶಿಲ್ಪ ಕಲೆ

🔷ತುಮಕೂರು - ಶಿಕ್ಷಣ ಕಾಶಿ

🔶ಕಂಚಿಕೊಪ್ಪ - ಕೊಸಂಬ್ಬರಿ/ ಕ್ಯಾಕೇಕರೆಹಣ್ಣ

🔷ಹೊಸಹಳ್ಳಿ - ಮಡಿಕೆ

🔶ಹೊಸದುರ್ಗ - ಬಂಡೆ/ ದಾಳಿಂಬೆ

🔷ಶಿರಸಿ - ಯಾಣ

🔶ಅರಸೀಕೆರೆ - ಗಣಪತಿ

🔷ಬಾಣಾವರ - ಬಟ್ಟೆ

🔶ಚನ್ನಗಿರಿ - ಅಡಿಕೆ

🔷ಕುದುರೆಮುಖ - ಕಬ್ಬಿಣ

🔶ಸಿದ್ದಾಪುರ -ಭೀಮನ ಗುಡ್ಡ

🔷ಮಾಡಾಳು - ಗೌರಮ್ಮ

🔶ಮಡೀಕೆರಿ - ಟೀ

🔷ರಾಣೇಬೇನ್ನೊರು - ರೊಟ್ಟಿ

🔶ಕಾರವಾರ - ಮೀನು

🔷ಗದಗ - ಪ್ರಿಂಟಿಂಗ್

🔶ಬಳ್ಳಾರಿ - ಗಣೆ

🔷ಹೊನ್ನಾವರ - ಕರ್ಕಿ ಬೀಚ್

🔶ಕೋಲಾರ - ಚಿನ್ನದ ಗಣ

🔷ಮಂಗಳೂರು - ಬಂದರು

🔶ಶಿವಮೊಗ್ಗ - ಕೊಡಚಾದ್ರಿ ಬೆಟ್ಟ

🔷ಸಿದ್ದಾಪುರ - ಉಂಚಳ್ಳಿ ಪಲ್ಸ್

🔶ಚಿಕ್ಕಮಂಗಳೂರು - ಹೆಬ್ಬೆ ಪಲ್ಸ್

🔷ಶಿರಸಿ - ಸಹಸ್ರ ಲಿಂಗ

🔶ಬೆಳಗಾವಿ - ಗೋಕಾಕ್ ಪಲ್ಸ್

🔷ಕಾರವಾರ - ಸಮುದ್ರ ಕೀನಾರೆ

🔶ಖಾನಾಪೂರ-ಭಿಮಗಡ ಹುಲಿಗಳ ಕಾಡು

🔶ಚಿಕ್ಕಬಳ್ಳಾಪುರ - ಸ್ಕಂದಗೀರಿ ಬೆಟ್ಟ

🔷ಮುಡಗೋಡು - ಟಿಬೇಟಿಯನ್ ಕಾಲೋನಿ

🔶ಚಿಕ್ಕಮಂಗಳೂರು - ಮುಳ್ಳಯ್ಯನಗೀರಿ

🔷ದಾಡೇಲಿ - ವಂಶಿ ಅಭಯಾರಣ್ಯ

🔶ವಿಜಾಪುರ - ಕೋಟೆ

🔷ಸಿದ್ದಾಪುರ - ಬುರುಡೆ ಪಲ್ಸ್

🔶ಶಿವಮೋಗ್ಗ /ಸಾಗರ -ಪಲ್ಸ್

🔷ಶಿವಮೊಗ್ಗ - ಆಗೋಬೇ

🔶🔷🔶 East Or West Karnataka is Best

Wednesday, 12 July 2017

You Wasted your 20 years !!

Once, Swamiji was wandering near the Himalayas. During the journey, he came across a river. The boat was used as a means of transportation there. He saw that the boat had left the river-bank just before he arrived. So, he sat on the river-bank waiting for the boat to return.

Soon, a Sadhu (enlightened sage) arrived at the river-bank and saw Swamiji sitting there waiting for the boat and asked him, “What’s your name?”

“I am Vivekanand”, Swamiji replied.

Sadhu tried to mock him and said, “So, you are the famous Vivekanand who thinks that he has become a great sage by speaking in foreign nations.”

Sadhu continued, “Could you cross the river? See, I can cross it by merely walking on it” and demonstrated by walking for few steps on the river.

Swamiji saw it and replied in a humble tone, “It’s a great power indeed. How much time did it take for you to get this power?”

Sadhu proudly replied, “It’s not so easy. I had to bear the tough Himalayas for 20 years, devote myself to tapasya (penance) and after these extreme sadhana (practice) I got this power!”

Swamiji replied, “You wasted 20 years of your life doing something which a boat can do in 5 minutes. You could have instead devoted those 20 years serving the poor. That was your waste of time, not wisdom!”

Sadhu was speechless upon hearing it.

Tuesday, 11 July 2017

ಕಟು ಸತ್ಯ

-: 🌸ಇದು ಕಟು-ಕಹಿ ಸತ್ಯ🌸 :-

🌸 ಗೆಜ್ಜೆಯ ಬೆಲೆ ಸಾವಿರ ಸಾವಿರ
ಹಾಕುವುದು ಕಾಲಿನಲ್ಲಿ ...

ಕುಂಕುಮದ ಬೆಲೆ ಪೈಸೆಯಲ್ಲಿ
ಆದರೆ ಹಚ್ಚುವದು ಹಣೆಯಲ್ಲಿ ...

🌸💰 ಬೆಲೆ ಮುಖ್ಯವಲ್ಲ ..
    🔴ಇಲ್ಲಿ ಕೃತಿ ಮುಖ್ಯ ...

🌸 ಉಪ್ಪಿನಂತೆ ಕಟುಮಾತನು
ಹೇಳುವವನು ನಿಜ ಸ್ನೇಹಿತ ...

ಸಕ್ಕರೆಯಂತೆ ಸಿಹಿ ಮಾತಾಡುವ
ನಯ ವಂಚಕ....

🌸 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ....

ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ...

🌸 ಈ..ಮಂದಿರ - ಮಸೀಧಿಗಳು
ಬಹಳ ವಿಸ್ಮಯ ....

ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತಾನೆ...

ಶ್ರೀಮಂತ ಒಳಗೆ ಭಿಕ್ಷೆ ಬೇಡುತಾನೇ....

🌸 ಕಾಣದ ದೇವರಿಗೆ ಹಾಲು ಖರ್ಜೂರ ನೈವೇದ್ಯಾ ....

ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....

🌸 ಏ ಮಾನವಾ ಈ ಜೀವನವು ಆಷ್ಟೊಂದು ಒಳ್ಳೆಯದೇನಲ್ಲ ....

ಒಳ್ಳೆಯದೇ ಆಗಿದ್ದರೆ ಈ ಮನುಷ್ಯ
ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ ...

ಮತ್ತು ಹೋಗುವಾಗ ಎಲ್ಲರನು ಅಳಿಸಿ ಹೋಗುತ್ತಿರಲಿಲ್ಲ....

🌸 ಬಾ ಎಂದರೂ ಸನ್ಮಾರ್ಗದಲ್ಲಿ ಯಾರೂ ಬರುವುದಿಲ್ಲ...

ಯಾರೂ ಕರೆಯದಿದ್ದರೊ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ....

ಅದಕ್ಕೇ...

🌸 ಸಾರಾಯೀ ಮಾರುವವ ಕುಳಿತಲ್ಲಿಗೇ ಎಲ್ಲರೂ.... ಹೋಗ್ತಾರೆ ...

ಆದರೆ ಹಾಲು ಮಾರುವವ ಅವನೇ ಎಲ್ಲರ ಬೀದಿ ಬೀದೀ ಮನೆ ಮನೆಗೆ ಬರತಾನೆ....

🌸 ಹಾಲು ಮಾರುವನಿಗೆ ಕೇಳತಾರೆ ಹಾಲಿನಲ್ಲಿ ನೀರು ಬೆರೆಸಿದಿಯಾ ಅಂತಾ.....

ದುಪ್ಪಟ್ಟು ಹಣ ಕೊಟ್ಟ ಕೊಂಡ ಸಾರಾಯಿಗೇ ತಾವೇ ಕೈಯಾರ ನೀರು ಬೆರಸಿ ಕುಡಿತಾರೆ..
ವಾರೆ ದುನಿಯಾ....ವಾ

🌸 ಮದುವೆ ಭಾರಾತುಗಳಲ್ಲಿ ಮದುಮಗ ಹಿಂದೆ..
ದುನಿಯಾ ಮುಂದೇ....

ಶವ ಯಾತ್ರೆಯಲ್ಲಿ ಹೆಣ ಮುಂದೆ
ದುನಿಯಾ ಹಿಂದೆ ಹಿಂದೆ....

🌸 ಹೆಣವನ್ನು ಮಟ್ಟಿದರೆ ಸ್ನಾನ
ಮಾಡ್ತಾರೆ ....

ಮೂಕ ಪ್ರಾಣಿಯ ಕೊಂದು ಅದರ ಹೆಣವನ್ನು ತಿಂತಾರೆ ...

🌸 ಮೊಂಬತ್ತಿ ಹಚ್ಚಿ ಸತ್ತವರನ್ನು
ನೆನೆಯುತ್ತಾರೆ ....

ಮೊಂಬತ್ತಿಯ ಆರಿಸಿ ಜನ್ಮ ದಿನ
ಆಚರಣೆ ಮಾಡ್ತಾರೆ....

🌸 ಯಾವುದು ನಿನ್ನ ಭಾಗ್ಯದಲ್ಲಿ
ಇದೆಯೊ ಅದು ನಿನಗೆ ದೊರತೇ ದೊರೆಯುತ್ತದೆ ...

ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೊರೆತರೂ ಹೊರಟು ಹೋಗುತ್ತದೆ ....

*ಇದುವೇ ಸತ್ಯ ಸತ್ಯ ಸತ್ಯ*