Wednesday, 19 July 2017

ಮಾಡಿ ತೋರಿಸಬೇಕು... ಬೊಧಿಸುವುದಲ್ಲ...

1) *ಮಾತೃದೇವೋಭವ, ಪಿತೃದೇವೋಭವ* ಎಂದು ಹೇಳಿದ ದೇಶ ಭಾರತ ದೇಶ. ಆದರೆ ಅದನ್ನು ಆಚರಿಸುತ್ತಿರುವ ದೇಶ *ಆಸ್ಟ್ರೇಲಿಯಾ*.
(ಮಕ್ಕಳು ತಂದೆತಾಯಿಯನ್ನು ಗೌರವಿಸುವುದರಲ್ಲಿ ಮೊದಲ ಸ್ಥಾನ ಆಸ್ಟ್ರೇಲಿಯಾದು)

2) *ಗುರು ದೇವೋಭವ* ಎಂದು ಹೇಳಿದ ದೇಶ ಭಾರತ…ಆದರೆ ಅದನ್ನು ಆಚರಿಸುವುದು ಚೀನಾ.
(ಗುರುವನ್ನು ಗೌರವಿಸುವುದರಲ್ಲಿ *ಚೀನಾ* ಮೊದಲ ಸ್ಥಾನದಲ್ಲಿದೆ)

3) *ಯತ್ರ ನಾರ್ಯಂತು ಪೂಜ್ಯತೆ*… ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ನಾರ್ವೆ.
(ಮಹಿಳೆಯರಿಗೆ ಭದ್ರತೆ ಮತ್ತು ಗೌರವ ಕೊಡುವುದರಲ್ಲಿ *ನಾರ್ವೆ*ದೇಶ ಮೊದಲ ಸ್ಥಾನ)

4) *ಹಿರಿಯರನ್ನು, ವೃದ್ಧರನ್ನು ಗೌರವಿಸಿ*ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುವುದು ಐಸ್‌ಲ್ಯಾಂಡ್.
(ಮೊದಲ ಸ್ಥಾನ *ಐಸ್‌ಲ್ಯಾಂಡ್*‍ದು)

5) *ಸತ್ಯಮೇವ ಜಯತೆ* ಎಂದು ಹೇಳಿದ ದೇಶ ಭಾರತ. ಆದರೆ ಅದನ್ನು ಆಚರಿಸುವುದು ಯುಕೆ.
(ಪ್ರಾಮಾಣಿಕವಾಗಿ ಮೊದಲ ಸ್ಥಾನ *ಯುನೈಟೆಡ್ ಕಿಂಗ್‍ಡಂ*ದೇ)

6) *ಕಷ್ಟೇಫಲಿ, ಕೃಷಿತೋ ನಾಸ್ತಿ ದುರ್ಭಿಕ್ಷಂ* ಎಂದು ಹೇಳಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ದಕ್ಷಣ ಕೊರಿಯಾ.
(ಹಾರ್ಡ್‌ವರ್ಕ್‌ನಲ್ಲಿ ಮೊದಲ ಸ್ಥಾನ *ದಕ್ಷಿಣ ಕೊರಿಯಾದು*)

7) ಜಗತ್ತಿಗೆ *ಶಾಂತಿ ಸಂದೇಶ* ನೀಡಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ನಾರ್ವೆ.
(ಪ್ರಶಾಂತತೆಯಲ್ಲಿ *ನಾರ್ವೆ*ಯದು ಮೊದಲ ಸ್ಥಾನ)

8) *ಭಗವದ್ಗೀತೆ*ಯನ್ನು ಬೋಧಿಸಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ಜಪಾನ್.
(ಕರ್ತವ್ಯ ನಿರ್ವಹಣೆಯಲ್ಲಿ ಅಂಕಿತಭಾವದಲ್ಲಿ *ಜಪಾನ್*‌ದು ಮೊದಲ ಸ್ಥಾನ)

9) ಎಷ್ಟೋ *ನೀತಿ ನಿಯಮ*ಗಳನ್ನು ಜಾರಿಗೊಳಿಸಿದ ದೇಶ ಭಾರತ. ಆದರೆ ಆಚರಿಸುತ್ತಿರುವುದು ಸಿಂಗಪುರ.
(ಶಿಸ್ತಿನಲ್ಲಿ ಮೊದಲ ಸ್ಥಾನದಲ್ಲಿ *ಸಿಂಗಪುರ* ಇದೆ)

10) *ಶಿಕ್ಷಣ, ಜ್ಞಾನ*ವನ್ನು ಪ್ರವಹಿಸಿದ ದೇಶ ಭಾರತ. ಆದರೆ ಅದನ್ನು ಎತ್ತಿಹಿಡಿದ ದೇಶ ಫಿನ್‍ಲ್ಯಾಂಡ್.
(ಶಿಕ್ಷಣ, ಮೌಲ್ಯಗಳ ವಿಚಾರದಲ್ಲಿ *ಫಿನ್‍ಲ್ಯಾಂಡ್* ಮೊದಲ ಸ್ಥಾನದಲ್ಲಿದೆ)

ಇಲ್ಲಿ ಮೊದಲ ಸ್ಥಾನವನ್ನು ಮಾತ್ರ ತಿಳಿಸಿದ್ದೇವೆ. ಮೇಲಿನ ವಿಷಯಗಳಲ್ಲಿ ಸ್ವಲ್ಪ ವ್ಯತ್ಯಾಸದೊಂದಿಗೆ ಟಾಪ್ ಟ್ವೆಂಟಿಯಲ್ಲಿರುವ ದೇಶಗಳಿವು..(ರ‍‍್ಯಾಂಡಂ ಆಗಿ)

ನಾರ್ವೆ, ಐಸ್‍ಲ್ಯಾಂಡ್, ಡೆನ್ಮಾರ್ಕ್, ಸ್ವೀಡನ್, ಫಿನ್‌ಲ್ಯಾಂಡ್, ಜಪಾನ್, ಯುಕೆ, ಚೀನಾ, ಸ್ವಿಟ್ಜಲ್ಯಾಂಡ್ದ್, ನ್ಯೂಜಿಲ್ಯಾಂಡ್ದ್, ಸಿಂಗಪುರ, ದಕ್ಷಿಣ ಕೊರಿಯಾ, ನೆದರ್ಲ್ಯಾಂಡ್, ಯುಎಇ, ಆಸ್ಟ್ರೇಲಿಯಾ…

ಹೇಳುವುದಲ್ಲ. ಮಾಡಿ ತೋರಿಸಿದರೆ ಅದಕ್ಕೆ ಬೆಲೆ ಇರುತ್ತದೆ. ಮೇಲಿನ ವಿಚಾರಗಳಲ್ಲಿ *ಭಾರತ* ಮಾತ್ರ ಕೊನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೇರುವ ದಿನಗಳು ಬರಲಿ ಎಂದು ಆಶಿಸೋಣ. ಬರೀ ಮಾತಿನಲ್ಲಷ್ಟೆ ಅಲ್ಲ ಒಬ್ಬರ ಭುಜಕ್ಕೆ ಇನ್ನೊಬ್ಬರು ಭುಜ ಕೊಟ್ಟು….ಜಗತ್ತಿಗೆ ನಾವು ಪರಿಚಯಿಸಿದ ಎಲ್ಲಾ ವಿಚಾರಗಳಲ್ಲೂ ಪ್ರಥಮ ಸ್ಥಾನದಲ್ಲಿ ನಿಂತು
*ಮೇರಾ ಭಾರತ್ ಮಹಾನ್* ಎಂಬ ವಾಕ್ಯವನ್ನು ಪ್ರತಿಪಾದಿಸಿ.🇮🇳🇮🇳🇮🇳 JAI HIND🇳🇪🇳🇪🇳🇪

No comments:

Post a Comment