Friday, 17 November 2017

ಶಿವಾಜಿ ಮಹಾರಾಜ

ಮರಾಠರು
ಮರಾಠ ಮನೆತನ
._______________________________________
1. ಶಿವಾಜಿ ಯಾವಾಗ ಜನಿಸಿದನು?
*1627 ಎಪ್ರಿಲ್20*
___________________________________
2. ಶಿವಾಜಿ ಹುಟ್ಟಿದ ಊರು ಯಾವುದು?
*ಶಿವನೇರಿ ದುರ್ಗ.(ಪುಣೆ ಹತ್ತಿರ)*
___________________________________
3. ಶಿವಾಜಿ ತಂದೆ ತಾಯಿ ಯಾರು?
*ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ*
___________________________________
4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು?
*ಭಗವಾನ್ ರಾಮದಾಸ್*
___________________________________
5. ಶಿವಾಜಿಯ ಜೀವನದ ಗುರು ಯಾರು?
*ದಾದಾಜಿ ಕೊಂಡ ದೇವ*
___________________________________
6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?
*ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ*
___________________________________
7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು?
*ಅಫ್ಜಲ್ ಖಾನ್*
___________________________________
8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು?
*ಗೆರಲ್ಲಾ*
___________________________________
9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು?
*ಷಾಹಿಸ್ತಾ ಖಾನ್*
___________________________________
10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು?
*ಜೈಸಿಂಗ್*
___________________________________
11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು?
*ಪುರಂದರ ಒಪ್ಪಂದ*
___________________________________
12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು?
*ಅಗ್ತಾ*
___________________________________
13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು?
*ರಾಯಗಡ*
___________________________________
14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ?
*1674 ಜೂನ್ 16*
___________________________________
15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ?
*1677 ರಲ್ಲಿ ಚಿಕ್ಕದೇವರಾಯರಿಂದ ಸೋತನು*
___________________________________
16. ಶಿವಾಜಿ ಯಾವಾಗ ಮರಣ ಹೊಂದಿದನು?
*1680 ಏಪ್ರಿಲ್ 14*
___________________________________
17. ಶಿವಾಜಿ ಸಮಾಧಿ ಎಲ್ಲಿದೆ?
*ರಾಯಗಡ*
___________________________________
18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ?
*ಅಪ್ಟಪ್ರಧಾನ*
___________________________________
19. ಪೇಶ್ವೆ ಎಂದರೇ ಯಾರು?
*ಪ್ರಧಾನಮಂತ್ರಿ*
___________________________________
20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ?
*ಅಮಾತ್ಯ*
___________________________________
21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು?
*ಚೌತ್ ಮತ್ತು ಸರ್ ದೇಶ ಮುಖ್*
___________________________________
22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು?
*ಕಾಥಿ*
___________________________________
23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು?
*ಮಹಾರಾಷ್ಟ್ರ ದ ಕೊಲಾಬಾ*
___________________________________
24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು?
*ಜಿಂಜಿ ತಮಿಳುನಾಡು*
___________________________________
25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು?
*ಭಾಗಿರ್ ಮತ್ತು ಶಿಲಾಧಾರನ್*
___________________________________
26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು?
*ಕೆಳದಿ ಚೆನ್ನಮ್ಮ*
___________________________________
27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು?
*ಗ್ರಾಂಡ್ ಡಫ್ ಇತಿಹಾಸ ಕಾರ*
___________________________________
28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು?
*ಶಿವಾಜಿ ಮೊದಲ ಮಗ ಸಾಂಭಾಜಿ*
___________________________________
29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು?
*ರಾಜಾರಾಮ್*
___________________________________
30. ಯಾರ ಕಾಲದಲ್ಲಿ  ಮರಾಠ ಮನೆತನ ಎರಡು ಭಾಗವಾಯಿತು?
*ಸಾಹು ಮತ್ತು ಎರಡನೇ ಶಿವಾಜಿ*
___________________________________
31.  ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು?
*1713*
___________________________________
32. ಮರಾಠರ ಮೊದಲ ಪೇಶ್ವೆ ಯಾರು?
*ಬಾಲಾಜಿ ವಿಶ್ವನಾಥ*
___________________________________
33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು?
*ಸೇನೆಯ ಕಾರ್ಯಭಾರದ ನಿಯೋಗಿ*
___________________________________
34. ಮರಾಠರ ಪ್ರಸಿದ್ಧ ಪೇಶ್ವೆ ಯಾರು?
*ಒಂದನೇ ಬಾಜಿರಾವ್*
___________________________________
35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ?
*ಒಂದನೇ ಬಾಜಿರಾವ್*
___________________________________
36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು?
*ಹಿಂದೂ ಪಾದ್ ಬಾದ್ ಷಾಹಿ*
___________________________________
37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು?
*ಒಂದನೇ ಬಾಜಿರಾವ್*
___________________________________
38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು?
*ಬಾಲಾಜಿ ಬಾಜಿರಾವ್*
___________________________________
39. ಪೇಶ್ವೆ ಗಳ ರಾಜಧಾನಿ ಯಾವುದು?
*ಪುಣೆ*
___________________________________
40. ಗೆರಿಲ್ಲಾ ಯ

ುದ್ದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು?
*ಬಾಲಾಜಿ ಬಾಜೀರಾವ್*
________

Friday, 10 November 2017

ಗುಬ್ಬಚ್ಚಿಯ ಇಚ್ಚಾಶಕ್ತಿ

ಒಂದು ಪುಟ್ಟ ಗುಬ್ಬಚ್ಚಿಯ ಮೊಟ್ಟೆ ಸಮುದ್ರದ ಪ್ರವಾಹದಲ್ಲಿ ಕೊಚ್ಚಿಹೋಗುತ್ತದೆ.
ಗುಬ್ಬಚ್ಚಿ ಎಷ್ಟೇ ಬೇಡಿದರೂ ಸಮುದ್ರರಾಜನು ಕಣ್ತೆರೆಯುವುದಿಲ್ಲ.
ಕೋಪಗೊಂಡ ಗುಬ್ಬಚ್ಚಿ ಸಮುದ್ರದಲ್ಲಿ ರೆಕ್ಕೆ ಬಡಿಯಲು ಶುರು ಮಾಡುತ್ತದೆ.ಏನೂ ಪ್ರಯೋಜನ ಆಗುವುದಿಲ್ಲ.
ಗುಬ್ಬಚ್ಚಿ ತನ್ನ ಮಿತ್ರನನ್ನು ಕರೆದುಕೊಂಡು ಇಬ್ಬರೂ ಸೇರಿ ಸಮುದ್ರದಲ್ಲಿ ರೆಕ್ಕೆ ಬಡಿಯುತ್ತದೆ..

ಇದನ್ನು ನೋಡಿ ಇನ್ನು ಕೆಲವು ಗುಬ್ಬಚ್ಚಿಗಳು ಸೇರಿ ರೆಕ್ಕೆ ಬಡಿಯಲು ಪ್ರಾರಂಭಿಸುತ್ತದೆ.
ಗುಬ್ಬಚ್ಚಿಗಳಿಗೆ ಮಣಿದು ಸಮುದ್ರರಾಜ ಮೊಟ್ಟೆಯನ್ನು ಹಿಂತಿರುಗಿಸುತ್ತಾನೆ..

ಸಾರಂಶ..
ಮೊದಲನೆಯ ಗುಬ್ಬಚ್ಚಿ ಡಾಕ್ಟರ್ ಜಿ ..ಸಂಘವನ್ನು ಕಟ್ಟಿದರು...ಎರಡನೇಯ ಗುಬ್ಬಚ್ಚಿ ಗುರೂಜಿ ..ಸಂಘ ಬೆಳೆಸಿದರು..
ಇಂದು ಸಂಘ ಒಂದು ದೊಡ್ದ ಶಕ್ತಿಯಾಗಿ, ಸಮಾಜದ ಕೆಲಸ ಮಾಡುತ್ತಿದೆ ..
ಇದರಲ್ಲಿ ನಮ್ಮ ಪಾತ್ರ ಏನು? ನಾವು ಸಮಾಜದ ಒಂದು ಅವಿಭಾಜ್ಯ ಅಂಗ ..
ನಾವು ಸಮಾಜಕ್ಕೆ ಏನು ಮಾಡಬಹುದು ?