ಒಂದು ಪುಟ್ಟ ಗುಬ್ಬಚ್ಚಿಯ ಮೊಟ್ಟೆ ಸಮುದ್ರದ ಪ್ರವಾಹದಲ್ಲಿ ಕೊಚ್ಚಿಹೋಗುತ್ತದೆ.
ಗುಬ್ಬಚ್ಚಿ ಎಷ್ಟೇ ಬೇಡಿದರೂ ಸಮುದ್ರರಾಜನು ಕಣ್ತೆರೆಯುವುದಿಲ್ಲ.
ಕೋಪಗೊಂಡ ಗುಬ್ಬಚ್ಚಿ ಸಮುದ್ರದಲ್ಲಿ ರೆಕ್ಕೆ ಬಡಿಯಲು ಶುರು ಮಾಡುತ್ತದೆ.ಏನೂ ಪ್ರಯೋಜನ ಆಗುವುದಿಲ್ಲ.
ಗುಬ್ಬಚ್ಚಿ ತನ್ನ ಮಿತ್ರನನ್ನು ಕರೆದುಕೊಂಡು ಇಬ್ಬರೂ ಸೇರಿ ಸಮುದ್ರದಲ್ಲಿ ರೆಕ್ಕೆ ಬಡಿಯುತ್ತದೆ..
ಇದನ್ನು ನೋಡಿ ಇನ್ನು ಕೆಲವು ಗುಬ್ಬಚ್ಚಿಗಳು ಸೇರಿ ರೆಕ್ಕೆ ಬಡಿಯಲು ಪ್ರಾರಂಭಿಸುತ್ತದೆ.
ಗುಬ್ಬಚ್ಚಿಗಳಿಗೆ ಮಣಿದು ಸಮುದ್ರರಾಜ ಮೊಟ್ಟೆಯನ್ನು ಹಿಂತಿರುಗಿಸುತ್ತಾನೆ..
ಸಾರಂಶ..
ಮೊದಲನೆಯ ಗುಬ್ಬಚ್ಚಿ ಡಾಕ್ಟರ್ ಜಿ ..ಸಂಘವನ್ನು ಕಟ್ಟಿದರು...ಎರಡನೇಯ ಗುಬ್ಬಚ್ಚಿ ಗುರೂಜಿ ..ಸಂಘ ಬೆಳೆಸಿದರು..
ಇಂದು ಸಂಘ ಒಂದು ದೊಡ್ದ ಶಕ್ತಿಯಾಗಿ, ಸಮಾಜದ ಕೆಲಸ ಮಾಡುತ್ತಿದೆ ..
ಇದರಲ್ಲಿ ನಮ್ಮ ಪಾತ್ರ ಏನು? ನಾವು ಸಮಾಜದ ಒಂದು ಅವಿಭಾಜ್ಯ ಅಂಗ ..
ನಾವು ಸಮಾಜಕ್ಕೆ ಏನು ಮಾಡಬಹುದು ?
No comments:
Post a Comment