Monday, 5 February 2018

ಶಾಖೆಯ ಬಗೆಗಿನ ಗುರೂಜಿಯವರ ಮಾತುಗಳು ಹೀಗಿವೆ..


ಶಾಖೆ - ಇಪ್ಪತ್ತನಾಲ್ಕು ಘಂಟೆಗಳಲ್ಲಿ ನಾವು ಮಾಡುವ ಸಂಘಕಾರ್ಯದ ಲೆಕ್ಕಪತ್ರ ಇಡುವ ಜಾಗ ಅದು. ಸ್ವಲ್ಪ ಶಿಸ್ತನ್ನು ಕಲಿಯುವ, ಮತ್ತು ಮತ್ತೊಬ್ಬರಿಗೆ ಹೆಗಲು ತಾಗಿಸಿ ಆಟವಾಡುವ, ವ್ಯಾಯಾಮ ಮಾಡುವುದರಿಂದ ಸಂಪೂರ್ಣ ಸಾಜದ ಸಂಬಂಧವಾಗಿ ಅಂತಃಕರಣದಲ್ಲಿ ನಿರ್ಮಾಣವಾಗುವ ಏಕತೆಯ ಮಾನಸಿಕ ಪಡೆಯುವ ಸ್ಥಾನವಾಗಿದೆ. ಇಲ್ಲಿ ಪ್ರತಿದಿನ ಪ್ರಾರ್ಥನೆ ಮತ್ತು ಧ್ವಜದ ದರ್ಶನದ ರೂಪದಲ್ಲಿ ನಮ್ಮ ಧ್ಯೇಯದ ಸ್ಮರಣೆಮಾಡುವ ಅವಕಾಶ ಸಿಗುತ್ತದೆ.

ಈ ಪ್ರತಿದಿನದ ಶಾಖೆಯಲ್ಲಿ ರಾಷ್ಟ್ರವನ್ನು ಶ್ರೇಷ್ಠಗೊಳಿಸುವ ನಿಶ್ಚಯವನ್ನು ಪ್ರಖರಗೊಳಿಸಲಾಗುತ್ತದೆ. ಪರಂವೈಭನ್ನೇತುಮೇತತ್ಸ್ವರಾಷ್ಟ್ರಮ್ ಎಂದು ಹೇಳಿ ಈ ರಾಷ್ಟ್ರವನ್ನು ಅತ್ಯಂತ ವೈಭವ ಸಂಪನ್ನವಾಗಿ ಮಾಡುವ ನಿರ್ಧಾರವನ್ನು ಪುನರುಚ್ಚಲಿಸಲಾಗುತ್ತದೆ. ನಮ್ಮ ದೃಷ್ಟಿಯಲ್ಲಿ ರಾಷ್ಟ್ರದ ವೈಭವದ ಅರ್ಥ ಕೇವಲ ಸ್ವಲ್ಪ ಹಣ, ಅಧಿಕಾರ ಮೊದಲಾದವುಗಳಲ್ಲಿ ಸಂತೋಷಪಡುವುದಷ್ಟೇ ಅಲ್ಲ. ನಮ್ಮ ರಾಷ್ಟ್ರೀಯ ದೃಷ್ಟಿಕೋನದಂತೆ , ಸಂಪತ್ತು ಪ್ರಗತಿ  ಧರ್ಮಾನುಕೂಲ ಮತ್ತು ಧರ್ಮರಕ್ಷಾರ್ಥವಾಗಿ ಇದ್ದಾಗ ಮಾತ್ರವೇ  ಸಂತೋಷವೆಂದು ಹೇಳಲಾಗುತ್ತದೆ.

ವಿಷಯ ಸಂಗ್ರಹ : ಶ್ರೀ ಗುರೂಜಿ ಸಮಗ್ರ, ಸಂಪುಟ ೨, ಪುಟ ೨೬೬.

No comments:

Post a Comment