ಸುಭಾಷಿತ
ಭೂರ್ಧಾರಯತಿ ಸತ್ಯೇನ
ಸತ್ಯೇನೋದಯತೇ ರವಿಃ|
ಸತ್ಯೇನ ವಾಯುಃ ಪವತೇ
ಸತ್ಯೇನಾಪಃ ಸ್ರವಂತಿ ಚ||
-ನಾರದಸ್ಮೃತಿ,
ಸತ್ಯದಿಂದ ಭೂಮಿಯು ನಿಂತಿದೆ. ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ. ಸತ್ಯದಿಂದಲೇ ಗಾಳಿಯು ಬೀಸುತ್ತದೆ. ಸತ್ಯದಿಂದಲೇ ನೀರು ಹರಿಯುತ್ತದೆ.
===============
ಬಸವಣ್ಣನವರ ಈ ವಚನ
"ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ,
ನಮ್ಮ ಕೂಡಲಸಂಗನ ಶರಣರಿಗಲ್ಲದೆ,
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
ಸಿರಿತನದ ಹೂವಿನ ಹಾಸಿಗೆಯಲಿ
ಕೂಡಿಟ್ಟ ಕಳ್ಳಹಣವು ಮುಳ್ಳಂತೆ ಚುಚ್ಚುತಿರಲು
ನಿದ್ಧೆಯಿಲ್ಲದೆ ಚಿಂತೆಯ ಚಿತೆಯಲ್ಲಿ ಬಿದ್ದವರು
ಹೆಣದಂತೆ ಬದುಕುವರು
--------------
*ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ*
ಜ್ಯೋತಿಯ ಬಲದಿಂದ ಅಂಧಕಾರದ ಕೇಡು ನೋಡಯ್ಯ
*ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ*
ಕೂಡಲ ಸಂಗನ ಶರಣರ ಬಲದಿಂದ ಆತ್ಮನ ಅಹಂಕಾರದ ಕೇಡು ನೋಡಯ್ಯ
*ಕೂಡಲ ಸಂಗಮ ದೇವ*......
------
ಅರ್ಥಾತುರಾಣಾಂ ನ ಗುರುರ್ನಬಂಧುಃ
ಕಾಮಾತುರಾಣಾಂ ನ ಭಯಂ ನ ಲಜ್ಜಾ|
ಕ್ಷುಧಾತುರಾಣಾಂ ನ ರುಚಿರ್ನ ಪಕ್ವಂ
ಚಿಂತಾತುರಾಣಾಂ ನ ಸುಖಂ ನ ನಿದ್ರಾ||
ಹಣದ ಹುಚ್ಚು ಹಿಡಿದವನಿಗೆ ಗುರು ಹಿರಿಯರು, ಬಂಧುಬಳಗವೆಂಬ ಜ್ಞಾನವಿರುವದಿಲ್ಲ.
ಕಾಮದ ಹುಚ್ಚು ಹಿಡಿದವನಿಗೆ ನಾಚಿಕೆ, ಭಯದ ಅರಿವಿಲ್ಲ. ಹಸಿವಿನಿಂದ ಕಂಗಾಲಾದವನಿಗೆ ರುಚಿಯಾದದ್ದು, ಸರಿಯಾಗಿ ಬೆಂದದ್ದೇ ಬೇಕೆಂದಿಲ್ಲ. ಚಿಂತೆಹಿಡಿದವನಿಗೆ ಸುಖವಿಲ್ಲ, ನಿದ್ರೆಯಿಲ್ಲ.
-ವಿಕ್ರಮಚರಿತ
===============
No comments:
Post a Comment