ಆ ದಿನಗಳಲ್ಲಿ ಸಂಘ ಶಿಕ್ಷಾವರ್ಗ ನಡೆಯುತ್ತಿದ್ದುದು ನಾಗಪುರ ಮತ್ತು ಪುಣೆಗಳಲ್ಲಿ
ಮಾತ್ರ. ೧೯೪೦ರಲ್ಲಿ ಪುಣೆಯ ವರ್ಗ ಪೂರೈಸಿ ಡಾಕ್ಟರ್‌ಜಿ ನಾಗಪುರಕ್ಕೆ ಬಂದರು. ಆಗ ಅವರ
ಆರೋಗ್ಯ ತೀರಾ ವಿಷಮಿಸಿತ್ತು. ನಾಗಪುರಕ್ಕೆ ಬಂದ ಮೇಲಂತೂ ಅದು ಮತ್ತಷ್ಟು ಹದಗೆಟ್ಟಿತು.
ಪ್ರತಿನಿತ್ಯ ಜ್ವರ ಬರತೊಡಗಿತು.
ಸಂಘ ಶಿಕ್ಷಾವರ್ಗ ಮೂರು ವರ್ಷಗಳ ತರಬೇತಿ, ಮೂರನೇ ವರ್ಷದ ವರ್ಗ ನಡೆಯುವುದು ನಾಗಪುರದಲ್ಲಿಯೇ. ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಬರುವ ಸ್ವಯಂಸೇವಕರು ಪಾಲ್ಗೊಳ್ಳುತ್ತಾರೆ.
ಆ ಸ್ವಯಂಸೇವಕರನ್ನು ಭೇಟಿಯಾಗುವುದು ಡಾಕ್ಟರ್‌ಜಿ ತಪ್ಪದೆ ಅನುಸರಿಸುತ್ತಿದ್ದ ಕ್ರಮ. ಅವರೆಲ್ಲ ವೈಯಕ್ತಿಕ ಪರಿಚಯ, ಅವರ ಗುಣ ವಿಕಾಸಕ್ಕಾಗಿ ಮಾರ್ಗದರ್ಶನ, ಇತ್ಯಾದಿ ಅವರು ಮಾಡುತ್ತಿದ್ದರು. ಪುಣೆಯಲ್ಲಿ ಆರೋಗ್ಯ ಕೆಟ್ಟಿದ್ದರೂ ಎಲ್ಲ ಸ್ವಯಂಸೇವಕರನ್ನು ಅವರು ಭೇಟಿಯಾಗಿದ್ದರು. ಆದರೆ ಜ್ವರದ ಕಾರಣದಿಂದ ನಾಗಪುರದ ವರ್ಗದಲ್ಲಿ ಅವರಿಗೆ ಅದು ಸಾಧ್ಯವಾಗಲಿಲ್ಲ. ಅಲ್ಲಿನ ಕಾರ್ಯಕರ್ತರಾಗಲಿ, ವೈದ್ಯರಾಗಲಿ ಯಾರೂ ಕೂಡ ಅವರಿಗೆ ಕಷ್ಟ ಕೊಡಲು ಸಿದ್ಧರಿರಲಿಲ್ಲ. ಡಾಕ್ಟರ್‌ಜಿಗೆ ಇದು ಸಹಿಸಲಾಗದ ವ್ಯಥೆಯನ್ನುಂಟು ಮಾಡಿತ್ತು. "ಜ್ವರದ ಬಗ್ಗೆ ಚಿಂತೆ ಬೇಡ, ನನ್ನನ್ನು ವರ್ಗಕ್ಕೆ ಕರೆದೊಯ್ಯಿರಿ" ಎಂದು ಒಂದೇ ಸಮನೆ ಅವರು ಹೇಳುತ್ತಿದ್ದರು. ಆದರೆ ಅವರಿಗೆ ಬರುತ್ತಿದ್ದುದು ಕೆಂಡದಂತಹ ಜ್ವರ. ಶರೀರ ತೀರಾ ಸುಸ್ತು. ಮಲಗಿದಲ್ಲಿಂದ ಅಲ್ಲಾಡಲು ಸಹ ಅವರಿಗೆ ವೈದ್ಯರ ಅನುಮತಿಯಿರಲಿಲ್ಲ.
ಡಾಕ್ಟರ್‌ಜಿಯವರಿಗೆ ಸ್ವಯಂಸೇವಕರೆಂದರೆ ಸಾಕ್ಷಾತ್ ದೇವರು. ಅವರ ಕನಸಿನ ನವಭಾರತದ ಆಧಾರಸ್ತಂಭಗಳೇ ಅವರು. ದೇಶದ ಉಜ್ವಲ ಭವಿಷ್ಯದ ಶಿಲ್ಪಿಗಳಾಗುವವರು ಅವರೇ. ಅಂತಹ ಸ್ವಯಂಸೇವಕರೊಂದಿಗೆ ಅತ್ಯಂತ ಪ್ರೇಮ ಹಾಗೂ ಆದರದಿಂದ ಭೇಟಿಯಾಗಿ ಮಾತನಾಡುವುದರಲ್ಲೇ ಅವರಿಗೆ ಅಪಾರ ಆನಂದ. ಅವರೊಡನೆ ಹಾಸ್ಯ, ವಿನೋದದಿಂದ ಇರುವ ಅವಕಾಶ ದೊರೆತಲ್ಲಿ ಜಗತ್ತಿನಲ್ಲಿ ಇನ್ನೇನೂ ಬೇಡ. ಡಾಕ್ಟರ್‌ಜಿಯವರ ಪಾಲಿಗೆ ದೇಶಸೇವೆ, ಪೂಜೆ, ಭಜನೆ, ಸುಖ ಸಂಪತ್ತು ಎಲ್ಲವೂ ಸ್ವಯಂಸೇವಕರ ಸಹವಾಸವೇ.
ಸಂಘಕಾರ್ಯದ ಆರಂಭದಿಂದ ಸತತ ಹದಿನೈದು ವರ್ಷಗಳ ಕಾಲ ಅವರು ಆನಂದ ಕಂಡುದು ಇದರಲ್ಲೇ. ಅಂತಹ ಆನಂದವನ್ನು ಇತರರೂ ಸವಿಯಬೇಕು ಎನ್ನುವುದೊಂದೇ ಅವರಿಗಿದ್ದ ತಳಮಳ. ಮಲಗಿದ್ದಲ್ಲಿ ಡಾಕ್ಟರ್‌ಜಿ ಅವರ ಮನಸ್ಸು ಚಡಪಡಿಸುತ್ತಿತ್ತು. ಸ್ವಯಂಸೇವಕರನ್ನು ಕಂಡು ಮಾತನಾಡಿಸುವ ಇಚ್ಛೆ ಬಿಟ್ಟು ಇನ್ನಾವುದರಲ್ಲೂ ಅವರಿಗೆ ರುಚಿ ಎನಿಸುತ್ತಿರಲಿಲ್ಲ.
ಸಂಘದ ಪ್ರಮುಖ ಕಾರ್ಯಕರ್ತರೇನೋ ಸರದಿಯಂತೆ ಅವರಿ ಬಳಿ ಕುಳಿತುಕೊಳ್ಳುತ್ತಿದ್ದರು. ಅವರ ಸೇವೆ ಮಾಡುತ್ತಿದ್ದರು. ವರ್ಗದ ಪ್ರತಿ ದಿನದ ವರದಿ ಅವರಿಗೆ ಒಪ್ಪಿಸುತ್ತಿದ್ದರು. ಆದರೆ ಹಾಲಿನ ಸವಿ ಮಜ್ಜಿಗೆಗೆ ಬರುವುದು ಹೇಗೆ ಸಾಧ್ಯ?
ಸ್ವಯಂಸೇವಕರನ್ನು ಕಾಣಲಾಗದ ಸ್ಥಿತಿಯಲ್ಲಿ ಡಾಕ್ಟರ್‌ಜಿ ಅವರ ಮನಸ್ಸು ನೀರಿನಿಂದ ಹೊರಬಂದ ಮೀನಿನಂತೆ ವಿಲವಿಲನೆ ಪರಿತಪಿಸತೊಡಗಿತು. ಕಾರ್ಯಕರ್ತರು ಅವರ ಮಾನಸಿಕ ವೇದನೆಯನ್ನು ವೈದ್ಯರಿಗೆ ತಿಳಿಸಿದರು. ಅದರಿಂದಲೇ ಅವರ ಆರೋಗ್ಯ ಸುಧಾರಿಸುವುದಾದಲ್ಲಿ ಅವಕಾಶ ಕೊಟ್ಟಲ್ಲಿ ತಪ್ಪೇನು ಎಂದೂ ವೈದ್ಯರಿಗೂ ಅನಿಸಿತು. ಕೊನೆಗೆ ಸ್ವಯಂಸೇವಕರ ಭೇಟಿಗೆ ಅವರು ಅನುಮತಿ ನೀಡಿದರು.
Labels: ಅನಾರೊಗ್ಯದ ನಡುವೆ, ಡಾಕ್ಟರ್‌ಜಿ, ಸಂಘ ಶಿಕ್ಷಾವರ್ಗ, ಸಂಘದ ಕಥೆ, Doctorji, Sangha Shikshavarga, Last SSV

No comments:
Post a Comment