ಸ್ವಾಮಿ ರಾಮತೀರ್ಥರು ಎರಡೂವರೆ ವರ್ಷ ಅಮೇರಿಕಾ ಪ್ರವಾಸದಲ್ಲಿದ್ದರು. ಅಪಾರ ಸಂಪತ್ತು, ಅಮೂಲ್ಯ ವಸ್ತುಗಳು ಅವರಿಗೆ ಉಡುಗೊರೆಯಾಗಿ ದೊರೆತಿತ್ತು. ಅವೆಲ್ಲವನ್ನು ಬಡವರಿಗಾಗಿ ಕೊಟ್ಟು ಬಿಟ್ಟರು. ಅಮೆರಿಕನ್ನರು ಕೊಟ್ಟಿದ್ದ ಉಡುಗೆ ಮಾತ್ರ ಅವರ ಬಳಿ ಉಳಿದಿತ್ತು.
ಭಾರತದಲ್ಲಿ ಒಮ್ಮೆ ಅವರು ಅದೇ ಉಡುಗೆಯನ್ನು ತೊಡುತ್ತಿದ್ದರು. ಕೋಟು ಪ್ಯಾಂಟನ್ನು ಹೆಗಲ ಮೇಲೆ ಹಾಕಿಕೊಂಡು ಮೊದಲು ಅಮೇರಿಕದ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡರು. ತಮ್ಮ ಬೋಳು ತಲೆಯ ಮೇಲೆ ಅಮೆರಿಕದ ಬೆಲೆಬಾಳುವ ಹ್ಯಾಟಿನ ಬದಲು ಇಲ್ಲಿಯ ಸರಳ ಪೇಟವನ್ನು ಸುತ್ತಿಕೊಂಡರು.
’ತುಂಬಾ ಬೆಲೆಬಾಳುವ ಈ ಸುಂದರ ಹ್ಯಾಟನ್ನೇ ಹಾಕಿಕೊಳ್ಳಬಹುದಾಗಿತ್ತಲ್ಲಾ?’ ಎಂದು ಯಾರೋ ಕೇಳಿದರು.
’ಈ ರಾಮನ ತಲೆಯ ಮೇಲೆ ಯಾವಾಗಲೂ ಭಾರತವೇ ಇರುತ್ತದೆ. ಅಮೇರಿಕಾ ಕಾಲಲ್ಲಿರಬಹುದು’. ಎಂದುತ್ತರಿಸಿದ ಸ್ವಾಮಿ ರಾಮತೀರ್ಥರು ನೆಲಕ್ಕೆ ಬಾಗಿ ಹಿಡಿ ಮಣ್ಣನ್ನು ತೆಗೆದು ಹಣೆಗೆ ಹಚ್ಚಿಕೊಂಡರು.
No comments:
Post a Comment