ಎಪ್ಪತ್ತರ ದಶಕದಲ್ಲಿ ಸಂಘದ ಮೂರನೆಯ ಸರಸಂಘಚಾಲರಾಗಿದ್ದ ಬಾಳಾಸಾಹೇಬ ದೇವರಸ್‍ರವರು ’ಆರ್.ಎಸ್.ಎಸ್ ಕೆಟ್ಟದ್ದು, ಅದು ಹೇಳುವ ಹಿಂದುತ್ವ ಕೆಟ್ಟದ್ದು ಎಂದು ತುಂಬಾ ಜನ ಹೇಳುತ್ತಾರೆ. ಆದರೆ ಆರ್.ಎಸ್.ಎಸ್. ಸ್ವಯಂಸೇವಕರು ತುಂಬಾ ಒಳ್ಳೆಯವರು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ಕಮ್ಯೂನಿಸಂ ಒಳ್ಳೆಯದು ಆದರೆ ಕಮ್ಯೂನಿಸ್ಟರು ಕೆಟ್ಟವರು ಎನ್ನುವ ಅಭಿಪ್ರಾಯವೂ ಅದೇ ರೀತಿ ಜನರಲ್ಲಿದೆ. ಕಮ್ಯೂನಿಸಂ ಎಂದರೆ ಇಡೀ ಜಗತ್ತನೇ ಒಂದು ಮಾಡಲು ಹೊರಟಿದೆ, ಆದರೆ ಈ ಹಿಂದುತ್ವವೆಂದರೆ ಸಂಕುಚಿತ ಎನ್ನುವ ಅಭಿಪ್ರಾಯವೂ ಇದೆ. ಯಾವಾಗ ಅದೇ ಜನ ನಮ್ಮ ಸ್ವಯಂಸೇವಕರನ್ನು ಒಪ್ಪಿಕೊಳ್ಳುತ್ತಾರೋ ಆಗ ನಮ್ಮ ಕಾರ್ಯಪದ್ಧತಿಯನ್ನೂ ಮತ್ತು ನಮ್ಮ ಕಾರ್ಯವು ಸರಿಯಿದೇ ಎನ್ನುವುದನ್ನೂ ಒಪ್ಪಿಕೊಳ್ಳಬೇಕು’.
’ಸ್ವಯಂಸೇವಕನು ಚೆನ್ನಾಗಿದ್ದಾನೆ ಎಂದರೆ ಅದನ್ನು ತಯಾರು ಮಾಡುವ ಶಾಖೆಯೂ ಚೆನ್ನಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಮತ್ತು ಶಾಖೆಯನ್ನು ಶುರು ಮಾಡಿದ ಸಂಘದ ವಿಚಾರವೂ ಸರಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಕಮ್ಯೂನಿಸ್ಟರು ಕೆಟ್ಟವರಾದ್ದರಿಂದ, ಕಮ್ಯೂನಿಸಂ ಕೂಡ ಕೆಟ್ಟದೆಂದು ಅವರು ತಿಳಿಯಬೇಕು. ಮತ್ತು ಕಮ್ಯೂನಿಸ್ಟ್ ಸಿದ್ಧಾಂತವೂ ಸರಿಯಿಲ್ಲವೆಂದು ಒಪ್ಪಿಕೊಳ್ಳಬೇಕು. ವಿಚಾರ ಮತ್ತು ಕಾರ್ಯಪದ್ಧತಿಗಳಿಂದ ತಯಾರಾಗುವವನೇ ಕಾರ್ಯಕರ್ತ. ಸಂಘದ ಕಾರ್ಯಕರ್ತನನ್ನು ಮೆಚ್ಚಿಕೊಂಡಿದ್ದರಿಂದ ಸಂಘದ ಕಾರ್ಯಪದ್ಧತಿಯೂ ಸರಿಯಿದೆ, ಸಂಘದ ವಿಚಾರವೂ ಸರಿಯಿದೆ ಎನ್ನುವುದು ಸಾಬೀತಾಗುತ್ತದೆ’ ಎಂದು ಹೇಳುತ್ತಿದ್ದರು.
No comments:
Post a Comment