ಬಂಗಾಲದ ಒಂದು ಪುಟ್ಟ ರೈಲು ನಿಲ್ದಾಣ. ಆಧುನಿಕ ಪಾಶ್ಚಾತ್ಯ ವೇಷ ಭೂಷಣಗಳನ್ನು
ಧರಿಸಿದ್ದ ಯುವಕ ರೈಲಿನಿಂದಿಳಿದ. ’ಕೂಲಿ, ಕೂಲಿ’ ಎಂದು ಕೂಗಿದ. ಆ ಪುಟ್ಟ
ನಿಲ್ದಾಣದಲ್ಲಿ ಕೂಲಿಯೆಲ್ಲಿಂದ ಬರಬೇಕು? ಸಾಧಾರಣ ಉಡುಪಿನ ಮಧ್ಯ ವಯಸ್ಸಿನ
ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ. ಈ ಯುವಕ ಆತನನ್ನು ಕೂಲಿಯೆಂದು ಭಾವಿಸಿ ಸಾಮಾನು
ಹೊತ್ತು ನಡೆಯಲು ಹೇಳಿದ.
ಆ ವ್ಯಕ್ತಿ ಯುವಕನ ಹಿಂದೆ ಪೆಟ್ಟಿಗೆ ಹೊತ್ತು ನಡೆಯತೊಡಗಿದ. ಮನೆ ತಲುಪಿದ ಕೂಡಲೇ ಯುವಕ ಕೂಲಿ ಕೊಡಲು ಬಂದ. ಆತ ಅದನ್ನು ನಯವಾಗಿ ತಿರಸ್ಕರಿಸಿದ.
ಅದೇ ವೇಳೆಗೆ ಯುವಕನ ಹಿರಿಯಣ್ಣ ಮನೆಯಿಂದ ಹೊರಬಂದವನೇ ಆ ಹಿರಿಯರ ಕಾಲಿಗೆ ಎರಗಿದ. ತನ್ನ ತಮ್ಮನನ್ನುದ್ದೇಶಿಸಿ "ಗೊತ್ತಾಗುತ್ತಿಲ್ಲವೇ? ಬಂಗಾಳದ ಹೆಮ್ಮೆಯ ಪುತ್ರ ಈಶ್ವರಚಂದ್ರ ವಿದ್ಯಾಸಾಗರ" ಎಂದ.
ಯುವಕ ಲಜ್ಜಿತನಾಗಿ ಅವರ ಕಾಲಿಗೆರಗಿದ.

No comments:
Post a Comment