ಯಾರ ಮಾತನ್ನೂ ಕೇಳದ ಹುಡುಗರಿಗೆ
ಡಾಕ್ಟರ್‌ಜಿಯವರ ಮಾತೆಂದರೆ ಮೀರಲಾಗದ ಆಣತಿಯಂತೆ. ಆಲಸಿಗಳು ಅವರ ಮಾತಿನಿಂದ
ಕ್ರಿಯಾಶೀಲರಾಗುತ್ತಿದ್ದರು. ಸೋಮಾರಿಗಳು ಚುರುಕುಗೊಳ್ಳುತ್ತಿದ್ದರು. ನಾಜೂಕು
ಆರೋಗ್ಯದವರು ದೃಢಕಾಯರಾಗುತ್ತಿದ್ದರು. ನೂರಾರು ಯುವಕರಿಗೆ ತಾವು ದೇಶದ ಸಲುವಾಗಿ
ಮಾಡಲೇಬೇಕೆಂಬುದು ಮನದಲ್ಲಿ ಬಲಗೊಂಡಿತು. ಹಿಂದು ಸಂಘಟನೆ ಒಂದು ಮಹತ್ವದ ಕಾರ್ಯ.
ಅದಕ್ಕಾಗಿ ವೈಯಕ್ತಿಕ ಸುಖ ತ್ಯಜಿಸಲೇಬೇಕು ಎಂಬ ಸಂಕಲ್ಪ ಬೇರೂರಿತು.
ಶ್ರೀಮಂತ ಕುಲದ ಓರ್ವ ತರುಣ ಕಾನೂನು ಪದವಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. ತಂದೆ ತುಂಬಾ ಸಂತಸಗೊಂಡಿದ್ದರು. ಆಗಲೇ ಮಗನಿಗಾಗಿ ಒಂದು ಒಳ್ಳೆಯ ನೌಕರಿ ಹಾಗೂ ವರದಕ್ಷಿಣೆ ತರುವ ಹುಡುಗಿಯನ್ನೂ ನೋಡಿಟ್ಟಿದ್ದರು. ಒಂದು ದಿನ ತಮ್ಮ ಮಗನೊಡನೆ "ನಡೆ, ದೊಡ್ಡ ಅಧಿಕಾರಿಯೊಬ್ಬರನ್ನು ನೋಡಬೇಕಾಗಿದೆ" ಎಂದರು.
"ಯಾಕಾಗಿ?" ಮಗನ ಪ್ರಶ್ನೆ. "ನಾನವರ ಹತ್ತಿರ ಮಾತನಾಡಿದ್ದೇನೆ. ತಮ್ಮ ವಿಭಾಗದಲ್ಲಿ ಒಂದು ಉತ್ತಮ ಕೆಲಸ ಕೊಡುವಂತೆ" ತಂದೆ ಉತ್ತರಿಸಿದರು.
"ನನಗಾವುದೇ ನೌಕರಿ ಬೇಕಿಲ್ಲ" ಮಗ ತನ್ನ ನಿರ್ಧಾರ ತಿಳಿಸಿದ.
"ವಕೀಲಿ ಮಾಡುವುದೇ ಆದರೂ ಅವರೊಡನೆ ಸಂಪರ್ಕ ಇರಿಸಿಕೊಳ್ಳುವುದು ಉಚಿತ" - ತಂದೆ ಸಲಹೆ ನೀಡಿದರು.
"ನಾನು ವಕೀಲಿ ಸಹ ಮಾಡುವವನಲ್ಲ" - ಮಗ ನಿರ್ಧಾರದ ಧ್ವನಿಯಲ್ಲಿ ನುಡಿದ. ತಂದೆ ಬಿರುಸಿನಿಂದ ಕೇಳಿದರು - "ಹೆಣ್ಣಿನ ತಂದೆ ನಿನ್ನ ಕೆಲಸದ ಬಗ್ಗೆ ಕೇಳುತ್ತಾರೆ. ನಾನೇನು ಹೇಳಲಿ?"
"ನೀವು ಯಾರೊಡನೆ ಭೇಟಿ ಮಾಡಿದರೂ ನನಗೆ ಚಿಂತೆಯೇನಿಲ್ಲ. ಆದರೆ ನಾನು ಮಾತ್ರ ಜೀವನಪರ್ಯಂತ ಸಂಘ ಕಾರ್ಯ ಮಾಡುವವನು ಎಂಬುದು ನಿಮಗೆ ತಿಳಿದಿರಲಿ. ನಾನು ನೌಕರಿ, ವಕೀಲಿ ಏನೂ ಮಾಡಲಾರೆ. ವಿವಾಹವೂ ಬೇಡ. ನಿಮ್ಮ ನಾಲ್ಕು ಮಕ್ಕಳಲ್ಲಿ ಒಬ್ಬನನ್ನು ದೇಶಕ್ಕಾಗಿ ಕೊಟ್ಟಿರುವುದಾಗಿ ತಿಳಿಯಿರಿ. ಡಾಕ್ಟರ್‌ಜಿ ಕಳಿಸಿದಲ್ಲಿಗೆ ಹೋಗಿ ನಾನು ಅಲ್ಲಿ ಸಂಘ ಕಾರ್ಯ ಮಾಡುವೆನು" - ಮಗ ತನ್ನ ಖಚಿತ ನಿರ್ಧಾರ ತಿಲಿಸಿದ.
ತಂದೆ ಕೋಪದಿಂದ ಕಿಡಿಕಿಡಿಯಾದರು. ತಾಯಿ ಅತ್ತರು. ಅಷ್ಟಾದರೂ ಮಗ ತನ್ನ ನಿರ್ಧಾರ ಬದಲಿಸಲಿಲ್ಲ.
ಅನೇಕ ಮನೆಗಳಲ್ಲಿ ಇಂಥವೇ ಪ್ರಸಂಗಗಳು. ಉನ್ನತ ಶಿಕ್ಷಣ ಪಡೆದ, ಪದವೀಧರರು, ಒಳ್ಳೆಯ ಕುಟುಂಬದ ಶೀಲವಂತರಾದ ತರುಣರು ತಮ್ಮ ಮನೆ ಮಠಗಳನ್ನು ತೊರೆದು ಸಂಘ ಕಾರ್ಯಕ್ಕಾಗಿ ಡಾಕ್ಟರ್‌ಜಿ ಕಳಿಸಿದಲ್ಲಿಗೆ ಹೋಗತೊಡಗಿದರು. ನೂರಾರು, ಸಾವಿರಾರು ಮೈಲು ದೂರದ ಅಪರಿಚಿತ ಸ್ಥಳಗಳಿಗೆ ಹೋಗಿ ಅಲ್ಲಿ ಸಂಘಶಾಖೆ ಆರಂಭಿಸಿದರು.
ಹಲವು ಬಾರಿ ಕೋಪೋದ್ರಿಕ್ತರಾದ ತಂದೆ ತಾಯಿಗಳು ಡಾಕ್ಟರ್‌ಜಿಯವರ ಬಳಿ ಹೋಗಿ ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದುದು ಉಂಟು. ಡಾಕ್ಟರ್‌ಜಿ ಶಾಂತವಾಗಿಯೇ ಅವರ ಮಾತುಗಳನ್ನೆಲ್ಲ ಕೇಳಿ ಕೊನೆಯಲ್ಲಿ ಅವರಿಗೆ ಸಂಘ ಕಾರ್ಯದ ಮಹತ್ವವನ್ನು ತಿಳಿಯಪಡಿಸುತ್ತಿದ್ದರು. ಅವರೆಂದಿಗೂ ಯಾರನ್ನೂ ಅಪಮಾನ ಮಾಡಿದವರಲ್ಲ.

No comments:
Post a Comment