ಒಮ್ಮೆ ರಜ್ಜೂ ಭೈಯ್ಯಾಜಿ ಗುರೂಜಿಯವರ ಒಂದು ಕಾರ್ಯಕ್ರಮಕ್ಕೆ ಲಾಲ ಬಹದ್ದೂರ್ ಶಾಸ್ತ್ರಿಯವರನ್ನು ಕರೆಯಲು ಅವರ ಬಳಿ ಹೋದರು. ವಿಚಾರ ವಿನಿಮಯ ಆದ ನಂತರ, ರಜ್ಜೂ ಭೈಯ್ಯಾಜಿ ಬಂದ ಕಾರಣ ತಿಳಿಸಿದರು. ಒಮ್ಮೆ ಯೋಚನೆ ಮಾಡಿದ ಶಾಸ್ತ್ರಿಯವರು ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದರು. ರಜ್ಜೂ ಭೈಯ್ಯಾಜಿ ಕಾರಣ ಕೇಳಿದರು.
"ನಾನು ನಿಮ್ಮ ಕಾರ್ಯಕ್ರಮಕ್ಕೆ ಬಂದರೆ ಕಾಂಗ್ರಸ್‍ನವರಿಗೆ ನಾನು ಆರ್.ಎಸ್.ಎಸ್. ಸೇರುತ್ತಿದ್ದೇನೆ ಎನ್ನುವ ಸಂದೇಹ ಬರುತ್ತದೆ. ಆದರೆ ನೀವು ಬಂದದ್ದನ್ನು ನೋಡಿದರೆ, ನೀವು ಕಾಂಗ್ರೆಸ್ ಸೇರಲು ಬಂದಿದ್ದೀರ ಎಂದು ಯಾರೂ ತಿಳಿಯುವುದಿಲ್ಲ" ಎಂದು ಶಾಸ್ತ್ರಿಯವರು ಉತ್ತರಿಸಿದರು.
No comments:
Post a Comment