"ದರ್ಬಾರಿನ ರೀತಿ ನೀತಿ ನಿನಗೆ ತಿಳಿಯದೇನು? ಅದೂ ನೀನು ರಜಪೂತ. ಮೇಲಾಗಿ ಚಾರಣ ವಂಶದವ. ಆ
ವಂಶಜರೆಲ್ಲಾ ತುಂಬಾ ಬುದ್ಧಿವಂತರೆಂದು ಬಲ್ಲೆ. ಆದರೂ ದರ್ಬಾರಿಗೆ ಬಂದ ನೀನು
ವಂದಿಸಲಿಲ್ಲ. ಶಿಷ್ಟಾಚಾರ ಪಾಲಿಸಲಿಲ್ಲ. ಹಾಗಾಗಿ ನೀನೆಲ್ಲೋ ಓದು ಬಾರದ
ಮೂರ್ಖನಿರಬೇಕು". ಹೀಗೆಂದು ಮೂದಲಿಸಿದವನು ಅಕಬರ್ ಬಾದಷಹ.
"ನನ್ನನ್ನು ಮನ್ನಿಸಿ. ನಾನು ರಜಪೂಜ ಚಾರಣ ವಂಶಜ, ನಿಜ. ನಿಮಗೆ ವಂದಿಸಬಾರದು ಎಂದಲ್ಲ. ನನ್ನ ತಲೆಯ ಮೇಲೆ ಇರುವ ಪೇಟವು ಮಹಾರಾಜ ಪ್ರತಾಪಸಿಂಹನ ಉಡುಗೊರೆ. ಆತನೆಂದೂ ಶತ್ರುವಿನೆದುರು ತಲೆತಗ್ಗಿಸಿದವನಲ್ಲ. ಹಾಗಿರುವಾಗ ಆತ ನೀಡಿದ ಪೇಟವನ್ನು ತಮ್ಮೆದುರು ಬಾಗಿಸುವ ಅಧಿಕಾರ ನನಗೆಲ್ಲಿದೆ. ನೀವೇ ಹೇಳಿ" ದಿಟ್ಟತನದಿಂದ ಉತ್ತರಿಸಿದ ಮಹಾರಾಣಾ ಪ್ರತಾಪನ ಆಪ್ತ ಶೀತಲ್ ಎಂಬ ಯುವಕ.
"ಹಾಗೆಂದೇ ನಾನು ನಿಮ್ಮೆದುರು ತಲೆಬಾಗಲಿಲ್ಲ" ಎಂದವನೇ ಆತ ಪೇಟವನ್ನು ಕೈಯಲ್ಲಿ ಹಿಡಿದುಕೊಂಡು ವಂದಿಸಿದ. ಆದರೆ ’ರಾಜಸ್ಥಾನದ ರಜಪೂತ ಪೇಟ ಎಂದೂ ಬಾಗದು’ ಎಂಬ ಸಂದೇಶವನ್ನೂ ನೀಡಿದ.
ಆತನೆ ತಲೆ ಬಾಗಿದ್ದರೂ ಮನಸ್ಸು ಬಾಗಿರಲಿಲ್ಲ! ಶತ್ರುವಿನ ಗುಹೆಗೇ ಹೋಗಿ ಆತನನ್ನು ತಿವಿದು ಹೂಂಕರಿಸುವುದು ಅಷ್ಟು ಸುಲಭವಲ್ಲ. ಓರ್ವ ದೇಶಭಕ್ತ ಮಾಡಬೇಕಾದುದನ್ನೇ ಶೀತಲ್ ಮಾಡಿದ್ದ.

No comments:
Post a Comment