ನಾಗಪುರದ ಒಂದು ಶಾಖೆಯ ಕೆಲವು ಮಕ್ಕಳು ನಿತ್ಯವೂ ಶಾಖೆಗೆ ಬರುತ್ತಿದ್ದವರು, ಇದ್ದಕ್ಕಿದ್ದಂತೆಯೇ ಬರುವುದನ್ನು ನಿಲ್ಲಿಸಿದ್ದರು. ಡಾಕ್ಟರ್‌ಜಿ ವಿಚಾರಿಸಲು ನಿಜವಾದ ಕಾರಣ ತಿಳಿಯಿತು. ಆ ಮಕ್ಕಳೆಲ್ಲರೂ ಶಾಖೆ ತಪ್ಪಿಸಿ ನಿತ್ಯವೂ ಊರಿಗೆ ಬಂದಿದ್ದ ಹೊಸ ಸಿನಿಮಾ ನೋಡುಲು ಹೋಗುತ್ತಿದ್ದರು. ಡಾಕ್ಟರ್‌ಜಿಯವರು ಆ ಮಕ್ಕಳನ್ನು ಸೇರಿಸಿ, ಅವರ ಜೊತೆ ತಾವೂ ಸಿನಿಮಾ ನೋಡಲು ಬರುವುದಾಗಿ ತಿಳಿಸಿದರು. ಮಕ್ಕಳಿಗೆ ಆನಂದವೋ ಆನಂದ. ಡಾಕ್ಟರ್‌ಜಿ ತಮ್ಮ ಜೊತೆ ಸಿನಿಮಾ ನೋಡಲು ಬರುವುದೆಂದರೇನು ಸುಮ್ಮನೆಯೇ?
ಡಾಕ್ಟರ್‌ಜಿ ಎಲ್ಲರಿಗೂ ಕೂಡಿ ತಮ್ಮ ಮನೆಗೆ ಬರಲು ತಿಳಿಸಿದರು. ಆ ಸಂಜೆ ಮಕ್ಕಳೆಲ್ಲರೂ ಒಟ್ಟಿಗೆ ಡಾಕ್ಟರ್‌ಜಿ ಮನೆಗೆ ಬಂದರು. ಆ ಸಮಯದಲ್ಲಿ ಡಾಕ್ಟರ್‌ಜಿ ಯಾರೊಡನೆಯೋ ಮಾತನಾಡುತ್ತಾ ಊಟ ಮಾಡುತ್ತಿದ್ದರು. ಅವರ ಊಟ ಮುಗಿದು ಎಲ್ಲರೂ ಸಿನಿಮಾ ಮಂದಿರಕ್ಕೆ ಬರುವ ಹೊತ್ತಿಗೆ, ಸಿನಿಮಾ ಪ್ರಾರಂಭವಾಗಿ ಚಿತ್ರಮಂದಿರ ಭರ್ತಿಯಾಗಿತ್ತು.
ನಿರಾಸೆಗೊಂಡ ಹುಡುಗರನ್ನು ಕರೆದುಕೊಂಡು ಡಾಕ್ಟರ್‌ಜಿ ಪಕ್ಕದ ಒಂದು ಉದ್ಯಾನವನಕ್ಕೆ ಬಂದರು. ಸಿನಿಮಾಗೆಂದು ತಂದಿದ್ದ ಹಣವನ್ನು ತೆಗೆದುಕೊಂಡು ಪುರಿಕಡಲೆ ಇತ್ಯಾದಿ ಕೊಂಡು ಹುಡುಗರನ್ನೆಲ್ಲಾ ಸುತ್ತ ಕೂರಿಸಿಕೊಂಡು ಹರಟೆ ಹೊಡೆಯಲು ಪ್ರಾರಂಭಿಸಿದರು. ಮಕ್ಕಳೂಂದಿಗೆ ಮಕ್ಕಳಾಗಿ ಡಾಕ್ಟರ್‌ಜಿ ಆ ಸಂಜೆ ಪೂರ್ತಿ ಅವರೊಡನೆ ನಕ್ಕು ನಲಿದರು.
ಆ ಆತ್ಮೀಯತೆಯೇ ಆ ಮಕ್ಕಳನ್ನು ಮತ್ತೆ ಶಾಖೆಗೆ ಕರೆತಂದಿತು. ಡಾಕ್ಟರ್‌ಜಿ ಮಕ್ಕಳ ಜೊತೆ ಈ ರೀತಿ ಬಾಂಧವ್ಯವನ್ನು ಬೆಳೆಸಿ ಅವರಿಗೆ ಸಂಘ ಕಾರ್ಯದಲ್ಲಿ ರುಚಿ ಹಚ್ಚಿಸುತ್ತಿದ್ದರು.
No comments:
Post a Comment