ಕೆಲ ಕೆಲವು ನಾಯಕರು ಮನೋಭಾವದಲ್ಲಿ ಸ್ವಲ್ಪ
ಕಟು. ಕೆಲವರ ಮುಖ ಚಹರೆ ಉಗ್ರ. ಕೆಲವರು ಅಹಂಕಾರದಿಂದ ಬೀಗಿ ಮಿಕ್ಕವರನ್ನು ತುಚ್ಛವಾಗಿ
ಕಾಣುವಂತಹರು. ಇನ್ನೂ ಕೆಲವರಂತೂ ನಿತ್ಯ ಉಪದೇಶವೇ ನೀಡುವಂತಹವರು. ಆದರೆ ಡಾಕ್ಟರ್‌ಜಿಯವರ
ಸ್ವಭಾವದಲ್ಲಿ ಈ ಯಾವ ಸಂಗತಿಗಳೂ ಇರಲಿಲ್ಲ.
ಅವರ ನಡವಳಿಕೆ ತುಂಬಾ ಸೌಜನ್ಯಶೀಲ. ಸ್ವಭಾವದಲ್ಲಿ ಸೌಮ್ಯ. ಮುಖದಲ್ಲಿ ಸದಾ ಪ್ರಸನ್ನತೆ. ದೇಶವೆಲ್ಲಾ ಸಂಚರಿಸಿದ್ದ ಅವರಿಗೆ ಅನೇಕ ಕಾರ್ಯಕರ್ತರೊಡನೆ ತುಂಬ ಆಪ್ತ ಸಂಬಂಧಗಳು. ಅವರ ನೆನಪು, ಅನುಭವಗಳ ಭಂಡಾರ ಸದಾ ಭರ್ತಿ. ತಮ್ಮ ಅನುಭವಗಳನ್ನು ರೋಚಕವಾಗಿ ವಿವರಿಸುವುದರಲ್ಲಿ ಅವರು ಎತ್ತಿದ ಕೈ. ಒಮ್ಮೆ ಪರಿಚಯವಾದ ವ್ಯಕ್ತಿಯನ್ನಂತೂ ಅವರು ಎಂದೂ ಮರೆಯುತ್ತಿರಲಿಲ್ಲ. ಅವರ ಮಾತಿನಲ್ಲಿ ಔಪಚಾರಿಕಗೆ ಲವಲೇಶವೂ ಇರುತ್ತಿರಲಿಲ್ಲ. ತೀಕ್ಷ್ಣ ಬುದ್ಧಿ, ಹಾಸ್ಯ ಹರಿಸುವ ಪ್ರವೃತ್ತಿ, ಪ್ರತಿ ವಿಷಯದಲ್ಲೂ ಮತ್ತೊಂದು ಮುಖ ನೋಡಬಲ್ಲ ದೃಷ್ಟಿ - ಇವೆಲ್ಲದರಲ್ಲೂ ಹೋಲಿಕೆಯೇ ಇಲ್ಲದಂತಹ ವಿಶೇಷತೆ ಅವರದು.
ಒಮ್ಮೆ ಸ್ವಯಂಸೇವಕರೊಬ್ಬರ ಮನೆಗೆ ಮದುವೆಗಾಗಿ ಅವರು ಹೋಗಿದ್ದರು. ಅವರುಳಿದ ಕೋಣೆಗೆ ಯುವಕರ ಗುಂಪೇ ಬಂತು. ಒಂದೇ ಸಮನೆ ಮಾತುಕತೆ ನಡೆಯುತ್ತಿದ್ದವು. ಪ್ರತಿ ಹತ್ತು ಹದಿನೈದು ನಿಮಿಷಕ್ಕೊಮ್ಮೆ ಗೊಳ್ ಎಂದು ನಗು ಉಕ್ಕಿ ಹರಿಯುತ್ತಿತ್ತು. ಅದನ್ನು ಕಂಡ ಯಾರೋ ಹಿರಿಯರು "ಈ ಹುಡುಗರೇನು ಮಾಡುತ್ತಿದ್ದಾರೆ? ಅಲ್ಲಿ ಡಾಕ್ಟರ್ ಹೆಡಗೆವಾರ್ ಮಲಗಿರಬಹುದು. ಅವರಿಗೆಷ್ಟು ತೊಂದರೆಯಾಗುವುದೋ?" ಇತ್ಯಾದಿ ಯೋಚಿಸಿದರು. ಆದರೆ ಪ್ರತ್ಯಕ್ಷ ಆ ಕೋಣೆಗೆ ಹೋಗಿ ನೋಡಿದಾಗ ಅವರಿಗೆ ಆಶ್ಚರ್ಯವೋ ಆಶ್ಚರ್ಯ. ಅಲ್ಲಿ ಸ್ವತಃ ಡಾಕ್ಟರ್‌ಜಿ ಅವರೇ ವಿನೋದದ ಕೇಂದ್ರ. ಯುವಕರೆಲ್ಲ ಅವರ ಸುತ್ತಮುತ್ತ ಕುಳಿತಿದ್ದಾರೆ. ಹೊರ ಪ್ರಪಂಚವನ್ನೇ ಮರೆತು ಅವರ ಮಾತುಗಳನ್ನು ಕೇಳುತ್ತಿದ್ದಾರೆ. ಡಾಕ್ಟರ್‌ಜಿ ಯಾವುದೋ ವಿನೋದ ಹೇಳುತ್ತಿದ್ದರು. ಎಲ್ಲರೊಂದಿಗೆ ತಾವೂ ಒಂದಾಗಿ ಮುಕ್ತವಾಗಿ ನಗುತ್ತಿದ್ದರು.

No comments:
Post a Comment