ಡಾಕ್ಟರ್‌ಜಿ ಹಗಲುರಾತ್ರಿ ಸಂಘ ಕಾರ್ಯದಲ್ಲೆ
ಮಗ್ನ. ಸಂಜೆ ಮುಂಜಾನೆ, ಹಗಲುರಾತ್ರಿ, ಮನೆಯೊಳಗೆ, ಹೊರಗೆ, ಎಲ್ಲೆಡೆಯೂ ಅವರು
ಮಾಡುತ್ತಿದ್ದುದು ಸಂಘದ ವಿಚಾರ ಮಾತ್ರ. ಅವರು ಕಾಣುತ್ತಿದ್ದ ಕನಸುಗಳೂ ಅಂತಹವೇ.
ನಾಗಪುರದ ಒಂದು ಶಾಖೆಯಲ್ಲಿನ ಸ್ವಯಂಸೇವಕರ ನಡುವೆ ಯಾವುದೋ ಒಂದು ವಿವಾದ ತಲೆದೋರಿತು. ಎರಡು ಗುಂಪುಗಳಾದವು. ಒಂದು ಗುಂಪು ಶಾಖೆಗೆ ಬರುವುದನ್ನು ನಿಲ್ಲಿಸಿತು. ತಾನೇ ಜಯ ಪಡೆದೆನೆಂದು ಮತ್ತೊಂದು ಗುಂಪು ಭಾವಿಸಿತು. ಡಾಕ್ಟರ್‌ಜಿಗೆ ಇದು ತಿಳಿದು ಬಹಳ ದುಃಖಪಟ್ಟರು. ಎರಡೂ ಗುಂಪಿನ ಎಲ್ಲರನ್ನೂ ವೈಯಕ್ತಿಕವಾಗಿ ಭೇಟಿಯಾದರು. ಪ್ರತಿಯೊಬ್ಬರನ್ನೂ ಸಮಾಧಾನಪಡಿಸಿದರು. ಎಲ್ಲರ ಮನಸ್ಸಿನ ಕೊಳೆ ತೊಳೆದುಬಿಟ್ಟರು. ಅವರೆಲ್ಲ ಮೊದಲಿನಂತೆಯೇ ಶಾಖೆಗೆ ಬರತೊಡಗಿದರು. ಆ ಶಾಖೆ ಮೊದಲಿನಂತೆಯೇ ನಡೆಯತೊಡಗಿತು.
ಈ ಘಟನೆಯ ನಂತರ ಡಾಕ್ಟರ್‌ಜಿ ನಾಗಪುರದ ಸ್ವಯಂಸೇವಕರನೆಲ್ಲ ಒಂದೆಡೆ ಸೇರಿಸಿದರು. ಅವರನ್ನು ಕುರಿತು "ಪ್ರಿಯ ಸ್ವಯಂಸೇವಕ ಬಂಧುಗಳೇ! ಇತಿಹಾಸದ ಪಾಠ ಕಲಿಯುವುದು ಬುದ್ಧಿವಂತಿಕೆಯ ಲಕ್ಷಣ. ಸ್ವಲ್ಪವೇ ಆದರೂ ಅಹಂಕಾರ ಪಡುವುದು. ಅದನ್ನು ಬೆಳೆಸುವುದು, ವ್ಯಕ್ತಿಗತ ಆಸೆ ಆಕಾಂಕ್ಷೆ ಇರಿಸಿಕೊಳ್ಳುವುದು, ಗುಂಪುಗಾರಿಕೆ, ಪರಸ್ಪರ ಹೊಟ್ಟೆಕಿಚ್ಚು, ಜಗಳ, ಇವೇ ದುರ್ಗುಣಗಳಿಂದ ನಮ್ಮ ದೇಶಕ್ಕೆ ಈ ದುರ್ಗತಿ ಬಂದಿದೆ. ಈ ದುರ್ಗುಣಗಳನ್ನು ದೂರ ಮಾಡಲೆಂದೇ ಸಂಘ ಹುಟ್ಟಿದೆ. ಏನಾದರಾಗಲಿ, ನಾವು ಪರಸ್ಪರ ಕಚ್ಚಾಡೆವು ಎಂದು ನಿಶ್ಚಯ ಮಾಡೋಣ. ಸಣ್ಣ ವಿಷಯಗಳಿಗೆ ಏನೇನೋ ಯೋಚಿಸಿಕೊಂಡು ಅಥವಾ ಯಾರೋ ಬೇರೆ ಶೈಲಿಯಲ್ಲಿ ಕೆಲಸ ಮಾಡಿದನೆಂದು ಕಾರಣಕ್ಕಾಗಿ ನಾವೇಕೆ ಸಂಘಕ್ಕೆ ಬರುವುದು ನಿಲ್ಲಿಸಬೇಕು? ಇದು ಸರಿಯೇ? ಸಂಘ ಯಾರೊಬ್ಬರ ಆಸ್ತಿಯಲ್ಲ. ಸಂಘ ಕೇವಲ ನನ್ನದೂ ಸಹ ಅಲ್ಲ. ಇದು ನಮ್ಮೆಲ್ಲರದು. ಸಂಘ ಇಡೀ ಸಮಾಜದ್ದು. ಇಡೀ ಭಾರತ ದೇಶದ್ದು. ನಾವು ಸಂಘವನ್ನು ಹೇಗೆ ಬಿಡಬಲ್ಲೆವು?" ಎಂದು ನುಡಿದರು.
"ಕಳೆದ ವಾರದ ಪರಸ್ಪರ ಜಗಳ ಕೇಳಿ ನಾನು ನೊಂದೆ. ರಾತ್ರಿಯಿಡೀ ಅದೇ ವಿಚಾರ ಮಾಡುತ್ತಿದ್ದೆ. ಅದೇ ಯೋಚನೆಯಲ್ಲಿ ನಾನೊಂದು ಕನಸು ಕಂಡೆ. ಅದರಲ್ಲಿ ನಾನು ಬಹು ಹಿಂದಿನ ಕಾಲಕ್ಕೆ ಹೋಗಿದ್ದೆ. ನಾವೆಲ್ಲ ಒಂದು ಕೋಟೆಯಲ್ಲಿದ್ದೆವು. ಯುದ್ಧದ ಸಿದ್ಧತೆ ಆಗುತ್ತಿತ್ತು. ಒಮ್ಮೆಲೇ ಶತ್ರುಗಳ ಆಕ್ರಮಣ ಆಯಿತು. ತೋಪು ಸಿಡಿಯಿತು. ಬಾಗಿಲು ಮುರಿಯಿತು. ಬಾಗಿಲಿನ ಕಲ್ಲುಗಳು ಒಳಗೆ ಬಿದ್ದವು. ನಾವೆಲ್ಲ ಕೂಡಿದೆವು. ರಾತ್ರಿಯಿಡೀ ಕಷ್ಟಪಟ್ಟು ಆ ಕಿಂಡಿ ಮುಚ್ಚಿದೆವು. ಆಗ ನಮ್ಮ ಸೇನಾಪತಿ ಹೇಳಿದ. "ನಮಗೆ ಹೊರಗಿನ ಆಕ್ರಮಕರ ಭಯ ಇಲ್ಲ. ಗೋಡೆ ಒಳಗೆ ಬಿದ್ದರೆ ಚಿಂತಿಲ್ಲ. ಗೋಡೆ ಹೊರಗಡೆ ಮಾತ್ರ ಬೀಳಬಾರದು. ಕಲ್ಲು ಇಟ್ಟಿಗೆ ಹೊರಗೆ ಬೀಳಬಾರದೆನ್ನುವುದೇ ನಮ್ಮ ಅಪೇಕ್ಷೆ."
"ನಾನು ಈ ಮಾತು ಕೇಳಿಸಿಕೊಂಡೆ. ಆಗಲೇ ಎಚ್ಚರವಾಯಿತು. ಈ ಕನಸು ಸ್ವಯಂಸೇವಕರಿಗೊಂದು ಮಹತ್ವದ ಸಂದೇಶ ನೀಡಿದೆ. ಹೊರಗಿನ ಎಂಥದೇ ಆಕ್ರಮಣಗಳಿಂದ ಸಂಘಕ್ಕೆ ಯಾವುದೇ ಹಾನಿಯಾಗದು. ಬದಲಾಗಿ ಲಾಭವೇ ಆದೀತು. ಆದರೆ ನಮ್ಮ ಯಾವನೇ ಸ್ವಯಂಸೇವಕ ಸಂಘವನ್ನು ಮಾತ್ರ ಬಿಡದಿರಲಿ. ಗೋಡೆಯ ಇಟ್ಟಿಗೆ ಹೊರಗೇ ಬೀಳದಿರಲು".
ಡಾಕ್ಟರ್‌ಜಿ ಆಡಿದ ಈ ಮಾತುಗಳು ಸ್ವಯಂಸೇವಕರಿಗೂ ಕಣ್ಣು ತೆರೆಸಿದವು.

No comments:
Post a Comment