Friday, 28 April 2017

ಯೋಧರಿಗೊಂದು ನಮನ

ಪಾಕಿಸ್ತಾನಿಗಳು ನಮ್ಮ ದೇಶಕ್ಕೆ ನುಗ್ಗೋಕೆ ಸಾಧ್ಯವಾಗೋ ಒಂದೇ ಒಂದು ಜಾಗ ಅಂದ್ರೆ ಸಿಯಾಚಿನ್. ನಮ್ಮ ಸೈನಿಕರು ಇವತ್ತು ಅಲ್ಲಿ ಕಾವಲು ನಿಂತು ನಮ್ಮನ್ನ ಕಾಪಾಡ್ತಿದಾರೆ. ಆದ್ರೆ ಸಿಯಾಚಿನ್ನಲ್ಲಿ ಕಾವಲು ಕಾಯೋದು ಅಷ್ಟು ಸುಲಭ ಅಲ್ಲ. ಯಾಕೆ ಅಷ್ಟು ಕಷ್ಟಾನಾ? ಕೆಳ್ಗಡೆ ಕೊಟ್ಟಿರೋದನ್ನ ಓದಿ. ಒಂದ್ ನಿಮಿಷ ಜೀವ ಡಗ್ ಅನ್ನತ್ತೆ.

1. ಪ್ರಪಂಚದ ಅತೀ ಎತ್ತರದ, ಭಯಾನಕ ಯುದ್ಧ ಭೂಮಿ ಸಿಯಾಚಿನ್

ಹಿಮಾಯಲಯ ಪರ್ವತದ ಕಾರಾಕೋರಂ ಸಾಲಿನ ಪೂರ್ವದಲ್ಲಿರೋ ಸಿಯಾಚಿನ್ ಭಾರತ ಹಾಗು ಪಾಕಿಸ್ತಾನದ ಗಡಿ.(ಲೈನ್ ಆಫ್ ಕಂಟ್ರೋಲ್)

2. ನೆಲದಿಂದ 5400 ಮೀಟರ್ ಎತ್ತರದಲ್ಲಿದೆ

ಲಡಾಕ್ ಮತ್ತೆ ಕಾರ್ಗಿಲ್ಲಿಗಿಂತ ಎರಡರಷ್ಟು ಎತ್ತರ ಇದರದ್ದು. ಅಷ್ಟ್ ಎತ್ರದ ಜಾಗದ ಪರಿಸರಕ್ಕೆ ನಮ್ ದೇಹ ಅಡ್ಜಸ್ಟ್ ಆಗೋದು ಭಾಳ ಕಷ್ಟ.

3. ವರ್ಷಕ್ಕೆ ಸುಮಾರು 36 ಅಡಿ ಹಿಮಪಾತ ಆಗತ್ತೆ

ಪ್ರಪಂಚದ ಅತೀದೊಡ್ಡ ಹಿಮಪಾತದ ಜಾಗ ಇದು.

4. ಇಲ್ಲಿ ಉಸಿರಾಡಕ್ಕೆ ಸಿಗೋದು ಬರೀ 10% ಆಮ್ಲಜನಕ

5. ಈ ಜಾಗದಲ್ಲಿ ನಮ್ಮ ಸೈನಿಕರು -50 ಇಂದ -60  ಡಿಗ್ರಿ ಚಳೀಲಿ ನಿಂತ್ಕೋತಾರೆ

ಇಂಥ ಭಯಾನಕ ಚಳೀಲಿ ನಮ್ ಸೈನಿಕರು ವರ್ಷಪೂರ್ತಿ ನಿಲ್ತಾರೆ. ಬೆಟ್ಟ ಹತ್ತೋರು ವಾತಾವರಣ ಚೆನ್ನಾಗಿದ್ರೆ ಮಾತ್ರ ಹತ್ತಕ್ಕೆ ಹೋಗೋದು. ಅದ್ಬಿಟ್ರೆ ನಮ್ ಸೈನಿಕರೇ ಅಲ್ಲಿ ಯಾವಾಗ್ಲೂ ಇರೋದು!

6. ಎಷ್ಟೋ ಜನ ಸೈನಿಕರು ಚಳಿ ತಡ್ಯಕ್ಕಾಗ್ದೇ ಸತ್ತೋಗ್ತಾರೆ. ಬರಿಗೈಯಲ್ಲಿ ಕಬ್ಬಿಣ ಮುಟ್ಟುದ್ರೆ 15 ಸೆಕೆಂಡೊಳಗಡೆ ಕೈಬೆರಳು ಕಟ್ಟಾಗತ್ತೆ

ಅಪ್ಪಿತಪ್ಪಿ ಯಾಮಾರಿ ಗನ್ನಿನ ಟ್ರಿಗರನ್ನ ಬರಿಗಯ್ಯಲ್ಲಿ ಮುಟ್ಟುದ್ರೆ ಕೈಬೆರಳನ್ನೇ ಕಳ್ಕೋಬೇಕಾಗತ್ತೆ. ಆ ಚಳೀನ ನಮ್ ದೇಹಕ್ಕೆ ತಡ್ಕೊಳಕ್ಕಾಗಲ್ಲ. 

7. ಗನ್ನುಗಳನ್ನ ತಕ್ಷಣ ಕುದಿಯೋನೀರಲ್ಲಿ ತೊಳಿಬೇಕು ಇಲ್ಲ ಅಂದ್ರೆ ಗನ್ನು ಕಚ್ಕೊಳತ್ತೆ, ಹಾಳಾಗತ್ತೆ

8. 1984ಕ್ಕೂ ಮುಂಚೆ ಇಲ್ಲಿ ಯಾವ ಸೈನಿಕರೂ ಇರ್ಲಿಲ್ಲ

ಈಗ್ಲೂ ಸುತ್ತಮುತ್ತಲಿನ ಜಾಗದಲ್ಲಿ ಸೈನಿಕರನ್ನ ಇಟ್ಟು, ಇಲ್ಲಿಂದ ಸೈನಿಕರನ್ನ ತೆಗಿಯೋಣ ಅಂತ ಎರಡೂ ದೇಶಗಳು ಸುಮಾರ್ ಸಲ ಪ್ರಯತ್ನ ಪಟ್ರು ಆದ್ರೆ ಯಾಕೋ ಅದು ಸರಿಬರಲಿಲ್ಲ.

9. ಸಿಯಾಚಿನ್ನಲ್ಲಿ 80% ಸಮಯ ಸೈನಿಕರನ್ನ ತಯಾರಿ ಮಾಡಕ್ಕೇ ಬೇಕಾಗತ್ತಾದೆ

10. ತಾಜಾ ಆಹಾರ ನಮ್ಮ ಸೈನಿಕರಿಗೆ ಬರಿ ಕನಸು

ನಮ್ಮ ಸೈನಿಕರಿಗೆ ಸೇಬು, ಕಿತ್ತಲೆಹಣ್ಣು ಇವೆಲ್ಲ ತಿನ್ನಕ್ಕೆ ಆಗಲ್ಲ. ಯಾಕಂದ್ರೆ ಆ ಚಳೀಗೆ ಈ ಹಣ್ಣು ಕ್ರಿಕೆಟ್ ಬಾಲಷ್ಟು ಗಟ್ಟಿ ಆಗ್ಬಿಡತ್ತೆ.

11. ಇಲ್ಲಿಗೆ ಊಟ ತಲುಪಿಸಕ್ಕೆ ಹೆಲಿಕಾಪ್ಟರ್ರಿಗೆ ಇರೋ ಸಮಯ ಕೇವಲ 20 - 30 ಸೆಕೆಂಡು

21,000 ಅಡಿ ಎತ್ತರಕ್ಕೆ ಹೋಗಿ ಊಟ ತಲುಪಿಸೋದು ಸಿಕ್ಕಾಪಟ್ಟೆ ಕಷ್ಟ. "ಚೀತಾ" ಅನ್ನೋ ಹೆಲಿಕಾಪ್ಟರನ್ನ ಇದಕ್ಕೆ ಅಂತಾನೆ ತಯಾರ್ ಮಾಡಿದಾರೆ. ವಾತಾವರಣ ಚೆನ್ನಾಗಿಲ್ಲ ಅಂದ್ರೆ ಅರ್ಧ ಊಟ ಹಿಮದ ಪಾಲಾಗಿರತ್ತೆ.

12. ಇವರಿಗೆ ಸ್ನಾನ ತಿಂಗಳಿಗೆ ಒಂದೇ ಸತಿ

ಡಿ.ಆರ್.ಡಿ.ಓ ಕಟ್ಟಿರೋ ಸ್ಪೆಷಲ್ ಬಚ್ಚಲುಮನೆಲಿ ( ಇಲ್ಲ ಅಂದ್ರೆ ಚಳೀಗೆ ನಾವೇ ಐಸ್ ಆಗ್ಬಿಡ್ತೀವಿ ) ಇವರು ತಿಂಗಳಿಗೆ ಒಂದು ಸತಿ ಸ್ನಾನ ಮಾಡ್ತಾರೆ.

13. ಇಲ್ಲಿರೋ ಸೈನಿಕರಿಗೆ ಸಾಕಷ್ಟು ಆರೋಗ್ಯ ತೊಂದ್ರೆ ಆಗತ್ತೆ

ಸರ್ಯಾಗಿ ನಿದ್ದೆ ಬರೋಲ್ಲ. ಸಿಕ್ಕಾಪಟ್ಟೆ ತೂಕ ಕಡಿಮೆ ಆಗೋದು, ಮಾತಾಡಕ್ಕಾಗಲ್ಲ, ಮರೆವು ಇದೆಲ್ಲಾ ತೊಂದ್ರೆಗಳು ಮುಕ್ಕಾಲುವಾಸಿ ಸೈನಿಕರಿಗೆ ಆಗತ್ತೆ.

14. ಕಳೆದ 30 ವರ್ಷದಲ್ಲಿ 846 ಸೈನಿಕರನ್ನ ಸಿಯಾಚಿನ್ನಲ್ಲಿ ಕಳ್ಕೊಂಡಿದೀವಿ

ಇಲ್ಲಿ ಕಾವಲು ಕಾಯಕ್ಕಿಂತ ಯುದ್ಧದಲ್ಲಿ ಗುದ್ದಾಡೋದು ಸುಲಭ. ಅದಕ್ಕೆ ಇವರ ಮರಣಗಳನ್ನು ವೀರಮರಣ ಅಂತ ಗೌರವಿಸಲಾಗಿದೆ.

ಇಷ್ಟೆಲ್ಲಾ ಕಷ್ಟ ಇದ್ರೂ, ಭಯ ಬೀಳಿಸೋ ಚಳಿ ಇದ್ರೂ, ದೇಶಕ್ಕಾಗಿ, ನಮಗಾಗಿ, ಛಲಬಿಡದೇ ನಮ್ಮನ್ನ ಸೈನಿಕರು ಕಾಪಾಡ್ತಿದಾರೆ. ನಾವು ಪ್ರತಿರಾತ್ರಿ ನೆಮ್ಮದಿಯಿಂದ ಮಲುಗ್ತಾ ಇದೀವಿ ಅಂದ್ರೆ ಇದಕ್ಕೆ ನಿಜವಾದ ಕಾರಣ ನಮ್ಮ ಸೈನಿಕರು.

Thursday, 27 April 2017

The essence of Bhagavath Geetha

The essence of Bhagavath Geetha

*Looks very easy but takes life to understand this. Everything is Possible.*

Whatever happened was good
Whatever is happening is good
Whatever will happen will also be good

What of *yours has gone* to make you cry ?
What did *you bring* with you that you have lost ?

What did you *create* which is now destroyed ?
What you have *taken* you have taken only from here.

What was *given* was given only from here.

*What is yours today, was someone else's yesterday, will be someone else's tomorrow.*

Accept *Life* how it comes.

ವಿಯಟ್ನಾಂ ದೇಶದಲ್ಲಿ ಶಿವಾಜಿ !!!

*ಯುದ್ಧ ಮತ್ತು ದುರಂತ*
ಅಂದಾಜು 20 ವಷ೯ದ  ಯುದ್ದದ ನಂತರ ವಿಯಟ್ನಾಮ್ ದೇಶ, ಅಮೇರಿಕಾವನ್ನು ಆ ದೇಶ ಬಿಟ್ಟು ಹೋಗುವಂತೆ, ಗೆಲುವು ಸಾಧಿಸಿತು. ವಿಯಟ್ನಾಮ್ ಒಂದು ಸಣ್ಣ ದೇಶ. ಅಮೇರಿಕಾದಂತಾ ಬಲಿಷ್ಟ ರಾಷ್ಟ್ರಕ್ಕೆ ಸೆಡ್ಡು ಹೊಡೆದು ಗೆಲುವು ಸಾಧಿಸಬೇಕಾದರೆ, ಅದು ಹೇಗೆ ಸಾಧ್ಯವಾಯಿತು?
ಗೆಲುವಿನ ನಂತರ ವಿಯಟ್ನಾಮ್ ದೇಶದ ರಾಷ್ಟ್ರಪತಿಗೆ ಮಾಧ್ಯಮದವರು ಒಂದು ಪ್ರಶ್ನೆ ಕೇಳಿದರು." ಅಮೇರಿಕಾವನ್ನು ಹೇಗೆ ಸೋಲಿಸಲು ಸಾಧ್ಯವಾಯಿತು? ಯುದ್ದದಲ್ಲಿ ಹೇಗೆ ಗೆಲುವು ಸಾಧಿಸಿದ್ದೀರಿ?"
ರಾಷ್ಟ್ರಪತಿ ಹೇಳಿದ: "ನಿಜ ಹೇಳಬೇಕು ಅಂದರೆ, ಅಮೆರಿಕಾದಂತಾ ಬಲಿಷ್ಟ ರಾಷ್ಟ್ರವನ್ನು ಸೋಲಿಸುವುದು ಅಸಾಧ್ಯದ ಮಾತು. ಆದರೆ ಇಂತಾ ಮಹಾಶಕ್ತಿಯನ್ನು ಎದುರಿಸಲು ನನಗೆ ನೆರವಾಗಿದ್ದು, ಭಾರತ ದೇಶದ ಒಬ್ಬ ಮಹಾನ್ ರಾಜನ ಚರಿತ್ರೆ. ಆ ರಾಜನಿಂದ ಪ್ರೇರಣೆ ಪಡೆದು ನಾನು ರಣತಂತ್ರ ರೂಪಿಸಿದೆ. ಅದು ಕಾಯ೯ ರೂಪಕ್ಕೆ ತಂದೆ "
ಪತ್ರಕತ೯ರು ಕುತೂಹಲದಿಂದ ಕೇಳಿದರು : "ಆ ರಾಜ ಯಾರು?"
"ಭಾರತ ದೇಶದ ಛತ್ರಪತಿ ಶಿವಾಜಿ ಮಹಾರಾಜ್ " ಎಂದು ಉತ್ತರಿಸಿದ. ಅಷ್ಟೇ ಅಲ್ಲ, ಅಂತಾ ಒಬ್ಬ ವ್ಯಕ್ತಿ ನಮ್ಮ ದೇಶದಲ್ಲಿ ಹುಟ್ಟಿದರೆ, ಇವತ್ತು ನಮ್ಮ ದೇಶ ಇಡೀ ವಿಶ್ವವನ್ನೇ ಆಳುತ್ತಿದ್ದೆ', ಎಂದರು.
ಸ್ವಲ್ಪವರ್ಷಗಳ ನಂತರ ಆ ರಾಷ್ಟ್ರಪತಿ ದೇಹ ವಿಯೋಗ ಮಾಡಿದ. ಆತನ ಸಮಾಧಿ ಸ್ಥಳದಲ್ಲಿ ಹೀಗೆ ಬರೆಯಲು ಆಜ್ಞಾಪಿಸಿದ್ದ- '' ಶಿವಾಜಿ ಮಹಾರಾಜನ ವಿನಯಾನ್ವಿತ ಸೈನಿಕನೊಬ್ಬ ಸಮಾಧಿಯಾದ ಸ್ಥಳ ''
ಈ ಬರಹ ಈಗಲೂ ನೀವು ಅಲ್ಲಿ ಹೋದರೆ ಕಾಣಬಹುದು.
ವಷ೯ಗಳ ನಂತರ ವಿಯಟ್ನಾಮಿನ ವಿದೇಶಾಂಗ ಸಚಿವರು ಔದ್ಯೋತಿಕವಾಗಿ ಭಾರತಕ್ಕೆ ಬೆಟ್ಟಿಕೊಟ್ಟರು. ಸರಕಾರ ಅವರಿಗೆ ಕೆಂಪು ಕೋಟೆ, ಗಾಂಧಿ ಸಮಾಧಿ ಎಲ್ಲವೂ ತೊರಿಸಿದರು. ಆಗ ಅವರು ಕೇಳಿದ್ದು "ಶಿವಾಜಿ ಮಹಾರಾಜರ ಸಮಾಧಿ ಸ್ಥಳ ಎಲ್ಲಿ " ಎಂದು. ಇದು ಕೇಳಿ  ಸರಕಾರದ ಪ್ರತಿನಿಧಿಗಳಿಗೆ ಅಶ್ಚಯ೯ವಾಯಿತು. ಅವರ ಬೇಡಿಕೆಯಂತೆ, ಅವರನ್ನು ಮಹಾರಾಷ್ಟ್ರದ ರಾಯಗಡಕ್ಕೆ ಕರತರಲಾಯಿತು. ಅಲ್ಲಿ ನಮನ ಸಲ್ಲಿಸಿದ ಬಳಿಕ, ಅಲ್ಲಿಂದ ಒಂದು ಹಿಡಿ ಮಣ್ಣು ತೊಗೊಂಡು ತನ್ನ ಬಾಗಿನಲ್ಲಿ ಹಾಕ್ಕಿದರು. 'ಇಲ್ಲಿಂದ ಮಣ್ಣು ಏಕೆ ತೊಗೊಂಡಿರಿ' ಎಂಬ ಪತ್ರಕತ೯ರ ಪ್ರಶ್ನೆಗೆ - "ಈ ಮಣ್ಣು ಶ್ಔರ್ಯ, ವೀರ, ಪರಾಕ್ರಮದ ಮಣ್ಣು. ಈ ಮಣ್ಣಲ್ಲಿಯೇ, ಶಿವಾಜಿಯಂತಾ ಮೇಧಾವಿ ಹುಟ್ಟಿದ್ದು, ಬೆಳೆದಿದ್ದು. ಇಂತಾ ಪವಿತ್ರ ಮಣ್ಣನ್ನು ನಾನು ನನ್ನ ದೇಶದ ಮಣ್ಣಿನೊಂದಿಗೆ ಬೆರಸುತ್ತೇನೆ. ಹಾಗೆ ನಮ್ಮ ದೇಶದಲ್ಲೂ ಶಿವಾಜಿಯಂತಾ ಮಹಾನ್ ಪುರುಷರು  ಹುಟ್ಟಲಿ''
(ಈ ವಿಚಾರಗಳು ಮಕ್ಕಳ ಪಠ್ಯ ಪುಸ್ತಕದಲ್ಲಿ ಕಂಡು ಬರುವುದಿಲ್ಲ ಅನ್ನೋದೇ ನಮ್ಮು  ಪಾಠ್ಯಕ್ರಮದ ವ್ಯವಸ್ಥೆ)
*ದುರಂತ (ನಂಬರ್ ಒಂದು)*
ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಏರ್ಪೆಡಿಸಿದ ಮೆರವಣಿಗೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆಗ ಒಬ್ಬ ಮನುಷ್ಯ ಕೇಳಿದ - "ನೀವು ನಮ್ ಜನಾನಾ?"
ಇಲ್ಲಿನ ಮಹಾಪುರುಷರುಗಳನ್ನು, ದೇವರುಗಳನ್ನು  ಕೆಲವು ಜನಾಂಗದವರು ಹಂಚಿಕೊಂಡಿದ್ದು ಈ ದೇಶದ ದುರಂತವೇ ಸರಿ.
*ದುರಂತ (ನಂಬರ್ ಎರಡು)*
ಇಲ್ಲಿ ಬಿದ್ದು ಸತ್ತ ವಿದೇಶಿಯರ ಹೆಣ ಕೊಳೆತು ಈ ಮಣ್ಣಲ್ಲಿ ಬೆರತು, ವಿಷ ಬೀಜಗಳಾಗಿ, ಆಳದಲ್ಲಿ ಬೇರು ಬಿಟ್ಟು, ಎಲ್ಲಿ ಬೇಕೆಂದರಲ್ಲಿ ಹೆಮ್ಮರವಾಗಿ ಬೆಳದು, ವಿಷ ಉಗುಳುತ್ತಿವೆ. ಈ ಮರದ ಹೆಸರು 'ರಾಜಕಾರಣಿ'

Wednesday, 26 April 2017

ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಪೂರ್ತಿ

🍁🍁 ಸುವಿಚಾರ ಸಂಪದ 🍁🍁

*ನಮ್ಮಲ್ಲಿ ಜ್ಞಾನ, ಸಂಪತ್ತು ಕ್ಷಮತೆ ಮತ್ತು ದಕ್ಷತೆಗಳಿವೆಯೆಂದು ಹೆಮ್ಮೆ ಪಡಬೇಕಾಗಿಲ್ಲ.ಅದನ್ನು ನಾವಿರುವ ಸಮಾಜದ ಸರ್ವರ ಹಿತಕ್ಕಾಗಿ ಬಳಸಿದರೆ ಮಾತ್ರ ಆ ಬಗ್ಗೆ ನಾವು ಹೆಮ್ಮೆ ಪಡಬಹುದು..*
----------

*ವಿವೇಕ ವಾಣಿ*

ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಾಗುತ್ತಾನೆ .
----------

*ಹೂವಿನಿಂದ ಕಿತ್ತು ತಂದ ಮಕರಂದದಿಂದ ಮಾಡಿದ ಜೇನು... ಜೇನುಹುಳಗಳಿಗೇ ದಕ್ಕುವುದಿಲ್ಲ. ಎಂದಾದರೆ ಪರರ ಬಳಿ ಕಿತ್ತು ಮಾಡಿದ ಸಂಪತ್ತು ಉಳಿಯುವುದಾ???
ಕಿತ್ತು ತಂದದ್ದು ಹೊತ್ತು ಮುಳುಗುವವರೆಗೆ

---------

ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ, ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ- ಮೆಲುಕು
         🙏  🙏🙏🏻🙏🏻

----------
*ವಿವೇಕ ವಾಣಿ*

ಸದಾ ನಿನ್ನ ಮನಸ್ಸು ಶಕ್ತಿಪೂರ್ಣವಾಗಿರುವಂತೆ ನೋಡಿಕೋ.
ನಿನ್ನ ಮಾತುಗಳಲ್ಲಿಯೂ ಸದಾ ಶಕ್ತಿಯೇ ಚಿಮ್ಮುತಿರಲಿ.
"ನಾನು ದುರ್ಬಲ, ನನ್ನ ಕೈಲೇನಾದೀತು" ಎಂದು ಹೇಳಿಕೊಳ್ಳುತ್ತಲೇ ಇದ್ದರೆ ಮನುಷ್ಯ ಕೈಲಾಗದವನೇ ಆಗುತ್ತಾನೆ.
ಕಸಕ್ಕಿಂತ ಕಡೆಯಾಗುತ್ತಾನೆ .
---------------

🌿🎤 *ಅಮೃತವಾಣಿ* 📢🌿
              .
.ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ...
...ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...
...ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...
                  *ಆದರೆ*
"ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ🖖🙃"
                 
                                                                                                         🌷🌷🌷🌷🌷🌷🌷🌷🌷🌷

------------

ಭಗವಂತನ ಪ್ರೇರಣೆಯಂತೆ ಯಾವಾಗ ಏನಾಗಬೇಕೋ ಅದು ಆಗಿಯೇ ಆಗುತ್ತೆ.ಯಾರ ಹಣೆ ಬರಹನ ಯಾರೂ ಬದಲಿಸಲಾರರು.ಆದರೆ ನಡೆವ ಹಾದಿ ಸ್ಪಷ್ಟ ಮತ್ತು  ಪ್ರಯತ್ನ ನಿರಂತರವಾಗಿರಬೇಕು*            
🙏🌷 **🙏 **🌷🙏

---------------

"ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ- ಕೆಲವೇ ನಿಮಿಷಗಳ ಕೆಲಸ....*
     *"ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು,ಮರವಾಗಿ ಬೆಳೆಸಿದಂತೆ- ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....*

---------------

*ಸದಾ ಶ್ರೇಷ್ಠ ಚಿಂತನೆಗಳಿಂದ ಮನಸ್ಸನ್ನು ತುಂಬಿ. ಸೋಲನ್ನು ಲಕ್ಷಿಸಬೇಡಿ.*

*ಹೋರಾಟ ಮತ್ತು ತಪ್ಪುಗಳ ಲೆಕ್ಕ ಇಡಬೇಡಿ.*

*ಸಾವಿರ ಸಲ ಸೋತರೂ ಮತ್ತೊಮ್ಮೆ ಪ್ರಯತ್ನಿಸಿರಿ, ಸೋಲು ಜೀವನದ ಸೌಂದರ್ಯ*

---------------
ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯುವ ಜನರು, ಪ್ರೀತಿಸುವುದನ್ನು ಕಲಿಯಲು ಮಾತ್ರ ಜೀವನದ ಕೊನೆ ಕ್ಷಣದವರೆಗೂ ಕಾಯುತ್ತಾರೆ.
---------------

ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ, ಅಲ್ಲಿಯವರೆಗೂ ಖಂಡಿತವಾಗಿ,
ನಾವು ಸಂತೋಷದಿಂದಿರುತ್ತೇವೆ..

---------------

*ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ......*
*ಆದರೆ, ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.....*
*ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಗುರಿ ಮುಟ್ಟ ಬೇಕಿದೆ ಎಂಬುದು ಮುಖ್ಯ......*

--------------
ಚಂದ್ರಗುಪ್ತ ಕೇಳುತ್ತಾನೆ☞
ಎಲ್ಲವೂ ಹಣೆಬರಹದಲ್ಲಿ ಬರೆದಿದ್ದಾರೆ ಅಂದ ಮೇಲೆ ಪ್ರಯತ್ನ ಪಟ್ಟು ಫಲವೇನು?

ಚಾಣಕ್ಯ ಉತ್ತರಿಸುತ್ತಾನೆ☞
ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ.!!!?

--------------
---------------
--------------
---------------
--------------
---------------

You will never lose your value. Because you are special’

*ವ್ಯಕ್ತಿತ್ವ ವಿಕಸನದ ತರಬೇತಿ ಕಾರ್ಯಾಗಾರವೊಂದು ನಡೆಯುತ್ತಿತ್ತು.*

    _```200ಕ್ಕೂ ಹೆಚ್ಚು ಜನರು ಅಲ್ಲಿ ಸೇರಿದ್ದರು. ಮಾತಿಗೆ ನಿಂತ ಪ್ರೊಫೆಸರ್ ತಮ್ಮ ಜೇಬಿನಿಂದ 100 ಒಂದು ನೋಟನ್ನು ತೆಗೆದು ಎತ್ತಿ ಹಿಡಿದು ‘ನಾನೀಗ ಈ ನೋಟನ್ನು ಕೊಡುತ್ತೇನೆ ಎಂದಾದರೆ ಯಾರ್ಯಾರಿಗೆ ಈ ದುಡ್ಡು ಬೇಕು?’ ಎಂದು ಕೇಳಿದರು.```_

ಅಲ್ಲಿದ್ದ ಅಷ್ಟೂ ಮಂದಿ ಕೈ ಎತ್ತಿದರು.
‘ಸರಿ ಹಾಗಾದರೆ ಒಂದು ನಿಮಿಷ ತಡೆಯಿರಿ’ ಎಂದು ಪ್ರೊಫೆಸರ್ ನೋಟನ್ನು ಎರಡು ಬಾರಿ ಮಡಚಿದರು.
‘ಈಗ ಈ ನೋಟು ಯಾರಿಗೆ ಬೇಕು?’ಎಂದರು. ಮತ್ತೆ ಎಲ್ಲರೂ ಕೈ ಎತ್ತಿದರು.
ಪ್ರೊಫೆಸರ್ ನೋಟನ್ನು ಕೈಯಲ್ಲಿ ಮುದ್ದೆ ಮಾಡಿದರು.
‘ಈಗ’. ಆಗಲೂ ಯಾರೂ ಕೈ ಕೆಳಗಿಳಿಸಲಿಲ್ಲ.
ಕೊನೆಗೆ, ಪ್ರೊಫೆಸರ್ ನೋಟನ್ನು ಕೆಳಕ್ಕೆ ಹಾಕಿ ತಮ್ಮ ಬೂಟುಕಾಲಿನಿಂದ ತುಳಿದರು.
ಧೂಳು ಹಿಡಿದಿದ್ದ ನೋಟನ್ನು ಮೇಲೆ ಎತ್ತಿ ಹಿಡಿದು ‘ಈಗಲೂ ಈ ನೋಟು ಬೇಕೆ?’ ಎಂದರು. ಎಲ್ಲರೂ ಹೌದೆಂದರು.

‘ನಾನೀಗ ನಿಮಗೆ ಜೀವನದ ದೊಡ್ಡ ಪಾಠವನ್ನು ಹೇಳಿ ಕೊಟ್ಟಿದ್ದೇನೆ. ನೀವು ನೋಟನ್ನು ಮಡಚಿದರೂ, ಮುದ್ದೆ ಮಾಡಿದರೂ, ಧೂಳಿನಲ್ಲಿ ಹಾಕಿ ತುಳಿದರೂ ಅದರ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ನೋಟಿಗಿರುವ ಮೌಲ್ಯ ಮೊದಲೂ 100 ರು. ಇತ್ತು, ಈಗಲೂ ಅಷ್ಟೇ ಇದೆ. ಜೀವನವೂ ಹಾಗೆಯೇ ಈ ನೋಟಿನಂತೆ. ಕಷ್ಟಗಳು ನಮ್ಮನ್ನು ಮುದ್ದೆ ಮಾಡುತ್ತವೆ, ತುಳಿಯುತ್ತವೆ, ಕೆಲವೊಮ್ಮೆ ಹೊಸಕಿಯೇ ಹಾಕಿ ಬಿಡುತ್ತವೆ. ಹಾಗಾದಾಗ ನಾವು ಕುಸಿದು ಬಿಡುತ್ತೇವೆ. ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾನು ಅಪ್ರಯೋಜಕ ಎಂಬ ಭಾವನೆ ಮೂಡಿ ಬಿಡುತ್ತದೆ. ಆದರೆ ನೆನಪಿರಲಿ, ನಮ್ಮ ಜೀವನದ ಮೌಲ್ಯ ಕುಂದಿರುವುದಿಲ್ಲ.
You will never lose your value. Because you are special’.

    *ಈ ಮಾತನ್ನು ಎಂದೆದಿಗೂ ಮರೆಯಬೇಡಿ.*

ಎಳಿ ಎದ್ದೇಳಿ

*"ನೀನು ಮಲಗಿದ ಹಾಸಿಗೆ ನಿನ್ನನ್ನು ಅಸಹ್ಯಪಡುವ ಮುನ್ನ  ಆಲಸ್ಯವನ್ನು ಬಿಡು,*

*ನಿನ್ನ ಕನ್ನಡಿ ನಿನ್ನನ್ನು ಪ್ರಶ್ನಿಸುವ ಮುನ್ನ ಉತ್ತರ ಹುಡುಕು,*

*ನಿನ್ನ ನೆರಳು ನಿನ್ನನ್ನು ಬಿಡುವ ಮುನ್ನ ಬೆಳಕಿಗೆ ಬಾ,*

*ಕಣ್ಣೀರು ಸುರಿಸುವುದರಿಂದಲ್ಲ, ಬೆವರು ಸುರಿಸುವುದರಿಂದ ಚರಿತ್ರೆ ಸೃಷ್ಟಿಸಬಹುದು.!!!"*

ಸುಭಾಷಿತ

ಸುಭಾಷಿತ

ಭೂರ್ಧಾರಯತಿ ಸತ್ಯೇನ
ಸತ್ಯೇನೋದಯತೇ ರವಿಃ|
ಸತ್ಯೇನ ವಾಯುಃ ಪವತೇ
ಸತ್ಯೇನಾಪಃ ಸ್ರವಂತಿ ಚ||

   -ನಾರದಸ್ಮೃತಿ,

ಸತ್ಯದಿಂದ ಭೂಮಿಯು ನಿಂತಿದೆ. ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ. ಸತ್ಯದಿಂದಲೇ ಗಾಳಿಯು ಬೀಸುತ್ತದೆ. ಸತ್ಯದಿಂದಲೇ ನೀರು ಹರಿಯುತ್ತದೆ.

===============

ಬಸವಣ್ಣನವರ ಈ ವಚನ

"ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ,
ನಮ್ಮ ಕೂಡಲಸಂಗನ ಶರಣರಿಗಲ್ಲದೆ,
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.

ಸಿರಿತನದ ಹೂವಿನ ಹಾಸಿಗೆಯಲಿ
ಕೂಡಿಟ್ಟ ಕಳ್ಳಹಣವು ಮುಳ್ಳಂತೆ ಚುಚ್ಚುತಿರಲು
ನಿದ್ಧೆಯಿಲ್ಲದೆ ಚಿಂತೆಯ ಚಿತೆಯಲ್ಲಿ ಬಿದ್ದವರು
ಹೆಣದಂತೆ ಬದುಕುವರು
--------------

*ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ*
ಜ್ಯೋತಿಯ ಬಲದಿಂದ ಅಂಧಕಾರದ ಕೇಡು ನೋಡಯ್ಯ
*ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ*
ಕೂಡಲ ಸಂಗನ ಶರಣರ ಬಲದಿಂದ ಆತ್ಮನ ಅಹಂಕಾರದ ಕೇಡು ನೋಡಯ್ಯ
*ಕೂಡಲ ಸಂಗಮ ದೇವ*......
------

ಅರ್ಥಾತುರಾಣಾಂ ನ ಗುರುರ್ನಬಂಧುಃ
ಕಾಮಾತುರಾಣಾಂ ನ ಭಯಂ ನ ಲಜ್ಜಾ|
ಕ್ಷುಧಾತುರಾಣಾಂ ನ ರುಚಿರ್ನ ಪಕ್ವಂ
ಚಿಂತಾತುರಾಣಾಂ ನ ಸುಖಂ ನ ನಿದ್ರಾ||

ಹಣದ ಹುಚ್ಚು ಹಿಡಿದವನಿಗೆ ಗುರು ಹಿರಿಯರು, ಬಂಧುಬಳಗವೆಂಬ ಜ್ಞಾನವಿರುವದಿಲ್ಲ.
ಕಾಮದ ಹುಚ್ಚು ಹಿಡಿದವನಿಗೆ ನಾಚಿಕೆ, ಭಯದ ಅರಿವಿಲ್ಲ.  ಹಸಿವಿನಿಂದ ಕಂಗಾಲಾದವನಿಗೆ ರುಚಿಯಾದದ್ದು, ಸರಿಯಾಗಿ ಬೆಂದದ್ದೇ ಬೇಕೆಂದಿಲ್ಲ. ಚಿಂತೆಹಿಡಿದವನಿಗೆ ಸುಖವಿಲ್ಲ, ನಿದ್ರೆಯಿಲ್ಲ.

-ವಿಕ್ರಮಚರಿತ

===============

ಹಣತೆ : ಒಂದು ಸಣ್ಣ ಕಥೆ!


ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.

ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು.

ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.

ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
-------------------------
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. ” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”

ಆ ಭರವಸೆಯ ಬೆಳಕು ನಿಮ್ಮದಾಗಲಿ
👈👍👍 ನಾನು ಜೀವಮಾನದಲ್ಲಿ ಯಾರನ್ನೂ ನೋಯಿಸಿಲ್ಲ ಎನ್ನುವವನೂ ಸಹ ತನ್ನ ತಾಯಿಯನ್ನು ನೋಯಿಸಿಯೇ ಈ ಭೂಮಿಗೆ ಬಂದಿರುತ್ತಾನೆ ....!!!

ಶ್ರೀ ರಾಮಚಂದ್ರನ ವಂಶವೃಕ್ಷ

*ಶ್ರೀ ರಾಮಚಂದ್ರನ ವಂಶವೃಕ್ಷ*

*ಬ್ರಹ್ಮನ ಮಗ ಮರೀಚಿ*

*ಮರೀಚಿಯ ಮಗ ಕಾಶ್ಯಪ*

*ಕಾಶ್ಯಪರ ಮಗ ಸೂರ್ಯ*

*ಸೂರ್ಯನ ಮಗ ಮನು*

*ಮನುವಿನ ಮಗ ಇಕ್ಷ್ವಾಕು*

*ಇಕ್ಷ್ವಾಕುವಿನ ಮಗ ಕುಕ್ಷಿ*

*ಕುಕ್ಷಿಯ ಮಗ ವಿಕುಕ್ಷಿ*

*ವಿಕುಕ್ಷಿಯ ಮಗ ಬಾಣ*

*ಬಾಣನ ಮಗ ಅನರಣ್ಯ*

*ಅನರಣ್ಯನ ಮಗ ಪೃಥು*

*ಪೃಥುವಿನ ಮಗ ತ್ರಿಶಂಕು*

*ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)*

*ದುಂಧುಮಾರುವಿನ ಮಗ ಮಾಂಧಾತ*

*ಮಾಂಧಾತುವಿನ ಮಗ ಸುಸಂಧಿ*

*ಸುಸಂಧಿಯ ಮಗ ಧೃವಸಂಧಿ*

*ಧೃವಸಂಧಿಯ ಮಗ ಭರತ*

*ಭರತನ ಮಗ ಅಶೀತಿ*

*అಶೀತಿಯ ಮಗ ಸಗರ*

*ಸಗರನ ಮಗ ಅಸಮಂಜಸ*

*ಅಸಮಂಜಸನ ಮಗ ಅಂಶುಮಂತ*

*ಅಂಶುಮಂತನ ಮಗ ದಿಲೀಪ*

*ದಿಲೀಪನ ಮಗ ಭಗೀರಥ*

*ಭಗೀರಥನ ಮಗ ಕಕುತ್ಸು*

*ಕಕುತ್ಸುವಿನ ಮಗ ರಘು*

*ರಘುವಿನ ಮಗ ಪ್ರವುರ್ಧ*

*ಪ್ರವುರ್ಧನ ಮಗ ಶಂಖನು*

*ಶಂಖನುವಿನ ಮಗ ಸುದರ್ಶನ*

*ಸುದರ್ಶನನ ಮಗ ಅಗ್ನಿವರ್ಣ*

*ಅಗ್ನಿವರ್ಣನ ಮಗ ಶೀಘ್ರವೇದ*

*ಶೀಘ್ರವೇದನ ಮಗ ಮರು*

*ಮರುವಿನ ಮಗ ಪ್ರಶಿಷ್ಯಕ*

*ಪ್ರಶಿಷ್ಯಕನ ಮಗ ಅಂಬರೀಶ*

*ಅಂಬರೀಶನ ಮಗ ನಹುಶ*

*ನಹುಶನ ಮಗ ಯಯಾತಿ*

*ಯಯಾತಿಯ ಮಗ ನಾಭಾಗ*

*ನಾಭಾಗನ ಮಗ ಅಜ*

*ಅಜನ ಮಗ ದಶರಥ*

*ದಶರಥನ ಮಗ ರಾಮ*

ಹಿಂದುವಾಗಿ ತಿಳಿದಿರಲೇಬೇಕಾದ ವಿಷಯಗಳು

*ವೇದಗಳು (೪)*
ಋಗ್ವೇದ,
ಯಜುರ್ವೇದ,
ಸಾಮವೇದ,
ಅಥರ್ವವೇದ.
*********************

*ರಾಶೀಗಳು (೧೨)*
ಮೇಷ,
ವೃಷಭ,
ಮಿಥುನ,
ಕರ್ಕ,
ಸಿಂಹ,
ಕನ್ಯಾ,
ತುಲಾ,
ವೃಶ್ಚಿಕ,
ಧನು,
ಮಕರ,
ಕುಂಭ,
ಮೀನ.
*********************

*ಋತುಗಳು (೬) ಮತ್ತು ಮಾಸ (೧೨) *
ವಸಂತ (ಚೈತ್ರ-ವೈಶಾಖ),
ಗ್ರೀಷ್ಮ (ಜೇಷ್ಠ-ಆಷಾಢ) ,
ವರ್ಷಾ (ಶ್ರಾವಣ-ಭಾದ್ರಪದ),
ಶರದ (ಅಶ್ವಿನ-ಕಾರ್ತಿಕ),
ಹೇಮಂತ (ಮಾರ್ಗಶಿರ-ಪೌಷ),
ಶಿಶಿರ (ಮಾಘ-ಫಾಲ್ಗುಣ).
*******************

*ದಿಕ್ಕುಗಳು* (೧೦)
ಪೂರ್ವ,
ಪಶ್ಚಿಮ,
ಉತ್ತರ,
ದಕ್ಷಿಣ,
ಈಶಾನ್ಯ,
ಆಗ್ನೇಯ,
ವಾಯವ್ಯ,
ನೈಋತ್ಯ,
ಆಕಾಶ,
ಪಾತಾಳ.
******************

*ಸಂಸ್ಕಾರಗಳು* (೧೬)
ಗರ್ಭಧಾನ,
ಪುಂಸವನ,
ಸೀಮನ್ತೋತ್ರಯನ,
ಜಾತಕರ್ಮ,
ನಾಮಕರಣ,
ನಿಷಕ್ರಮಣ,
ಅನ್ನಪ್ರಾಶನ,
ಚೂಡಾಕರ್ಮ,
ಕರ್ಣಭೇದ,
ಯಜ್ಞೋಪವೀತ,
ವೇದಾರಂಭ,
ಕೇಶಾಂತ,
ಸಮಾವರ್ತನ,
ವಿವಾಹ,
ಆವಸಥ್ಯಧಾನ,
ಶ್ರೌತಧಾನ.
******************

*ಸಪ್ತ ಋಷಿಗಳು* (೭)
ವಿಶ್ವಾಮಿತ್ರ,
ಜಮದಗ್ನಿ,
ಭಾರದ್ವಾಜ,
ಗೌತಮ,
ಅತ್ರಿ,
ವಸಿಷ್ಠ,
ಕಶ್ಯಪ.
******************

*ಸಪ್ತಪರ್ವತಗಳು*
ಹಿಮಾಲಯ (ಉತ್ತರ ಭಾರತ)
ಮಲಯ (ಕರ್ನಾಟಕ ಮತ್ತು ತಮಿಳನಾಡು) ,
ಸಹ್ಯಾದ್ರೀ (ಮಹಾರಾಷ್ಟ್ರ) ,
ಮಹೇಂದ್ರ (ಉಡಿಸಾ),
ವಿಂಧ್ಯಾಚಲ (ಮಧ್ಯಪ್ರದೇಶ),
ಅರವಲೀ (ರಾಜಸ್ಥಾನ),
ರೈವತಕ (ಗಿರನಾರ-ಗುಜರಾತ)
******************

*ಜ್ಯೋತಿರ್ಲಿಂಗಗಳು* (೧೨)
ಸೋಮನಾಥ ನಾಗೇಶ (ಗುಜರಾಥ),
ಮಲ್ಲಿಕಾರ್ಜುನ (ಆಂಧ್ರಪ್ರದೇಶ),
ರಾಮೇಶ್ವರ (ತಮಿಳನಾಡು),
ಮಹಾಕಾಲೇಶ್ವರ (ಉಜ್ಜೈನ),
ಓಂಕಾರೇಶ್ವರ (ಮಧ್ಯಪ್ರದೇಶ)
ಕೇದಾರನಾಥ (ಉತ್ತರಾಂಚಲ),
ವಿಶ್ವನಾಥ (ಉತ್ತರ ಪ್ರದೇಶ),
ಪರಳೀ ವೈಜನಾಥ,
ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ ,
ಭೀಮಾಶಂಕರ (ಎಲ್ಲ ಮಹಾರಾಷ್ಟ್ರ).
*****************

*ಪೀಠಗಳು* (೪)
ಶಾರದಾಪೀಠ (ದ್ವಾರಕಾ-ಗುಜರಾತ),
ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ),
ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ),
ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)
****************

*ಚಾರಧಾಮಗಳು*
ಬದ್ರಿನಾಥ (ಉತ್ತರಾಂಚಲ),
ರಾಮೇಶ್ವರಮ (ತಮಿಳನಾಡು),
ದ್ವಾರಿಕಾ (ಗುಜರಾತ),
ಜಗನ್ನಾಥಪುರೀ (ಉಡೀಸಾ).
**************

*ಸಪ್ತಪುರಿಗಳು*
ಅಯೋಧ್ಯಾ,
ಮಥುರಾ,
ಕಾಶೀ (ಎಲ್ಲ ಉತ್ತರ ಪ್ರದೇಶ),
ಹರಿದ್ವಾರ (ಉತ್ತರಾಂಚಲ),
ಕಾಂಚೀಪುರಂ (ತಮಿಳನಾಡು) ,
ಅವಂತಿಕಾ (ಉಜ್ಜೈನ - ಮ.ಪ್ರ.),
ದ್ವಾರಿಕಾ (ಗುಜರಾಥ).
********************

*ಚಾರಕುಂಭಗಳು*
ಹರಿದ್ವಾರ (ಉತ್ತರಖಂಡ),
ಪ್ರಯಾಗ (ಉತ್ತ ಪ್ರದೇಶ),
ಉಜ್ಜೈನ (ಮಧ್ಯ ಪ್ರದೇಶ) ,
ನಾಶಿಕ(ಮಹಾರಾಷ್ಟ್ರ)
***********************

*ಪವಿತ್ರ-ಸ್ಮರಣೀಯ ನದಿಗಳು*
ಗಂಗಾ ,
ಕಾವೇರಿ,
ಯಮುನಾ,
ಸರಸ್ವತೀ,
ನರ್ಮದಾ,
ಮಹಾನದೀ,
ಗೋದಾವರೀ,
ಕೃಷ್ಣಾ ,
ಬ್ರಹ್ಮಪುತ್ರಾ.
********************

*ಅಷ್ಟಲಕ್ಷ್ಮೀಯರು* (೮)
ಆದಿಲಕ್ಷ್ಮೀ ,
ವಿದ್ಯಾಲಕ್ಷ್ಮೀ ,
ಸೌಭಾಗ್ಯಲಕ್ಷ್ಮೀ,
ಅಮೃತಲಕ್ಷ್ಮೀ,
ಕಾಮಲಕ್ಷ್ಮೀ,
ಸತ್ಯಲಕ್ಷ್ಮೀ,
ಭೋಗಲಕ್ಷ್ಮೀ,
ಯೋಗಲಕ್ಷ್ಮೀ.
*********************

*ಯುಗಗಳು*(೪)
ಸತ್ಯಯುಗ,
ತ್ರೇತಾಯುಗ,
ದ್ವಾಪರಯುಗ,
ಕಲಿಯುಗ.
********************

*ಪುರುಷಾರ್ಥ* (೪)
ಧರ್ಮ ,
ಅರ್ಥ ,
ಕಾಮ ,
ಮೋಕ್ಷ.
***********************

*ಪ್ರಕೃತಿಯ ಗುಣಗಳು* (೩)
ಸತ್ವ ,
ರಜ ,
ತಮ.
*******************

*ನಕ್ಷತ್ರಗಳು* (೨೮)
ಅಶ್ವನೀ,
ಭರಣೀ,
ಕೃತಿಕಾ,
ರೋಹಿಣೀ,
ಮೃಗ,
ಆರ್ದ್ರಾ,
ಪುನರ್ವಸು,
ಪುಷ್ಯ,
ಆಶ್ಲೇಷಾ,
ಮೇಘಾ,
ಪೂರ್ವಾಫಾಲ್ಗುನೀ,
ಉತ್ತರಾ ಫಾಲ್ಗುನೀ,
ಹಸ್ತ,
ಚಿತ್ರಾ,
ಸ್ವಾತೀ,
ವಿಶಾಖಾ,
ಅನುರಾಧಾ,
ಜ್ಯೇಷ್ಠ, ಮೂಲ,
ಪೂರ್ವಾಷಾಢಾ,
ಉತ್ತರಾಷಾಢಾ,
ಶ್ರಾವಣ,
ಘನಿಷ್ಠಾ,
ಶತತಾರಕಾ,
ಪೂರ್ವಾಭಾದ್ರಪದಾ,
ಉತ್ತರಾಭಾದ್ರಪದಾ,
ರೇವತೀ,
ಅಭಿಜಿತ.

******************
*ದಶಾವತಾರ* (೧೦)
ಮತ್ಸ್ಯ,
ಕೂರ್ಮ,
ವರಾಹ,
ನರಸಿಂಹ,
ವಾಮನ,
ಪರಶುರಾಮ,
ರಾಮ,
ಕೃಷ್ಣ,
ಬುದ್ಧ,
ಕಲ್ಕಿ

ಪಂಚಮಗಳು

*ಪಂಚಮಗಳು*

1 *ಪಂಚಗವ್ಯ:*
ಹಾಲು,
ಮೊಸರು,
  ತುಪ್ಪ,
  ಗೋಮೂತ್ರ,
     ಗೋಮಯ.

2 *ಪಂಚಾಮೃತ :*
ಹಾಲು,
ಮೊಸರು,
   ತುಪ್ಪ,
    ಜೇನುತುಪ್ಪ,
     ಸಕ್ಕರೆ

3 *ಪಂಚಭೂತ :*
ಭೂಮಿ,
ನೀರು,
  ಬೆಂಕಿ,
   ವಾಯು,
    ಆಕಾಶ

4 *ಪಂಚಗುಣ :*
ಗಂಧ.
ರಸ,
  ರೂಪ,
   ಸ್ಪರ್ಶ,
    ಶಬ್ದ

5 *ಪಂಚೇದ್ರಿಯ :*
ಕಣ್ಣು,
ಕಿವಿ,
  ಮೂಗು,
   ನಾಲಗೆ,
    ಚರ್ಮ

6 *ಪಂಚಪ್ರಾಣ :*
ಪ್ರಾಣ,
ಅಪಾನ,
  ವ್ಯಾನ,
   ಉದಾನ,
    ಸಮಾನ

7 *ಪಂಚಪಲ್ಲವ :*
ನೆಲ್ಲಿ,
ಅಶ್ವತ್ಥ,
  ನೇರಳೆ,
   ಮಾವು,
    ಬಸರಿ

8 *ಪಂಚಾಂಗ :*
ತಿಥಿ,
ನಕ್ಷತ್ರ,
  ವಾರ,
   ಯೋಗ,
    ಕರಣ

9 *ಪಂಚರತ್ನ :*
ಚಿನ್ನ,
ಬೆಳ್ಳಿ,
  ಮುತ್ತು,
   ಮಾಣಿಕ್ಯ,
    ಹವಳ

10 *ಪಂಚಾಕ್ಷರಿ :*
ನ,
ಮಃ,
  ಶಿ,
   ವಾ,
    ಯ

11 *ಪಂಚಶೀಲ :*
ಅಹಿಂಸೆ,
ಸತ್ಯ,
  ಆಸ್ತೇಯ,
   ಅಪರಿಗ್ರಹ,
    ಬಹ್ಮಚರ್ಯ

12 *ಪಂಚಕಜ್ಜಾಯ :*
ಕಡಲೆಕಾಯಿ,
ಸಕ್ಕರೆ,
  ಎಳ್ಳು,
   ಹುರಿಕಡಲೆ,
    ಕೊಬ್ಬರಿ

13 *ಪಂಚಕನ್ಯೆಯರು :*
ಅಹಲ್ಯೆ,
ದ್ರೌಪದಿ,
  ಸೀತೆ,
   ತಾರಾ,
    ಮಂಡೋದರಿ

14 *ಪಂಚಪಾಂಡವರು :*
ಧರ್ಮರಾಯ,
ಭೀಮ,
  ಅರ್ಜುನ,
   ನಕುಲ,
    ಸಹದೇವ
                   🕉

ಗುರುಪೂಜೆಯ ಅಮೃತ ವಚನಗಳು

ಸಮರ್ಪಣೆಯಲ್ಲಿ ಸಾರ್ಥಕತೆ ಇದೆ.ಸಮರ್ಪಣೆಯಿಂದಾಗಿಯೇ ಗುಣ ಬೆಳೆಯುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.ನಶ್ವರವಾದ ಶರೀರವನ್ನು ಶಾಶ್ವತವಾದ ಸಮಾಜಕ್ಕೆ ಅರ್ಪಿಸಿದವರು ಅಮರರಾದರು.ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಸಮಾಜಕ್ಕೆ ಅದನ್ನು ಅರ್ಪಿಸುವುದು ವ್ಯಕ್ತಿತ್ವದ ವಿಕಾಸವೂ ಹೌದು, ಸಾರ್ಥಕ್ಯ ವೂ ಹೌದು
. - ಸ್ವಾಮಿ ವಿವೇಕಾನಂದ

: ಭಕ್ತಿ ಎಂದರೆ ವ್ಯಾಪಾರವಲ್ಲ ,ಅದು ಸಂಪೂರ್ಣ ಆತ್ಮಾರ್ಪಣೆ.ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೆ ನಮ್ಮ ಕೆಲಸ. ಇಂತಹ ಪರಿಪೂರ್ಣ ಆತ್ಮಾರ್ಪಣೆ ಇರುವ ಜನರು ಮಾತ್ರ ಭಗ್ನಾವಶೇಷಗಳಿಂದ ರಾಷ್ಟ್ರವನ್ನು ಭವ್ಯ ಶಿಖರಗಳಿಗೆ ಎತ್ತಬಲ್ಲರು.-
ಪ.ಪೂ.ಶ್ರೀ ಗುರೂಜಿ

ಜನರು ಎಷ್ಟು ಗಳಿಸಿದರು ಎಂಬ ವಿಚಾರ ದೊಡ್ಡದಲ್ಲ,ಎಷ್ಟು ಕೊಟ್ಟರು ಎಂಬುದೇ ಮಹತ್ವದ್ದು.-ಶ್ರೀ ರಾಮಕೃಷ್ಣ ಪರಮಹಂಸ

‬ ನಾವೆಲ್ಲ ಪ್ರಪಂಚಕ್ಕೆ ಋಣಿಗಳು,ಪ್ರಪಂಚ ನಮಗೆ ಏನನ್ನೂ ಕೊಡಬೇಕಾಗಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.ಪ್ರಪಂಚಕ್ಕೆ ಏನನ್ನಾದರೂ ಮಾಡುವುದು ನಮಗೊಂದು ಭಾಗ್ಯ.ಪ್ರಪಂಚಕ್ಕೆ ಸಹಾಯ ಮಾಡಿದರೆ ನಿಜವಾಗಿ ನಾವೇ ಉದ್ಧಾರವಗುವುದು.---
ಸ್ವಾಮಿ ವಿವೇಕಾನಂದ

ಅಕ್ಷಯ ತೃತೀಯ ವಿಚಾರ ಧಾರೆ

   ಅಕ್ಷಯ ತೃತೀಯ  ವಿಚಾರ ಧಾರೆ॥

'ಅಕ್ಷಯ ತೃತೀಯ'. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಅವುಗಳೆಂದರೆ: -

1) ನಾಲ್ಕು ಯುಗಗಳಾದ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ, ಸತ್ಯ ಅಥವಾ ಕೃತಯುಗ ಪ್ರಾರಂಭವಾಗಿದ್ದು 'ಅಕ್ಷಯ ತೃತೀಯ' ದಿನದಂದು.

2) ವೇದವ್ಯಾಸರು ಮಹಾಭಾರತವನ್ನು ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯಕನಾಗಿ ಗಣೇಶನು ನೆರವಾಗಿದ್ದು 'ಅಕ್ಷಯ ತೃತೀಯ' ದಿನದಂದು.

3) ಭಗೀರಥನ ಪ್ರಯತ್ನದಿಂದ ಗಂಗಾವತರಣವಾಗಿದ್ದು (ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದದ್ದು) 'ಅಕ್ಷಯ ತೃತೀಯ' ದಿನದಂದು.

4) ದಶಾವತಾರಗಳಲ್ಲಿ ಒಂದಾದ 'ಪರಶುರಾಮಾವತಾರ' ಪ್ರಾರಂಭವಾಗಿದ್ದು (ಹುಟ್ಟಿದ ದಿನ) 'ಅಕ್ಷಯ ತೃತೀಯ' ದಿನದಂದು.

5) ಸಂಪತ್ತಿನ ಒಡೆಯ ಮತ್ತು ಯಕ್ಷರ ರಾಜ 'ಕುಬೇರ'ನಿಗೆ ನಿಧಿ/ಸಂಪತ್ತು ದೊರೆತದ್ದು 'ಅಕ್ಷಯ ತೃತೀಯ' ದಿನದಂದು.

6) ಕುಚೇಲನಿಗೆ ಗೆಳೆಯ ಶ್ರೀಕೃಷ್ಣನಿಂದ ಅನುಗ್ರಹ ಪ್ರಾಪ್ತಿಯಾಗಿದ್ದು 'ಅಕ್ಷಯ ತೃತೀಯ' ದಿನದಂದು.

7) ಅಮೃತ ಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುತ್ತಿದ್ದ ವೇಳೆ ಲಕ್ಷ್ಮೀ ಹುಟ್ಟಿದ್ದು 'ಅಕ್ಷಯ ತೃತೀಯ' ದಿನದಂದು.

8) ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದ ವೇಳೆ ಶ್ರೀಕೃಷ್ಣನು ಆಕೆಯ ಮಾನವನ್ನು (ಸೀರೆಯನ್ನು ನೀಡುವುದರ ಮೂಲಕ) ಕಾಪಾಡಿದ್ದು 'ಅಕ್ಷಯ ತೃತೀಯ' ದಿನದಂದು.

ಅಕ್ಷಯ ತೃತೀಯ ದಿನದ ಬಗ್ಗೆ ಇವಿಷ್ಟು ಪುರಾಣದ ಸಂಗತಿಗಳಾದರೆ, ನಾವಿರುವ ಕಲಿಯುಗದಲ್ಲಿ ಈ ಕೆಳಗಿನ ಸಂಗತಿಗಳು ಈ ರೀತಿ ಇವೆ:

1) ಆಂಧ್ರಪ್ರದೇಶದ ವಿಶಾಖಾಪಟ್ಟಣಂ ಬಳಿ ಇರುವ ಸಿಂಹಾದ್ರಿ ಅಥವಾ ಸಿಂಹಾಚಲಂ ದೇವಾಲಯದಲ್ಲಿ (ಹಿರಣ್ಯಕಶಿಪುವನ್ನು ಮಹಾವಿಷ್ಣುವು 'ನರಸಿಂಹಾವತಾರ'ದಲ್ಲಿ ಸಂಹರಿಸಿದ ಸ್ಥಳ) ವರ್ಷದ 364 ದಿನಗಳ ಕಾಲವೂ ಮೂಲದೇವರಾದ ನರಸಿಂಹಸ್ವಾಮಿಯ ಮುಖವನ್ನು ಚಂದನದಿಂದ ಮರೆಮಾಡಿರುತ್ತಾರೆ. ಕಾರಣ ನರಸಿಂಹಸ್ವಾಮಿಯ ಅತಿ ಉಗ್ರಸ್ವರೂಪ ಮೂರ್ತಿಯನ್ನು ನೋಡಲಾಗುವುದಿಲ್ಲ. ಆ.ದ.ರೆ.... 'ಅಕ್ಷಯ ತೃತೀಯ' ದಿನದಂದು ಮಾತ್ರ ದೇವರ ಮುಖವನ್ನು ಚಂದನದಿಂದ ಮರೆಮಾಚದೇ ನೈಜ ದರ್ಶಕಕ್ಕೆ ಅವಕಾಶವಿರುತ್ತದೆ. ಹೀಗಾಗಿ ಅಂದು ಬಹುತೇಕ ಆಂಧ್ರಪ್ರದೇಶ ಮತ್ತು ಇನ್ನೀತರ ಭಾಗದ ಜನರು ಅಲ್ಲಿ ನೆರೆದಿರುತ್ತಾರೆ.

2) 'ಅಕ್ಷಯ ತೃತೀಯ' ದಿನದಂದು ತಮ್ಮ ಸಾಮರ್ಥ್ಯಾನುಸಾರ ಹೋಮವನ್ನು ನೇರವೇರಿಸಿದ್ದಲ್ಲಿ ಅಥವಾ ಸಾರ್ವಜನಿಕವಾಗಿ ಹೋಮ ಆಯೋಜಿಸಿದ ಸ್ಥಳದಲ್ಲಿ ಭಾಗವಹಿಸಿದರೆ "ಅಶ್ವಮೇಘ" ಯಾಗ ಮಾಡಿದ ಪುಣ್ಯಪ್ರಾಪ್ತಿಯಾಗುತ್ತದೆ.

3) 'ಅಕ್ಷಯ ತೃತೀಯ' ದಿನದಂದು ತಮ್ಮ ಶಕ್ತ್ಯಾನುಸಾರ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬಹುದಾಗಿದೆ. (ಧನಿಕರು ಮತ್ತು ಅನುಕೂಲಸ್ಥರು ಚಿನ್ನವನ್ನು ಖರೀದಿಸಬಹುದು, ಆದರೆ ಕಡ್ಡಯವಲ್ಲ) ಏನೂ ಬೇಡವೆಂದರೂ ಅಡಿಗೆಗೆ ಬಳಸುವ ಉಪ್ಪಿನ ಪ್ಯಾಕೇಟನ್ನಾದರೂ ಖರೀದಿಸಿದರೆ ಚಿನ್ನವನ್ನು ಖರೀದಿಸಿದ ಫಲವೇ ಪ್ರಾಪ್ತಿಯಾಗುತ್ತದೆ.

4) 'ಅಕ್ಷಯ ತೃತೀಯ' ದಿನದ ಇಡೀ ದಿನದ ಪ್ರತಿಯೊಂದು ಘಳಿಗೆಯೂ ಶುಭ ಮುಹೂರ್ತದ್ದೇ ಆಗಿರುತ್ತದೆ. ಅಂದು ಮಾತ್ರ ಯಾವುದೇ ರಾಹುಕಾಲ, ಗುಳಿಕಕಾಲ ಅಥವಾ ಇನ್ಯಾವುದೇ ಅಶುಭಕಾಲದ ಮಹತ್ವ ಇರುವುದಿಲ್ಲ.

ಈ ಮೇಲ್ಕಂಡ ವಿಷಯಗಳು 'ಅಕ್ಷಯ ತೃತೀಯ' ದಿನದ' ಮಹತ್ವವನ್ನು ಪಡೆದುಕೊಂಡಿದೆ. ಅದು ಬಿಟ್ಟು ಕೇವಲ ಚಿನ್ನವನ್ನು ಖರೀದಿಸಿದರೇ ಮಾತ್ರ 'ಅಕ್ಷಯ ತೃತೀಯ' ದಿನದ ಫಲಪ್ರಾಪ್ತಿ ಎಂದು ನಂಬುವುದಕ್ಕೆ ಯಾವುದೇ ತರಹದ ಶಾಸ್ತ್ರ ಆಧಾರವು ಇಲ್ಲ.

=>>::ಲೋಕಾ ಸಮಸ್ತಾ ಸುಖಿನೋ ಭವಂತು::<<=

ಸಾಮರಸ್ಯದ ನವ್ಯ ಯುಗಕೆ ನಿಮಗಿದೋ ಆಮಂತ್ರಣ

ಸಾಮರಸ್ಯದ ನವ್ಯ ಯುಗಕೆ ನಿಮಗಿದೋ ಆಮಂತ್ರಣ

ಸಮಯದ ಮಹತ್ವ

ಸಮಯವು ಅಮೂ‌ಲ್ಯವಾಗಿದೆ !

ಬದುಕಿನಲ್ಲಿ ಒಂದು ವರ್ಷಕ್ಕೆ ಏನು ಮಹತ್ವವಿದೆ ಎಂದು ತಿಳಿಯಲು.. ಪ್ರತಿ ವರುಷ ಜವಾಬ್ದಾರಿ ಘೋಷಣೆಯಾಗುವ ಕಾರ್ತಕರ್ತನನ್ನು ಕೇಳಿರಿ.

ಒಂದು ತಿಂಗಳ ಮಹತ್ವವನ್ನು ಅರಿಯಬೇಕಿದ್ದಲ್ಲಿ ಸಂಘ ಶಿಕ್ಷಾ ವರ್ಗಗಳಿಗೆ ರಜಾ ಹಾಕಿ ಬರುವ ಶಿಕ್ಷಕರು ಹಾಗೂ ಶಿಕ್ಷಾರ್ಥಿಗಳನ್ನು ಕೇಳಿರಿ.

ಒಂದು ವಾರದ ಮಹತ್ವವನ್ನು ಅರಿಯಬೇಕಿದ್ದಲ್ಲಿ ಸಾಪ್ತಾಹಿಕ ವರ್ಗವನ್ನೋ ಅಥವ ಸಾಂಘಿಕ್ ನಡೆಸುವ ಕಾರ್ಯಕರ್ತರನ್ನು ಕೇಳಿರಿ...

ಒಂದು ದಿನದ ಮಹತ್ವವನ್ನು ಅರಿಯಬೇಕಿದ್ದಲ್ಲಿ ಯುಗಾದಿಯ ದಿನ ಸರಸಂಘಚಾಲಕ್ ಪ್ರಣಾಮ್ ಅನ್ನು ಮಾಡದ ಕಾರ್ಯಕರ್ತರನ್ನು ಕೇಳಿರಿ...

ಒಂದು ಗಂಟೆಯ ಮಹತ್ವವನ್ನು ಅರಿಯಬೇಕಿದ್ದಲ್ಲಿ ಒಬ್ಬ ಶಾಖಾ ಮುಖ್ಯ ಶಿಕ್ಷಕನನ್ನು ಕೇಳಿರಿ.

ಒಂದು ನಿಮಿಷದ ಮಹತ್ವವನ್ನು ಅರಿಯಬೇಕಿದ್ದಲ್ಲಿ   ಗುರೂಜಿಯವರ ಸಂಸ್ಮರಣೆ ಕಾರ್ಯಕ್ರಮಕ್ಕೆ ಕೊನೆಯದಾಗಿ ಬಂದ ಸ್ವಯಂಸೇವಕನನ್ನು ಕೇಳಿರಿ..

ಒಂದು ಕ್ಷಣದ ಮಹತ್ವವನ್ನು ಅರಿಯಬೇಕಾದರೆ, ಗುಣಾತ್ಮಕ ಸಂಚಲನದಲ್ಲಿ ಹೆಜ್ಜೆ ತಪ್ಪಿದ ವ್ಯಕ್ತಿಯನ್ನು ಕೇಳಿರಿ.

ಇಡೀ ಜೀವಿತಾವಧಿಯ ಮಹತ್ವವನ್ನು ಅರಿಯಬೇಕಾದರೆ ಒಬ್ಬ ಪ್ರಚಾರಕರನ್ನು ಕೇಳಿರಿ.